Nerenki.com

Pushpadantha Swamy Basadi Bijila

Dakshina Kannada district, Karnataka

ಶ್ರೀ ಪುಷ್ಪದಂತ ಸ್ವಾಮಿ ಬಸದಿ, ಬಿಜಿಲ

ಶ್ರೀ ಪುಷ್ಪದಂತ  ಬಸದಿಗೆ ಹೋಗಲು ಇರುವ ದಾರಿ ಬೆಳ್ತಂಗಡಿಯಿಂದ ಮಡಂತ್ಯಾರಿಗೆ ಹೋಗಿ ಅಲ್ಲಿಂದ ಪಾಂಡವರಕಲ್ಲು ಎಂಬ ಊರಿಗೆ ಹೋಗುವ ಮಾರ್ಗದಲ್ಲಿ ಮುಂದೆ ಬಿಜಿಲ ಎಂಬ ಊರಿನಲ್ಲಿ ಅಡಿಕೆ ತೋಟ ಮತ್ತು ವನಪದೇಶದ ಮಧ್ಯದಲ್ಲಿದೆ. ಇಲ್ಲಿಗೆ ಬೆಳ್ತಂಗಡಿಯಿಂದ ಸುಮಾರು 30 ಕಿ.ಮೀ.ದೂರವಿದೆ. ಈ ಬಸದಿಯು ಬಿಜಿಲ ಎಂಬ ಗ್ರಾಮಕ್ಕೆ ಸೇರಿದೆ. ಹಾಗೆಯೇ ಈ ಬಸದಿಗೆ ಹೋಗಬೇಕಾದರೆ ನಾವೇ ಸ್ವತಃ ಆಟೋ ಮಾಡಿಕೊಂಡು ಹೋಗಬೇಕು. ಅಲ್ಲಿಗೆ ಹೋಗಲು ಬೇರೆ ಯಾವುದೇ ವಾಹನಗಳ ಸೌಲಭ್ಯವಿಲ್ಲ. ಬೆಳ್ತಂಗಡಿಯಿಂದ ಮಡಂತ್ಯಾರಿಗೆ ಹೋಗಿ ಅಲ್ಲಿ ಇಳಿದು ಅಲ್ಲಿಂದ ಆಟೋ ಮಾಡಿಕೊಂಡು ಹೋಗಿದ್ದೆವು.

ಬಿಜಿಲದ ಈ ಬಸದಿಯಲ್ಲಿ ಪೂಜೆಗೊಳ್ಳುವ ಮುಖ್ಯ ತೀರ್ಥಂಕರರು ಒಂಭತ್ತನೇ ತೀರ್ಥಂಕರರಾದ ಶ್ರೀ ಪುಷ್ಪದಂತ ಸ್ವಾಮಿಯವರು. ಈ ತೀರ್ಥಂಕರರ ಮೂರ್ತಿಯು ಶಿಲೆಯದ್ದಾಗಿದ್ದು ಪ್ರಭಾವಲಯವು ಅರ್ಧ ವೃತ್ತಾಕಾರದಲ್ಲಿದೆ. ತೀರ್ಥಂಕರರ ಮೂರ್ತಿಯು ಖಡ್ಗಾಸನ ಭಂಗಿಯಲ್ಲಿದೆ. ಪುಷ್ಪದಂತ ಸ್ವಾಮಿಯ ಎಡಬದಿಯಲ್ಲಿ ಅಜಿತ ಯಕ್ಷ, ಬಲಬದಿಯಲ್ಲಿ ಮಹಾಕಾಳಿ ಯಕ್ಷಿ ಇದ್ದಾರೆ. ಇವರ ಮೂರ್ತಿ ಚಿಕ್ಕದಾದ್ದರಿಂದ ಆಯುಧಗಳು ಸರಿಯಾಗಿ ಗೊತ್ತಾಗುವುದಿಲ್ಲ. ಮೂರ್ತಿಯ ಕೆಳಗೆ ಮಕರ ಲಾಂಛನವಿದೆ. ತೀರ್ಥಂಕರರ ಮೂರ್ತಿಯು ದಿವ್ಯ ಧ್ವನಿಯ ನಗುಮುಖದಿಂದ ಇದ್ದು, ಪ್ರಸನ್ನತೆಯನ್ನು ಸೂಸುವಂತಿದೆ. ಬಸದಿಯ ಮೂಲ ನಾಯಕ ತೀರ್ಥಂಕರರ ಮೂರ್ತಿಗೆ ಚಾಮರ, ಮುಕ್ಕೊಡೆ, ಪುಷ್ಪವೃಷ್ಟಿ, ದಿವ್ಯ ಧ್ವನಿ ಮುಂತಾದ ಅಷ್ಟಮಹಾಪ್ರಾತಿಹಾರ್ಯಗಳನ್ನು ತೋರಿಸಲಾಗಿದೆ. ಜೀವನದಲ್ಲಿ ಶುಕ್ರಗ್ರಹನಿಂದ ಬರುವ ದೋಷಗಳ ಪರಿಹಾರಕ್ಕೆ ಶ್ರೀ ಪುಷ್ಪದಂತ ಸ್ವಾಮಿಯನ್ನು ಆರಾಧಿಸಲಾಗುತ್ತದೆ. ಶ್ರೀ ಪುಷ್ಪದಂತ ಸ್ವಾಮಿಯವರಿಗೆ ಜಲ, ನಾರಿಕೇಳ, ಕ್ಷೀರ, ಮಾಡಲಾಗುತ್ತದೆ. ಗಂದಗಳೆಂಬ ಪವಿತ್ರ ತೀರ್ಥಗಳಿಂದ ಅಭಿಷೇಕವನ್ನು

 ಈ ಬಸದಿಯು ಸುಮಾರು KS 1740 ರಲ್ಲಿಯೇ ಇತ್ತೆಂದು ನಮಗೆ ಬಸದಿ ಪ್ರಾಂಗಣದ ಉತ್ತರದಿಕ್ಕಿನ ಬಾಗಿಲಿನ ಮೇಲೆ ಬರೆದಿರುವ ಶಾಸನದಿಂದ ತಿಳಿದು ಬರುತ್ತದೆ ಇಂದರಿದ್ದಾರೆ. ಅವರ ಹೆಸರು ಶ್ರೀ ಜಯಂಧರ ಇಂದ

ಇಲ್ಲಿ ದಿನಕ್ಕೆ ಎರಡು ಬಾರಿ ಅಂದರೆ ಬೆಳಿಗ್ಗೆ ಮತ್ತು ಸಂಜೆ ಅಭಿಷೇಕ ಪೂಜೆಗಳು ನಡೆಯುತ್ತವೆ. ಬಸದಿಯ గంధకుటియల్లి భగవానా బామబలి. యక్ష మశు 24ನೇ ತೀರ್ಥಂಕರ ಶ್ರೀ ಮಹಾವೀರ ಸ್ವಾಮಿ ಹಾಗೂ ಬೇರೆ ಬೇರೆ ಸಣ್ಣ ಮೂರ್ತಿಗಳು ಇವೆ. ಹೆಚ್ಚಿನವು ಗಂಧಕುಟ ಯಲ್ಲಿವೆ. ಅವುಗಳ ಮೇಲೆ ಲಾಂಛನ ಬಿಟ್ಟರೆ ಬೇರೆ ಏನೂ ಇಲ್ಲ.

ಈ ಬಸದಿಯಲ್ಲಿ ಪದ್ಮಾವತಿ ಅಮ್ಮನವರ ಶಿಲಾ ಮೂರ್ತಿ ಇದೆ. ಪದ್ಮಾವತಿ ಅಮ್ಮನವರನ್ನು ದೇವಕೋಷ್ಠದಲ್ಲಿ ಇಡಲಾಗಿದೆ. ಈ ಮೂರ್ತಿಯು ಉತ್ತರ ದಿಕ್ಕಿಗೆ ಮುಖ ಮಾಡಿಕೊಂಡಿದೆ. ಈ ಮೂರ್ತಿಗೆ ಸೀರೆ ಉಡಿಸಿ ಬಳೆ ಇತ್ಯಾದಿಗಳನ್ನು ಹಾಕಲಾಗಿದೆ. ಇಲ್ಲಿ ಶುಕ್ರವಾರ ವಿಶೇಷ ಪೂಜೆಯನ್ನು ನಡೆಸಲಾಗುತ್ತದೆ. ಈ ವಿಶೇಷ ಪೂಜೆಯ ಸಮಯದಲ್ಲಿ ಚಕ್ಕುಲಿ, ಅಪ್ಪ ಮುಂತಾದ ವಸ್ತುಗಳನ್ನು ಅಮ್ಮನವರಿಗೆ ಸಮರ್ಪಿಸಲಾಗುತ್ತದೆ. ಆ ಸಮಯದಲ್ಲಿ ಹೂವು ಹಾಕಿ ನೋಡುವ ಕ್ರಮ ಇದೆ. ಪದ್ಮಾವತಿ ದೇವಿಗೆ ಕುಂಕುಮ ಅರ್ಚನೆ, ಹೂವಿನ ಪೂಜೆ, ಮತ್ತಿತರ ಪೂಜೆಗಳು ಹರಕೆಯಾಗಿ ಮಾಡಲ್ಪಡುತ್ತವೆ. ಇಲ್ಲಿಯ ಇಂದ್ರರ ಬಳಿ ಇಲ್ಲಿ ಯಾವುದಾ ದರೂ ಹರಕೆಯನ್ನು ಹೇಳಿಕೊಂಡು ಈಡೇರಿರುವ ಘಟನೆಗಳು ಇವೆಯೇ ಎಂದು ಕೇಳಿದಾಗ ಇಲ್ಲಿಯ ಇಂದ್ರರು ಅನೇಕ ಇವೆ. ಅವುಗಳ ಪೈಕಿ ಒಂದನ್ನು ಹೇಳುತ್ತೇನೆ ಎಂದು ಹೇಳತೊಡಗಿದರು. ಪರಮಾಶ್ಚರ್ಯವಾಗಿ ದೇವಿಯ ಮಹಿಮೆ ಗೊತ್ತಾಯಿತು. ಇಲ್ಲಿಯೇ ಪಕ್ಕದ ಊರಿನಲ್ಲಿ ಒಬ್ಬ ಜೈನರ ಮನೆಯಲ್ಲಿ ಒಂದು ಚಿನ್ನದ ಸರ ಕಾಣೆಯಾಗಿತ್ತು. ಎಷ್ಟು ಸಿಗಲಿಲ್ಲ. ವ್ಯಕ್ತಿಯು ಬಿಜಿಲದ ಹೇಳಿಕೊಂಡರು. ಆ ನಂತರ ಅವರಿಗೆ ಆ ಸರವು ಸಿಕ್ಕಿತು ಎಂದರು.

ಬಸದಿಯಲ್ಲಿ ಬ್ರಹ್ಮದೇವರ ಮೂರ್ತಿ ಇದೆ. ಈ ಬ್ರಹ್ಮ ದೇವರ ಮೂರ್ತಿಯು ಕುದುರೆಯ ಮೇಲೆ ಕುಳಿತು ಕೊಂಡಿರುವ ಭಂಗಿಯಲ್ಲಿದೆ. ಈ ಬ್ರಹ್ಮ ದೇವರ ಮೂರ್ತಿಯ ಕೆಳಗೆ ಯಾವುದೇ ರೀತಿಯಾದಂತಹ ಆಕೃತಿಗಳು ಕಂಡುಬರುವುದಿಲ್ಲ. ಬಸದಿಯ ಗರ್ಭಗೃಹದಿಂದ ಹೊರಗೆ ಬರುತ್ತಾ ಇರುವಂತೆ ತೀರ್ಥ ಮಂಟಪವಿಲ್ಲ. ಘಂಟಾಮಂಟಪವಿದೆ ಮತ್ತು ಪ್ರಾರ್ಥನಾ ಮಂಟಪವಿದೆ. ವಿಶೇಷ ಪೂಜೆಯ ಸಮಯದಲ್ಲಿ ಜನರು ಪ್ರಾರ್ಥನಾ ಮಂಟಪದಲ್ಲಿಯೇ ಕುಳಿತುಕೊಳ್ಳುತ್ತಾರೆ. ಇಲ್ಲಿಯ ಗೋಡೆಗಳ ಮೇಲೆ ಹೊರಗೆ ದ್ವಾರಪಾಲಕರ ಪೈಂಟಿಂಗ್ ಚಿತ್ರಗಳು ಇವೆ. ಈ ಎರಡು ಮಂಟಪಗಳ ನೆಲವು ಟೈಲ್ಸ್‌ ನಿಂದಾಗಿದೆ. ಘಂಟಾಮಂಟಪದ ಬಾಗಿಲ ಮೇಲೆ ದ್ವಾರಬಂಧದಲ್ಲಿ "ಶ್ರೀ ಪಾರ್ಶ್ವನಾಥಾಯ ನಮಃ ಬಿಜಿಲದ ಧರ್ಮಣ ಶೆಟ್ಟಿ, ಚಿಕ್ಕಮ್ಮ. ಮಗ ಪೇರಣ ಸೆಟ್ಟಿ ಕಟ್ಟಿಸಿದ ಸಮೇತ" ಎಂಬ ಬರವಣಿಗೆ ಕಂಡುಬಂದಿತ್ತು. ಮತ್ತು ಅದೇ ಬಾಗಿಲ ಮೇಲೆ ಗಂಡಭೇರುಂಡ ಪಕ್ಷಿಯ ಚಿತ್ರವಿದೆ. ಅದರ ಕೆಳಗೆ ಪರ್ಯಂಕಾಸನದಲ್ಲಿ ಕುಳಿತಿರುವ ಜಿನೇಶ್ವರರ ಶಿಲ್ಪ ಇದೆ.

ಬಸದಿಯ ಎದುರಿಗೆ ಗೋಪುರವಿದೆ. ಅದರ ಗೋಡೆಯ ಮೇಲೆ ಬಣ್ಣದ ಚಿತ್ರಗಳು ಯಾವುದೂ ಇಲ್ಲ. ಈ ಗೋಪುರವನ್ನು ವಿಶೇಷ ಪೂಜಾ ಸಮಯದಲ್ಲಿ ಕುಳಿತುಕೊಳ್ಳಲು ಬಳಸಲಾಗುತ್ತದೆ. ಇಲ್ಲಿಯ ಕಂಬಗಳು ಶಿಲೆಯದ್ದಾಗಿದ್ದು, ಯಾವುದೇ ಚಿತ್ರಗಳನ್ನು ಹೊಂದಿಂಬಗಳು ಈ ಬಸದಿಯ ಗೋಪುರದ ದಕ್ಷಿಣ ದಿಕ್ಕಿನಲ್ಲಿ ಪಂಜುರ್ಲಿ ದೈವದ ಕೋಣೆಯಿದೆ. ಈ ಬಸದಿಯಲ್ಲಿ ಯಾವುದೇ ಕಾರ್ಯಾಲಯ, ಕಛೇರಿ ಇತ್ಯಾದಿಗಳು ಇಲ್ಲ.

ಇಲ್ಲಿಯ ಗರ್ಭಗೃಹದ ಮೇಲೆ ಮೇಗಿನ ನೆಲೆ ಅಲ್ಲಿ ಯಾವ ತೀರ್ಥಂಕರರ ಮೂರ್ತಿಯನ್ನೂ ಇಟ್ಟಿದೆ. ಗರ್ಭಗೃಹದ ಸುತ್ತಲೂ ಅಂಗಳ ಇದೆ. ಪರಿಸರದಲ್ಲಿ ಪಾರಿಜಾತ ಇಲ್ಲಿ ಅವರ ಜೊತೆಗೆ ನಾಗದೇವರ ಎರಡು ಮೂರ್ತಿಗಳು ಇವೆ. ಅದರ ಪಕ್ಕ ಗುಂಡುಕಲ್ಲು ಮತ್ತು ತ್ರಿಶೂಲಗಳು ಇವೆ. ಈ ಕ್ಷೇತ್ರಪಾಲನ ಕಾರಣಿಕದ ಬಗ್ಗೆ ನಾವು ಅಲ್ಲಿಯ ಇಂದ್ರರಲ್ಲಿ ಕೇಳಿದಾಗ ಆಗ ಅವರು ನಮ್ಮ ಇಷ್ಟಾರ್ಥಗಳು ಎಲ್ಲಾ ನಡೆಯುತ್ತದೆ. ನಾಗದೋಷ ಪರಿಹಾರವಾಗುತ್ತವೆ ಎಂದರು. ಹರಕೆಗಳನ್ನು ಇಲ್ಲಿ ಕೊಡಲಾಗುತ್ತದೆ. ಹರಕೆಗಳನ್ನು ನೀಡಿ ಯೋಜನೆ ಈಡೇರಿದವರು ತುಂಬಾ ಜನ ಬಂದು ಸಂತೋಷವಾಗಿ ಹೋಗಿರುವರು ಎಂದು ನಮಗೆ ತಿಳಿಸಿದರು. ಬಲಿಕಲ್ಲುಗಳು ಇವೆ. ಅಷ್ಟ ದಿಕ್ಷಾಲಕರ ಕಲ್ಲುಗಳಿವೆ. ಮತ್ತು ಇಲ್ಲಿಯ ಘಂಟಾಮಂಟಪದ ಬಾಗಿಲಿನಲ್ಲಿ ಮೇಲೆ ಹೇಳಿದಂತೆ ಈ ಬಸದಿಯನ್ನು ಕಟ್ಟಿಸಿದವರ ಹೆಸರುಗಳನ್ನು ಬರೆಯಲಾಗಿದೆ. ಅದರ ಅನುಸಾರ ಬಿಜಿಲದ ಧರ್ಮಣ ಶೆಟ್ಟಿ- ಅವರ ಚಿಕ್ಕಮ್ಮ ಮತ್ತು ಅವರ ಮಗ ಪೇರಣ ಶೆಟ್ಟಿ ಈ ಮೂವರು ಒಟ್ಟು ಸೇರಿ ಈ ಬಸದಿಯನ್ನು ಕಟ್ಟಿಸಿದ್ದರು. ಉತ್ತರ ದಿಕ್ಕಿನ ಬಾಗಿಲ ದಾರಂದದ ಮೇಲಿನ ಬರವಣಿಗೆ ಹಾಗೂ ಎದುರಿಗಿರುವ ಗಂಡಭೇರುಂಡನ ಆಕೃತಿಯಿಂದಾಗಿ ಈ ಬಸದಿಯು ಕ್ರಿ.ಶ.1763ಕ್ಕಿಂತ ಮೊದಲು ನಿರ್ಮಾಣ ವಾಗಿರಬೇಕು ಎಂದು ಹೇಳಬಹುದು. ಹೂವಿನ ಗಿಡ ಇದೆ. ಇಲ್ಲಿ ಕೇತ್ರಪಾಲನ ಸನ್ನಿಧಾನ ಇದೆ.

 ಈ ಬಸದಿ ಯನ್ನು ಜೀರ್ಣೋದ್ಧಾರ ಮಾಡಿರುವವರು ಬಿಜಿಲದ ಬಳ್ಳಾಲ ಕುಟುಂಬದವರು. ಈ ಬಸದಿಯು ಕಾರ್ಕಳ ಮಠ ವ್ಯಾಪ್ತಿಗೆ ಸೇರಿದೆ.
ಈ ಬಸದಿಯ ವ್ಯವಸ್ಥಾಪನಾ ಆಡಳಿತದವರು ಬಿಜಿಲದ ಬಳ್ಳಾಲ ಕುಟುಂಬದವರು, ಈ ಬಸದಿಗೆ ವರ್ಷಂ ಪ್ರತಿ 16 ಮುಡಿ ಅಕ್ಕಿಯನ್ನು ಬಳ್ಳಾಲರು ಕೊಡುತ್ತಾರೆ.  ಈ ಬಸದಿಯ ವೈಶಿಷ್ಟ್ಯವೇನೆಂದರೆ ಇದು ಬೆಟ್ಟ ಗುಡ್ಡಗಳ ನಡುವಿನಲ್ಲಿ ಇದ್ದು, ಸುತ್ತಲೂ ಪ್ರಾಕೃತಿಕ ಪರಿಸರವನ್ನು ಹೊಂದಿದ್ದು, ಇಲ್ಲಿ ಇಂದ್ರರ ಮತ್ತು ವಾದ್ಯದವರ ಮನೆ ಇದೆ. ಈ ಬಸದಿಗೆ ಹೋದರೆ ಏನೋ ಒಂದು ತರಹದ ಮನಃಶಾಂತಿ ಸಿಗುತ್ತದೆ. ಬ

ಆಡಳಿತ ಮೊತ್ತೇಸರರು: ಶ್ರೀ ವೀರೇಂದ್ರ ಬಳ್ಳಾಲ್

ಮಾಹಿತಿ: ಶ್ರೀ ಜಯಂಧರ ಇಂದ್ರ ಫೋನ್:

9341656633

Deities & Specialities

Purohith

Jayandara Indra

9341656633

  1. [object Object]