Dakshina Kannada district, Karnataka
ಕೋಟಿ ಶೆಟ್ಟಿಯ ಶ್ರೀ ನೇಮಿನಾಥ ಬಸದಿ, ಮೂಡಬಿದಿರೆ
ಮಂಗಳೂರು ತಾಲೂಕಿನ ಪ್ರಾಂತ್ಯ ಗ್ರಾಮದ ಮೂಡಬಿದಿರೆ ಜೈನ ಪೇಟೆಯಲ್ಲಿ ಈ ಬಸದಿಯಿದ್ದು ಭಗವಾನ ಶ್ರೀ ನೇಮಿನಾಥ ಸ್ವಾಮಿಯನ್ನು ಮೂಲ ನಾಯಕನನ್ನಾಗಿ ಪೂಜಿಸಲಾಗುತ್ತದೆ. ಇದಕ್ಕೆ ತಾಗಿಕೊಂಡು ಪಕ್ಕದಲ್ಲಿ ಗುರು ಬಸದಿ ಇದೆ. ಇಲ್ಲಿ ಶ್ರೀ ನೇಮಿನಾಥ ಸ್ವಾಮಿಯನ್ನು ಮೂಲನಾಯಕನ್ನಾಗಿ ಸೂಚಿಸಲಾಗುತ್ತದೆ. ಇದು ತಾಲೂಕು ಕೇಂದ್ರದಿಂದ ಸುಮಾರು 1.5 ಕಿಲೋ ಮೀಟರ್ ದೂರದಲ್ಲಿದೆ. ಇದು ಚೌಟರ ಅರಮನೆಗೆ ಸಂಭಂಧಪಟ್ಟ ಬಸದಿಯಾಗಿದ್ದು ಏನಾದರೂ ವಿಶೇಷ ಕಾರ್ಯಕ್ರಮವಿದ್ದಲ್ಲಿ ಬಸದಿಗೆ ಬರುತ್ತಾರೆ. ಇದು ಕಾರ್ಕಳ ಜೈನ ಮಠದ ಧಾರ್ಮಿಕ ವ್ಯಾಪ್ತಿಗೆ ಒಳಪಟ್ಟಿದೆ. ಮೂಡಬಿದಿರೆಯಿಂದ ಜೈನ ಟೆಂಪಲ್ ರಸ್ತೆಯಲ್ಲಿ ಸಾಗಿದರೆ ಈ ಬಸದಿಯನ್ನು ಸಂಪರ್ಕಿಸಬಹುದು, ಇದರ ಆಡಳಿತವನ್ನು ಜೈನಮಠ ಮೂಡಬಿದಿರೆ ಹಾಗೂ ಚೌಟರ ಅರಮನೆಯವರು ನಡೆಸಿಕೊಂಡು ಬರುತ್ತಿದ್ದು ಬೇರೆ ವ್ಯವಸ್ಥಾಪಕ ಮಂಡಳಿ ಇಲ್ಲ, ಈ ಬಸದಿಯ ಪೂಜೆಯನ್ನು ಶ್ರೀ ಪಾರ್ಥನಾಥ ಇಂದ್ರರು ನಡೆಸುತ್ತಿದ್ದಾರೆ. ಇದನ್ನು ಗುರುಗಳ ಮಾರ್ಗ ದರ್ಶನದಲ್ಲಿ ಊರಿನ ಶ್ರಾವಕರು ಕಟ್ಟಿಸಿದರು. ಇದು ಶಿಲಾಮಯ ಮತ್ತು ಹಂಚಿನ ಮಾಡನ್ನು ಹೊಂದಿದೆ, ಬಸದಿಗೆ ಮೇಗಿನ ನೆಲೆ ಇದೆ. ಆದರೆ ಅಲ್ಲಿನ ಎಲ್ಲಾ ಮೂರ್ತಿಗಳನ್ನು ಕೆಳಗೆ ತಂದಿಡಲಾಗಿದೆ. ಇಲ್ಲಿ ಪದ್ಯಾವತಿ ಆಮ್ಮನವರ ಮತ್ತು ಬಹದೇದರ ಮೂರ್ತಿಯಿದ್ದು ಇವುಗಳಿಗೆ ನಿತ್ಯವೂ ಪೂಜೆ ನಡೆಯುತ್ತಿದೆ. ಈ ಬಸದಿಗೆ ಮಾನಸ್ತಂಭ ಇಲ್ಲ, ಬಸದಿಯ ಆವರಣದಲ್ಲಿ ಒಂದು ಪಾರಿಜಾತ ಹೂವಿನ ಗಿಡವಿದ್ದು, ಉಳಿದ ಹೂವಿನ ಗಿಡಗಳನ್ನೂ ಕಾಣಬಹುದು. ಬಸದಿಗೆ ಪ್ರವೇಶಿಸುವಾಗ ಸಿಗುವ ಇಕ್ಕೆಲಗಳ ಗೋಪುರವನ್ನು ವಿಶೇಷ ಶುಭ ಸಮಾರಂಭದಂದು ಶ್ರಾವಕರಿಗೆ ಕುಳಿತುಕೊಳ್ಳಲು ಬಳಸಲಾಗುತ್ತದೆ. ಗೋಪುರದ ಬದಿಯಲ್ಲಿ ನೈವೇದ್ಯ ಕೋಣೆ ಇದೆ. ಇಲ್ಲಿ ಹಿಂದೆ ಯಾವುದೇ ಮುನಿಗಳು ಇದ್ದ ಬಗ್ಗೆ ಮಾಹಿತಿ ಇಲ್ಲ, ಬಸದಿಯ ಪ್ರಾರ್ಥನ ಮಂಟಪಕ್ಕೆ ಹತ್ತುವಲ್ಲಿ ಎರಡೂ ಬದಿಗಳಲ್ಲಿ ದ್ವಾರಪಾಲಕರ ಅಂದವಾದ ಚಿತ್ರಗಳಿವೆ, ಆದರೆ ಕಲ್ಲಿನ ಮೂರ್ತಿಗಳಿಲ್ಲ. ಪ್ರಾರ್ಥನಾ ಮಂಟಪದಲ್ಲಿ ಎರಡು ಕಂಬಗಳಿರುವ ಮಂಟಪವಿದ್ದು, ಅದರಲ್ಲಿ ಜಯಘಂಟೆ, ಜಾಗಟೆಗಳನ್ನು ತೂಗಿ ಹಾಕಲಾಗಿದೆ. ಇಲ್ಲಿನ ಕಂಬಗಳಲ್ಲಾಗಲೀ ಅಥವಾ ಗೋಡೆಗಳಲ್ಲಾಗಲೀ ಯಾವುದೇ ಚಿತ್ರಗಳು ಕಂಡು ಬರುವುದಿಲ್ಲ.
ಪಾರ್ಥನಾ ಮಂಟಪದಿಂದ ಮುಂದುವರಿದು ತೀರ್ಥಂಕರ ಸ್ವಾಮಿಯ ಬಳಿಗೆ ಹೋಗುವಾಗ ಸಿಗುವ ಮಂಟಪವನ್ನು ತೀರ್ಥ ಮಂಟಪವೆಂದು ಕರೆಯುತ್ತಾರೆ. ಗಂಧಕುಟಿಯು ಗರ್ಭಗುಡಿಯಲ್ಲಿದ್ದು ಅದರ ಬಳಿಯಲ್ಲಿ ಶ್ರುತ,ಬ್ರಹ್ಮದೇವರು ಇತ್ಯಾದಿ ಮೂರ್ತಿಗಳಿದ್ದು ಇವುಗಳಿಗೆ ನಿತ್ಯವೂ ಪೂಜೆ ನಡೆಯುತ್ತಿದೆ. ಇಲ್ಲಿ ಬ್ರಹ್ಮ ಯಕ್ಷ ಹಾಗೂ ಮಾತೆ ಪದ್ಮಾವತಿ, ಕೂಷ್ಮಾಂಡಿನಿ ದೇವಿ ಜ್ವಾಲಾಮಾಲಿನಿಯನ್ನು ಯಕ್ಷಿಯರನ್ನಾಗಿ ಪೂಜಿಸಲಾಗುತ್ತದೆ. ಮಾತೆ ಪದ್ಮಾವತಿ ದೇವಿಯ ಮೂರ್ತಿಯು ಪಶ್ಚಿಮಕ್ಕೆ ಮಖ ಮಾಡಿಕೊಂಡಿದ್ದು, ಸೀರೆ ಉಡಿಸಿ, ಬಳೆ ತೊಡಿಸಿ ಅಲಂಕಾರ ಮಾಡಿ ಪೂಜಿಸಲಾಗುತ್ತದೆ. ಪದ್ಮಾವತಿ ದೇವಿಯ ಕಾಲಿನ ಬಳಿಯಲ್ಲಿ ಕುಕ್ಕುಟ ಸರ್ಪವಿದೆ. ಇಲ್ಲಿ ಆಮ್ಮನವರೆದುರು ಹೊಂಬುಚ್ಚದಂತೆ ಹೂ ಹಾಕಿ ನೋಡುವ ಕ್ರಮ ಇದೆ. ಅಮ್ಮನವರಲ್ಲಿ ರಾಹು ಗ್ರಹಚಾರ ನಿವಾರಣೆಗೆ ಹರಕೆ ಹೇಳಿಕೊಂಡರೆ ಅದು ಸಿದ್ದಿಯಾಗುತ್ತದೆಂಬ ನಂಬಿಕೆ ಜನರಲ್ಲಿದೆ. ಗ್ರಹಚಾರ ನಿವಾರಣೆಯಾದ ಕೂಡಲೇ ದೇವಿಗೆ ಪುಂಜ ನಂದಾದೀಪವನ್ನು ಅರ್ಪಿಸುತ್ತಾರೆ.
ಇಲ್ಲಿನ ಜಿನಬಿಂಬಗಳಲ್ಲಿ ಯಾವುದೇ ಬರವಣಿಗೆಗಳು ಕಂಡುಬರುವುದಿಲ್ಲ, ಖಡ್ಡಾಸನ ಭಂಗಿಯಲ್ಲಿರುವ ಮೂಲ ಸ್ವಾಮಿಯ ಬಿಂಬವು ಕಪ್ಪು ಶಿಲೆಯಿಂದ ಮಾಡಲ್ಪಟ್ಟಿದ್ದು, ಸುಮಾರು ಮೂರುವರೆ ಅಡಿ ಎತ್ತರವಿದೆ. ಇಲ್ಲಿ ಮಕರ ತೋರಣ ಪ್ರಭಾವಳಿ ಕಂಡುಬರುವುದಿಲ್ಲ. ಮೂಲ ಸ್ವಾಮಿಗೆ ನಿತ್ಯವೂ ಕ್ಷೀರಾಭಿಷೇಕ, ಜಲಾಭಿಷೇಕ, ಪಂಚಾಮೃತಾಭಿಷೇಕ, ಇತ್ಯಾದಿಗಳನ್ನು ಮಾಡಲಾಗುತ್ತದೆ. ಬಸದಿಯಲ್ಲಿ ಬೆಳಿಗ್ಗೆ ಒಂದು ಹೊತ್ತು ಮಾತ್ರ ಪೂಜೆ ನಡೆಯುತ್ತದೆ. ವಾರ್ಷಿಕೋತ್ಸವ ರಥೋತ್ಸವಗಳ ಆಚರಣೆಯಿಲ್ಲ, ಆದರೆ ದೀಪಾವಳಿ, ನೂಲಹುಣ್ಣಿಮೆ, ಜೀವದಯಾಷ್ಟಮಿ ಮುಂತಾದ ಪಂಚಪರ್ವಗಳನ್ನು ನಡೆಸಲಾಗುತ್ತದೆ.
ಬಸದಿಯ ಬಲ ಮೂಲೆಯಲ್ಲಿ ಕ್ಷೇತ್ರಪಾಲನ
ಸನ್ನಿಧಿಯಿದ್ದು, ಅಲ್ಲಿ ಕ್ಷೇತ್ರಪಾಲ, ನಾಗನಕಲ್ಲು, ತ್ರಿಶೂಲಗಳನ್ನು ಒಂದೇ ಪೀಠದ ಮೇಲೆ ಪ್ರತಿಷ್ಠಾಪಿಸಲಾಗಿದೆ. ಸುತ್ತಲೂ ಅಷ್ಟದಿಕ್ಷಾಲಕರ ಕಲ್ಲುಗಳಿದ್ದು ಬಸದಿಗೆ ಉತ್ತಮ ರಕ್ಷಣೆ ಒದಗಿಸುತ್ತಿವೆ. ಬಸದಿಯ ಸುತ್ತಲೂ ಮುರಕಲ್ಲಿನಿಂದ ಮಾಡಲ್ಪಟ್ಟ ಭದ್ರವಾದ ಪ್ರಕಾರ ಗೋಡೆಯಿದೆ. ಇದಕ್ಕೆ ಸಂಬಂಧಿಸಿ ಕಛೇರಿ, ಕಲಾಭವನ, ಸಭಾಭವನಗಳು ಯಾವೂದೂ ಇಲ್ಲ. ಇಲ್ಲಿಗೆ ಈವರೆಗೆ ಭೇಟಿ ನೀಡಿದ ಮುನಿಗಳು, ಭಟ್ಟಾರಕರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಬಸದಿಯಲ್ಲಿ ನೀರಿನ ಸರಬರಾಜಿಗೆ ಸಂಬಂಧಿಸಿದಂತೆ ಯಾವುದೇ ಸೌಕಯ್ಯಗಳಿಲ್ಲ. ಆದರೂ ಮುಂದೆ ಯಾವುದೇ ಸೌಕಯ್ಯಗಳನ್ನು ಮಾಡುವ ಯೋಜನೆ ಇಲ್ಲ. ಚೌಟರ ಅರಮನೆಯವರು ಕೊಡುವ ಅಲ್ಪ ಸಹಾಯವೇ ಇದರ ಮೂಲ ಆದಾಯವಾಗಿದೆ. ಬಸದಿಗೆ ಆರ್ಥಿಕ ಸಹಾಯ ಕೊಡಬೇಕೆಂದು ಸರಕಾರಕ್ಕೆ ವಿನಂತಿಸಿಕೊಂಡಿಲ್ಲ. ಆದರೆ ಬಸದಿಗೆ ಸರಕಾರದಿಂದ ತಸ್ಪೀಕ್ ರೂಪದಲ್ಲಿ ಸ್ವಲ್ಪ ಹಣ ಬರುತ್ತದೆ. ಬಸದಿಗೆ ಯಾವುದೇ ಸಹಾಯ ಬಾರದಿದ್ದರೂ ಪೂಜೆ ಪುರಸ್ಕಾರಗಳನ್ನು ಯಥಾವತ್ತಾಗಿ ನಡೆಸಿಕೊಂಡು ಹೋಗಬಹುದೆಂಬ ಧೈರ್ಯವನ್ನು ಇಂದ್ರರು ವ್ಯಕ್ತಪಡಿಸಿದರು. ಬಸದಿಯ ಇಂದ್ರರಿಗೆ ಆದಾಯದ ಮೂಲವನ್ನು ವ್ಯವಸ್ಥೆ ಮಾಡಿ ನಿತ್ಯವೂ ಮೂರು ಹೊತ್ತು ಪೂಜೆ ನಡೆಯುವಂತಾಗ ಬೇಕೆಂದು ಇಂದ್ರರು ಆಶಯ ವ್ಯಕ್ತಪಡಿಸಿದರು.
7am to 8.30am
| # | Name | Contact | Vehicle Type |
|---|---|---|---|
| 1 | Dharmendra Indra | 9845408666 | dezire - 5seater, Ertiga - 7 seater |
| # | Name | Contact | Location | |
|---|---|---|---|---|
| 1 | Hotel Padival | 9850299795 | View Location |
| # | Name | Contact | Location |
|---|---|---|---|
| 1 | Padiwals Restaurant (Managed By Jains) | 08258237065 | View Location |
| 2 | Arihanth Ahaar | 08277454582 | View Location |