Nerenki.com

Ananthanatha Swamy Basadi Siddakatte Nallurangadi

Dakshina Kannada district, Karnataka

ಶ್ರೀ ಅನಂತನಾಥ ಸ್ವಾಮಿ ಬಸದಿ, ಸಿದ್ಧಕಟ್ಟೆ, ನಲ್ಲೂರಂಗಡಿ

 ಭಗವಾನ್ 1008 ಶ್ರೀ ಅನಂತನಾಥ ಸ್ವಾಮಿ, ಸಿದ್ದಕಟ್ಟೆ, ನಲ್ಲೂರಂಗಡಿ. . ಇದಕ್ಕೆ ಕೇವಾಡಿ ಬಸದಿ, ದೂರ 4 ಕಿ.ಮೀ. ಅಜ್ಜಿಬೆಟ್ಟು ಬಸದಿ ದೂರ 8 ಕಿ.ಮೀ. ಮತ್ತು ಪಂಜಿಕಲ್ಲು ಬಸದಿ 8 ಕಿ.ಮೀ. ದೂರದಲ್ಲಿವೆ. ಈ ಬಸದಿಗೆ ಸಂಬಂಧಪಟ್ಟವರು ನಂಗಬೆಟ್ಟು ಗ್ರಾಮ, ಯಲಿಯ ನಡುಗೋಡು ಗ್ರಾಮ ಆರಂಬೋಡಿ ಗ್ರಾಮ ಕುಕ್ಕಿಪಾಡಿ ಗ್ರಾಮದ 60 ಜೈನ ಕುಟುಂಬಗಳು ಇವರು ಬಸದಿಗೆ ಆಗಾಗ್ಗೆ ಬರುತ್ತಿದ್ದಾರೆ. ಇದು ಕಾರ್ಕಳ ಶ್ರೀಗಳ ಮಠಕ್ಕೆ ಸೇರಿರುತ್ತದೆ. ಬಸದಿಯು ಗರ್ಭಗೃಹ ಹಾಗೂ ಅದರ ಎದುರು ಶಿಲಾಮಯ ತೀರ್ಥಂಕರ ಮಂಟಪ ಹಾಗೂ ಇತರ ಭಾಗಗಳು ಹಂಚಿನದ್ದಾಗಿರುತ್ತದೆ. ಈಗ ಈ ಬಸದಿಯನ್ನು 5 ಗ್ರಾಮಗಳಿಂದ ಆರಿಸಲ್ಪಟ್ಟ ಒಂದು ಆಡಳಿತ ಮಂಡಳಿಯವರು ನಡೆಸುತ್ತಿದ್ದಾರೆ. ಆಡಳಿತ ಮಂಡಳಿಯ ಅಧ್ಯಕ್ಷರು ಗ್ರೇಂದೊಟ್ಟು ಭೋಜರಾಜ ಪಾಂಡಿಯವರು, ಇತರ ಪ್ರಮುಖ ಸದಸ್ಯರು ಮೊಕೇಸರರು ಪ್ರಕಾಶ ಜಂಗಳ ಮತ್ತು ಮೊತ್ತೇಸರರು ಅರ್ಕಕೀರ್ತಿ ಇಂದ್ರರು.

ಬಸದಿಯ ಪುರೋಹಿತರು: ಚಂದ್ರನಾಥ ಇಂದ್ರ, ಅರ್ಕಕೀರ್ತಿ ಇಂದ್ರ, ಹಷೇಂದ್ರ ಕುಮಾರ್ ಇಂದ್ರ, ಕಿಶೋರ್ ಕುಮಾ‌ರ್ ಇಂದ್ರ ಪರ್ಯಾಯದಲ್ಲಿ ಪೂಜೆ ಬದಲಾಗುತ್ತದೆ. ಈ ಬಸದಿಯ ಹಿನ್ನೆಲೆಯ ಕುರಿತು ಕೆಲವು ವಿಚಾರಗಳನ್ನು ಇಲ್ಲಿ ಪ್ರಸ್ತಾಪಿಸುವುದು ಅಗತ್ಯ. ಮೂಲ ಬಸದಿ ಮುಳಿ ಹುಲ್ಲಿನ ಬಸದಿ ಕೊರಿಯಾರ ಎಂಬಲ್ಲಿ ಸುಮಾರು 350 ವರ್ಷಗಳ ಹಿಂದೆ ಯಕಿಯದಲ್ಲಿ ಪಟ್ಟಿ ಆಳಿದ ಅರಸರು ನಿರ್ಮಿಸಿದ್ದರು. ನಂತರ ಈಗ ಇರುವ ಸ್ಥಳದಲ್ಲಿ 1905ನೇ ಇಸವಿಯಲ್ಲಿ ಈಗ ಇರುವ ಬಸದಿಯನ್ನು ಯಲಿಯ ಮಾಗಣೆಯವರು ನಿರ್ಮಿಸಿದ್ದರು. ಅರಸು ಮನೆತನದವರು ಮೂಡಬಿದ್ರೆ ಚೌಟರ ವಂಶದವರು. ಈಗ ಮೂಡಬಿದ್ರೆಯಲ್ಲಿ ಇದ್ದಾರೆ. 1974ರಲ್ಲಿ ಶ್ರೀಯುತ ಧರ್ಮಸ್ಥಳ ವೀರೇಂದ್ರ ಹೆಗ್ಗಡೆಯವರು ಮತ್ತು ಮಾತೃಶ್ರೀ ರತ್ನಮ್ಮ ಹೆಗ್ಗಡೆಯವರು ಸಮಾಜದ ಸಹಕಾರದೊಂದಿಗೆ ಜೀರ್ಣೋದ್ಧಾರಗೊಳಿಸಿ 19-12-1974 ಪೂರ್ವಕ ಪುನಃ ಪ್ರತಿಷ್ಠಾಪಿಸಿದರು. ಬಸದಿಯ ಇತಿಹಾಸವನ್ನು ಸಂಕ್ಷೇಪವಾಗಿ ಈ ರೀತಿ ಹೇಳಬಹುದು. 18ನೇ ಶತಮಾನ ದವರೆಗೂ ಮೂಡಬಿದ್ರೆ ಚೌಟಿ ಅರಸರ ಶಾಖೆಯಾಗಿ ಯೆಲಿಯ (ಈಗಿನ ಹೆಸರು ಸಿದ್ದಕಟ್ಟೆ) ದಲ್ಲಿ ಇಲ್ಲಿಯ ಅರಮನೆಯಲ್ಲಿ ಆಡಳಿತ ನಡೆಸುತ್ತಿದ್ದರು. ಇಲ್ಲಿಯ ಅರಸರಿಗೆ ಯಲಿಯದಲ್ಲಿ ಎಂಟು ಅರಮನೆ ಇತ್ತಂತೆ, ಎರಡು ಮೂರು ಅರಮನೆಯ ಕುರುಹು ಈಗಲೂ ಕಾಣ ಸಿಗುತ್ತದೆ. ಕೆಲವೊಂದು ಕಾರಣಗಳಿಂದ ಶ್ರೀ ಮೂಜಿಲ್ನಾಯ ದೈವದ ಪ್ರಭಾವದಿಂದಾಗಿ 7 ಅರಮನೆ ನಾಶವಾಯಿತ್ತಂತೆ. ಆಮೇಲೆ ಇಲ್ಲಿಯ ಅರಮನೆಯ ಚಾವಡಿಯಲ್ಲಿ ಮೂಜಿಲ್ನಾಯ ದೈವವನ್ನು ಸ್ಥಾಪಿಸಿದರಂತೆ. ಈ ಸ್ಥಳವನ್ನು ಈಗಲೂ ಕಾಣಬಹುದು. ಆಗಿನ ಆರಸರು ತಮ್ಮ ದೈನಂದಿನ ಮತ್ತು ತಮ್ಮ ಜೈನ ಪ್ರಜೆಗಳ ದೈನಂದಿನ ಪೂಜೆಗೋಸ್ಕರ ತಮ್ಮ ಅರಮನೆಯ ಹತ್ತಿರದಲ್ಲಿಯೇ ಕೊರಿಯಾರು ಎಂಬಲ್ಲಿ ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿಯನ್ನು ಮೂಲ ನಾಯಕನಾಗಿ ಮಾಡಿ ಬಸದಿಯನ್ನು ಕಟ್ಟಿಸಿದ್ದರು. 18ನೇ ಶತಮಾನದ ಕಡೆಯ ವರ್ಷದಲ್ಲಿ ಕಡೆಯ ಅರಸರು ಸ್ವರ್ಗಸ್ಥರಾದ ನಂತರ ಪಟ್ಟಿ ಬರಬೇಕಿದ್ದ ಮೂಡಬಿದ್ರೆ ಚಾಜಿ ಅರಸರ ವಂಶದವರು ಇಲ್ಲಿಯ ಅರಮನೆಯಲ್ಲಿ ಪಟ್ಟಾಭಿಷೇಕ ಗೊಳ್ಳದ್ದರಿಂದ ಇಲ್ಲಿಯ ಅರಸು ಮನೆತನದ ಆಳ್ವಿಕೆ ಮುಕ್ತಾಯವಾಯಿತು. ಅನಂತರ ಹಿಂದಿನ ಕೋರಿಯಾರು ಬಸದಿಯು ಮುಳಿ ಹುಲ್ಲಿನದ್ದಾಗಿದ್ದು ಕಾರಣಾಂತರ ಬೆಂಕಿ ಬಿದ್ದು ನಾಶವಾದಾಗ ಆ ಬಸದಿಯು ಬೈಲಿನ ಮಧ್ಯೆ ಇದ್ದುದ್ದ ರಿಂದ ಮಾಗಣೆಯವರು ಈಗಿನ ಸ್ಥಳದಲ್ಲಿ ಬಸದಿಯನ್ನು ಮುಳಿ ಹುಲ್ಲಿನಲ್ಲಿ ಕಟ್ಟಿದರಂತೆ. ಅದು ಕೂಡಾ ಬೆಂಕಿಯಿಂದಾಗಿ ಸುಟ್ಟು ಹೋದುದರಿಂದ ಈಗ ಇರುವ ಬಸದಿಯನ್ನು 1905ರಲ್ಲಿ ಹಂಚಿನಿಂದ ನಿರ್ಮಿಸಿ ಮೂಲ ನಾಯಕನಾಗಿ ಹೊಸದಾಗಿ ಶ್ರೀ ಅನಂತ ಪ್ರಶ್ನೆ ಸ್ವಾಮಿಯನ್ನು ರಾಮ ಸಂಪ್ರೋಕ್ಷಣೆ ಮೂಲಕ ಪ್ರತಿಷ್ಠಾಪಿಸಿದರು. ಪುರಾತನ ಬಸದಿಯ ಮೂಲ ನಾಯಕ ಪಾರ್ಯನಾದ ಸ್ವಾಮಿಯನ್ನು ಈಗಿನ ಬಸದಿಯ ಮೇಗಿನ ನೆಲೆಯಲ್ಲಿ ಪ್ರತಿಷ್ಠಾಪಿಸಿದರು. ಈ ದೇವರಿಗೆ ಈಗಲೂ ಕೊರಿಯರು ಪಾರ್ಶ್ವನಾಥ ಸ್ವಾಮಿ ಎಂದೇ ಕರೆಯುತ್ತಾರೆ. ಹಿಂದಿನ ಬಸದಿಯ ಕುರುಹುಗಳನ್ನು ಕೊರಿಯಾರಿನಲ್ಲಿ ಈಗಲೂ ಕಾಣಬಹುದು. ಅಲ್ಲಿ ಈಗಲೂ ಕುರುಹುಗಳನ್ನು ಆಗದಲ್ಲಿ ಸರ್ಪಗಳ ಉಪದ್ರವವನ್ನು ಕಾಣಬಹುದು. ಮೂಲ ಅರಮನೆಯಲ್ಲಿ ಒಕ್ಕಲು ಆಗಿದ್ದ ಜೈನ ಮನೆತನದವರು ಅರಮನೆಯನ್ನು ಇತರ ಜಾತಿಯವರಿಗೆ ಮಾರಾಟ ಮಾಡಿದರು. ಅರಮನೆಯಲ್ಲಿದ್ದ ಮೂಜಿಲ್ಯಾಯ ದೈವವು ಪಾಳುಬಿದ್ದು ತೊಂದರೆ ಕೊಡುತ್ತಾ ಉಂಟು. ಇನ್ನೊಂದು ಎಣ್ಣಜೆ ಸ್ಥಳದಲ್ಲಿದ್ದ ಮೂಜಿಲ್ನಾಯ ದೈವ ಮಣ್ಣಿನ ಅಡಿಗೆ ಬಿದ್ದು ಅಲ್ಲಿಂದ ಮೂರ್ತಿಗಳು ಕೆಲವೊಂದು ವಸ್ತು ಖಡ್ಗ ಇತ್ಯಾದಿಗಳು ಕಾಲಕ್ರಮೇಣ ಬಸದಿಯ ಆವರಣಕ್ಕೆ ಬಂದು ಬಸದಿಯ ಹೊರ ಆವರಣದಲ್ಲಿ ಸುಂದರ ಗುಡಿಯಾಗಿ ಮಾರ್ಪಾಟುಗೊಂಡಿರುತ್ತದೆ. ಶ್ರೀ ಮೂಜಿಲ್ನಾಯ ದೈವದ ಜಾತ್ರೆಯು 1945ರವರೆಗೂ ಬಸದಿಯ ಎದುರುಗಡೆ ಪಟ್ಟಿ ಶೆಟ್ಟಿ ಗದ್ದೆಯಲ್ಲಿ 3 ದಿನದ ಜಾತ್ರೆಯಾಗಿ ನಡೆದುಕೊಂಡು ಬರುತ್ತಿದ್ದು ಅದೇ ಗದ್ದೆಯಲ್ಲಿ 1980ರಲ್ಲಿ ಒಮ್ಮೆ ಜಾತ್ರೆ ನಡೆದಿರುತ್ತದೆ. ಯಲಿಯ ಅರಸರ ಪಟ್ಟಿದುಂಗುರದಲ್ಲಿ "ಶ್ರೀ ಪಂಚದುರ್ಗಾಪರಮೇಶ್ವರಿ" ಮೊಹರು ಇತ್ತಂತೆ. ಇಲ್ಲಿ ಪೂಂಜದಲ್ಲಿ ಇತರ ಪ್ರಜಾಜನರಿ ಗೋಸ್ಕರ ನಿರ್ಮಾಣ ಮಾಡಿದ ಪಂಚದುರ್ಗಾಪರಮೇಶ್ವರಿ ದೇವಸ್ಥಾನ ಈಗಲೂ ಉಂಟು. ಈ ಮೇಲಿನ ಇತಿಹಾಸಕ್ಕೆ ಕಡೆಯ ಅರಸರ ಬಲಗೈ ಬಂಟ ದೀವಟಿಗೆ ಹಿಡಿದು ಸೇವೆ ಮಾಡಿದ್ದ ಇದಕ್ಕೆ ಲಿಂಗ ಮಡಿವಾಳರ ಹೇಳಿಕೆ ಮೂಜಿಲ್ನಾಯ ದೈವದ ಪಾಡ್ಡನ ಮತ್ತು ಹಿಂದಿನ 1959ರಲ್ಲಿ ಸ್ವರ್ಗಸ್ಥರಾದ ಪ್ರತಿಷ್ಠಾ ಪುರೋಹಿತ ಶ್ರೀ ಆದಿರಾಜ ಇಂದ್ರರ ಶ್ರೀ ಚಂದ್ರನಾಥ ಇಂದ್ರ ಮತ್ತು ಶ್ರೀ ಅರ್ಕಕೀರ್ತಿಯವರ ತಂದೆ ಮುಖತಃ ಹೇಳಿಕೆಗಳು ಆಧಾರವಾಗಿರುತ್ತವೆ.

ಈಗಿನ ಶ್ರೀ ಆನಂತನಾಥ ಸ್ವಾಮಿಯ ಬಸದಿಗೆ ಮೇಗಿನ ನೆಲೆ ಉಂಟು. ಅಲ್ಲಿ ಕೊರಿಯಾರು ಶ್ರೀ ಪಾರ್ಶ್ವನಾಥ ಸ್ವಾಮಿ ಪುರಾತನ ಬಸದಿಯ ಮೂಲ ನಾಯಕ ಮೂರ್ತಿ ಮತ್ತು ಮೂಡಬಿದ್ರೆ, ಚೌಟರ ವಂಶದ ದೇವರು ನೇಮಿಸುವ ಸ್ವಾಮಿಯ ಮೂರ್ತಿ ರಾಜಕದ ಈ ಮರ ನೇರವಾದ ಇದೆ. ಬಸದಿಯ ಎದುರುಗಡಿ ಮತ ಸಂಜೆ ನಡೆಯ ಕನ್ನಡಿಕಲ್ಲು ಎಂಬ ಪುರುಗಡೆ ಮಾನಸ್ತಂಭದ ಬದಲಿಗೆ ಉಂಟು ಬಸದಿಯ ಕೋನಾಕಾರದ ಒಂದು ಗೋಮರ ಗಿಡವಿತ್ತು. ಬಸದಿಯ ಹೊರ ಎರಡು ಪಾರಿಜಾತದ ವಿಶೇಷವಾದ ಪರಿಮಳ ಉಳ್ಳ ಮರಾತನ ಸುರಗಿ ಮರವಿದೆ ಹೊರ ಆವರಣದಲ್ಲಿ ಹೂವಿನ ಗಿಡ ಕಂಬರಸುರವ ಪದ್ಮಾವತಿ ಅಮ್ಮನ ಹಿಂದುಗಡೆ ಲೊಕ್ಕಿ ಗಿಡವಿದೆ

ಬಸದಿಯನ್ನು ಒಳಗೆ ಹೋಗಿದು ಕುಣಿವಾಗದೊದಲು ಕನ್ನಡಿಕರಾಟ ಅವರಣದ ಗೋಪುರ ಸಿಗುತ್ತದೆ. ಅದನ್ನು ದಾಟಿ ಒಳ ಅವರಣ ಪ್ರವೇಶದ ಹತ್ತಿರ 2ನೇ ಗೋಪುರ (ಕಾಳಿಗಳು) ಸಿಗುತ್ತದೆ. ಇದರ ಬಸದಿಯ ಬಲ ಪೌಳಿಯಲ್ಲಿ ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿಯ ಬಸದಿ ಉಂಟು ಪಾರ್ಶ್ವನಾಥ ಸ್ವಾಮಿಯ ಎದುರುಗಡೆ ಪುರಾತನವಾದ ಶ್ರೀ ಪದ್ಮಾವತಿ ಅಮ್ಮನ ಮೂರ್ತಿ ಉಂಟು. ಈ ಬಸದಿಯನ್ನು ಪಿಲಿಂಬು ಸಾಂತಪ್ಪ ಪೆರ್ಗಡೆಯವರು 1942ರಲ್ಲಿ ತಮ್ಮ ಮನೆಯಲ್ಲಿ ಪೂಜೆ ಮಾಡುತ್ತಿದ್ದ ಮನೆ ದೇವರು ಪಾರ್ಶ್ವನಾಥ ಸ್ವಾಮಿ ಮತ್ತು ಅಮ್ಮನವರನ್ನು ಪ್ರತಿಷ್ಠಾಪಿಸಿದರು. ಅದರ ಎದುರುಗಡೆ ಪೌಳಿಯಲ್ಲಿ ಬಸದಿಯ ಕಾರ್ಯಾಲಯವಿದೆ. ಈ ಕೋರಿಕೆ ಯನ್ನು ಕಾರ್ಯಾಲಯ ಹಾಗೂ ಮುನಿ ನಿವಾಸವಾಗಿ ಉಪಯೋಗಿಸಿಕೊಳ್ಳಲಾಗುತ್ತದೆ ಪೂಜ್ಯಶ್ರೀ ವಿಶ್ವನಂದಿ ಮುನಿ ಮಹಾರಾಜರು ಒಂದು ತಿಂಗಳು ಇಲ್ಲಿ ವಾಸವಾಗಿ ಪ್ರವಚನ ಮಾಡಿದ್ದಾರೆ.

ಪ್ರಾರ್ಥನಾ ಮಂದಿರಕ್ಕೆ ಹತ್ತುವಲ್ಲಿ ಎರಡು ಗೋಡೆಯ ಮೇಲೆ ಬಹು ವರ್ಣದ ದ್ವಾರ ಪಾಲಕರ ಚಿತ್ರವಿದೆ. ಪ್ರಾರ್ಥನಾ ಮಂಟಪದ ಎದುರುಗಡೆ ಜಯ ಘಂಟೆಗಳನ್ನೂ ತೂಗಿ ಹಾಕಲಾಗಿದೆ. ಅಲ್ಲಿಂದ ಒಳಗಡೆ ಹೋದಾಗ ಬಂದು ಕುಳಿತು ಪ್ರಾರ್ಥನೆ ಮಾಡುವ ಮಂಟಪವಿದೆ. ಅದಕ್ಕೆ ಗಂಟೆ ಮಂಟಪ ಎಂದು ಕರೆಯಲಾಗುತ್ತದೆ. ಅದರಲ್ಲಿ ಕುಳಿತು ಬಾರಿಸುವ ಗಂಟೆಗಳು ಉಂಟು ಗಂಧಕುಟಿಯ ಎಡ ಭಾಗದ ಮಂಟಪದಲ್ಲಿ ಶ್ರೀ ಜ್ವಾಲಾಮಾಲಿನಿ ಮತ್ತು ಶ್ರೀ ಕೂಷ್ಮಾಂಡಿನಿ ದೇವಿಯರ ಮೂರ್ತಿ ಇದ್ದು ದಿನಾ ಪೂಜೆ ನಡೆಯುತ್ತಿದೆ


ತೀರ್ಥಂಕರ ಮಂಟಪಕ್ಕೆ ಪ್ರವೇಶ ಮಾಡುವಾಗ ಸ್ವಾಮಿಯ ಎಡ ಭಾಗದಲ್ಲಿ ಪ್ರತ್ಯೇಕ ಮಂಟಪ ಮತ್ತು ಬಾಗಿಲು ಇದ್ದು ನೂರಾರು ಕುಟುಂಬದವರು ಪ್ರಾಚೀನ ಕಾಲದಿಂದಲೂ ಅವರ ಇಲ್ಲಿಯ ದೊಡ್ಡ ಮನೆಯಲ್ಲಿ ಮನೆ ದೇವರಾಗಿ ಪೂಜೆಗೊಳ್ಳುತ್ತಾ ಇದ್ದ ಭಗವಾನ್ ಶ್ರೀ ನೇಮಿನಾಥ ಸ್ವಾಮಿ, ಶ್ರೀ ಪಾರ್ಶ್ವನಾಥ ಸ್ವಾಮಿ ಮತ್ತು ಶ್ರೀ ಪದ್ಮಾವತಿ ದೇವಿಯನ್ನು 2006ರಲ್ಲಿ ಪ್ರತಿಷ್ಠಾಪಿಸಿ ನಿತ್ಯವೂ ಎರಡು ಹೊತ್ತು ನೈವೇದ್ಯ ಮೂಲಕ ಪೂಜೆ ನಡೆಯುವ ವ್ಯವಸ್ಥೆ ಮಾಡಿರುತ್ತಾರೆ. ಇಲ್ಲಿ ಕೂಡ ಶ್ರೀ ಧರ್ಮಸ್ಥಳ ಮತ್ತು ನೂರಾರು ಕುಟುಂಬದವರು ಆಗಾಗೆ ಬಂದು ಪೂಜಾ ಸೇವೆ ನಡೆಸುತ್ತಾ ಇದ್ದಾರೆ. ವಾರ್ಷಿಕೋತ್ಸವದಂದು 54 ಕಲಶ ಅಭಿಷೇಕ ನಡೆಯುತ್ತದೆ. ಈ ಮಂಟಪದವರೆಗೆ ಸಾರ್ವಜನಿಕ ಜೈನ ಬಂಧುಗಳಿಗೆ ಪ್ರವೇಶ ಇರುತ್ತದೆ. ಈ ಮಂಟಪದಿಂದ ಬಸದಿಗೆ ಪ್ರದಕ್ಷಿಣೆ ಬರಲು ಎರಡೂವರೆ ಅಡಿ ಅಗಲದ ಒಂದು ಪ್ರದಕ್ಷಿಣಾ ಪಥವಿದೆ. ಈ ಗಂಟೆ ಮಂಟಪದಿಂದ ಒಳಗೆ ಹೋದಾಗ ಸಿಗುವ ಮಂಟಪವೇ ತೀರ್ಥಂಕರ ಮಂಟಪ, ಇಲ್ಲಿಂದ ಮುಂದೆ ಮಡಿ ಉಟ್ಟು ಪ್ರವೇಶ.

ಈ ಮಂಟಪದಲ್ಲಿ ಗಂಧಕುಟಿ ಇದೆ. ಗಂಧಕುಟ್ಟಿ ದಾಟಿ ಮುಂದೆ ಹೋದಾಗ ಅಮ್ಮನವರ ಮಂಟಪ ಸಿಗುತ್ತದೆ. ಗಂಧ ಕುಟಿಯ ಎದುರುಗಡೆ ವೃಷವಾದಿ ಅನಂತ ತೀರ್ಥಂಕರ ಎರಡು ಅಡಿ ಎತ್ತರದ ಪಂಚಲೋಹದ ಮೂರ್ತಿ ಇದೆ. ಇದರ ಬಲಗಡೆ ಶ್ರುತ, ಎಡಗಡೆ, ಗಣಧರರ ಪಾದ ಉಂಟು. ಬಲಗಡೆ 2 ಅಡಿ ಎತ್ತರದಲ್ಲಿ ಗಂಧ ಕುಟಿಯಲ್ಲಿ ಬ್ರಹ್ಮ ದೇವರ ಕರಿಶಿಲೆಯೂ ಇದೆ. ದಿನಾ ಪೂಜೆ ನಡೆಯುತ್ತದೆ. ಅಮ್ಮನವರ ಮಂಟಪದಲ್ಲಿ ಉತ್ತರಾಭಿಮುಖವಾಗಿ ಪುರಾತನ ಸುಂದರವಾದ ವಿಶೇಷ ಲಕ್ಷಣವುಳ್ಳ ಶಿರದ ಮೇಲ್ಗಡೆ ಐದು ಹೆಡೆಯ ಸರ್ಪವುಳ್ಳ ನಾಲ್ಕು ಕೈಗಳ ಪಾಶ ಅಂಕುಶ ಫಲ ಮತ್ತು ವರದ ಹಸ್ತದ ಪಂಚಲೋಹದ 9 ಇಂಚು ಎತ್ತರ ಉಳ್ಳ ಮೂರ್ತಿ ಇರುತ್ತದೆ. ಈ ಅಮ್ಮನವರು ಅತ್ಯಂತ ಪ್ರಭಾವ ಶಾಲಿ ಹಾಗೂ ಕಾರಣಿಕ ಶಕ್ತಿ ಉಳ್ಳವರಾಗಿರುತ್ತಾರೆ. ಈ ಅಮ್ಮನವರಿಗೆ ಸುಂದರವಾದ ಮಂಟಪದಲ್ಲಿ ಯಾವಾಗಲೂ ಸೀರೆ ಉಡಿಸಿ ಬಳೆಗಳನ್ನು ಹಾಕಿ ಹೂವಿನಿಂದ ಅಲಂಕಾರ ಮಾಡಿ ಅಭಿಷೇಕ ಮೂಲಕ ಪೂಜೆ ಮಾಡಲಾಗುತ್ತದೆ. ಅಮ್ಮನವರ ಕಾಲಿನ ಬಳಿಯಲ್ಲಿ ಬೆಳ್ಳಿಯ ಕುಕ್ಕುಟೋರಗ ಮೂರ್ತಿಯಿದೆ.

ವರ್ಷಾವಧಿ ಜಾತ್ರೆಯು ಪ್ರತಿ ಮಾರ್ಗಶಿರ ಬಹುಳ ಪಂಚಮಿಯಂದು ಇಡೀ ದಿನ ವಿಮಾನ ಶುದ್ದಿ ಅನಂತನಾಥ ಸ್ವಾಮಿಗೆ ಕಲಾರೋಪಣೆ. ಅಮ್ಮನವರಿಗೆ ಆರಾಧನಾ ಪೂರ್ವಕ ಕಲಾರೋಪಣೆ ಬಲಿ ಉತ್ಸವ ಅಭಿಷೇಕದ ಮೂಲಕ ವಿಜೃಂಭಣೆಯಿಂದ ನಡೆಯುತ್ತದೆ. ಹುಂಬುಚ್ಚದಂತೆ ಅಮ್ಮನವರ ಎದುರು ಪುಷ್ಪ ತೆಗೆದು ನೋಡುವ ಕ್ರಮ ಉಂಟು. ಪ್ರಾರ್ಥನೆ ಮಾಡಿ ಪ್ರಸಾದ ಕೇಳುವ ಕ್ರಮ ಇದೆ. ಇಲ್ಲಿಯ ಒಂದು ಪ್ರತೀತಿ ಏನೆಂದರೆ ಹುಡುಗಿಯರಿಗೆ ನೆಂಟಸ್ತಿಕೆ ಬರಬೇಕೆಂದಾದರೆ ಇಲ್ಲಿಗೆ ಬಂದು ಪ್ರಾರ್ಥನೆ ಮಾಡಿ ಸಹಸ್ರ ನಾಮದ ಪೂಜೆ ಮಾಡಿದರೆ 6 ತಿಂಗಳ ಒಳಗಾಗಿ ನೆಂಟಸ್ತಿಕೆ ಬರುತ್ತದೆ. ಕಾರಣಿಕದ ಬಗ್ಗೆ ಹೇಳಲು ತುಂಬಾ ಉಂಟು. ಒಂದೆರಡು ಘಟನೆಗಳನ್ನು ವಿಶೇಷವಾಗಿ ಉಲ್ಲೇಖಿಸಬಹುದು. ಒಂದು ಸಲ ಒಬ್ಬರಿಗೆ ಹೃದಯ ಆಪರೇಶನ್ ಆಗಿ ಹದಿ ಮೂರು ದಿನ ಎಚ್ಚರವಾಗದಿದ್ದಾಗ ದೊಡ್ಡ ವೈದ್ಯರು ಕೈಚೆಲ್ಲಿ ಇನ್ನು ರೋಗಿ ಬದುಕುವುದಿಲ್ಲ ಎಂದು ಪರಿವಾರಕ್ಕೆ ತಿಳಿಸಿದಾಗ ಇಲ್ಲಿಗೆ ಬಂದು ಮಹಾದೇವಿಯಲ್ಲಿ ಅಂಗಲಾಚಿ ಬೇಡಿ ಕೊಂಡಾಗ ಕೈ ಚೆಲ್ಲಿದ ವೈದ್ಯರೇ ಅಚ್ಚರಿಪಡುವ ರೀತಿಯಲ್ಲಿ ರೋಗಿ ಎಚ್ಚರಗೊಂಡು ಒಂದು ವಾರದ ಒಳಗಡೆ ಎದ್ದು ನಡೆಯುವ ಹಾಗೆ ಆಗಿದೆ. ಇಂತಹ ಪವಾಡಗಳು ಈ ಕ್ಷೇತ್ರದಲ್ಲಿ ಮಾಮೂಲು. ಪುರಾತನ ಬಸದಿ ಮಣ್ಣಿನ ಒಳಗೆ ಬಿದ್ದು ಈ ಬಸದಿ 18ನೇ ಶತಮಾನ ಅಂತ್ಯದಲ್ಲಿ ಇಲ್ಲಿಗೆ ಸ್ಥಳಾಂತರ ಗೊಂಡದ್ದರಿಂದ ಪುರಾತನ ಶಿಲಾಲೇಖ ಇತ್ಯಾದಿ ಪ್ರಾಚೀನ ದಾಖಲೆಗಳು ಯಾವುದೂ ಇಲ್ಲಿ ಸಿಗುವುದಿಲ್ಲ. ಬಸದಿಯ ಮೂಲ ನಾಯಕ ಶ್ರೀ ಅನಂತನಾಥ ಸ್ವಾಮಿಯ ಪಂಚಲೋಹದ ಖಡ್ಡಾಸನ ಮೂರ್ತಿಯು ಎರಡೂವರೆ ಅಡಿ ಎತ್ತರವಿದ್ದು ಪೀಠ ಪ್ರಭಾವಳಿ ಸಹಿತ ನಾಲ್ಕು ಅಡಿ ಎತ್ತರವಿದೆ. ಪ್ರತಿದಿನ ಸ್ವಾಮಿಗೆ ಕ್ಷೀರಾಭಿಷೇಕ ನಡೆಯುತ್ತದೆ. ವಿಶೇಷ ಸಂದರ್ಭದಲ್ಲಿ ಸ್ವಾಮಿಗೆ ಪಂಚಾಮೃತಾಭಿಷೇಕ, ಕಲಶಾಭಿಷೇಕ ನಡೆಯುತ್ತಿದೆ. ಬಸದಿಯಲ್ಲಿ ಬೆಳಿಗ್ಗೆ ಮತ್ತು ಸಾಯಂಕಾಲ ಪೂಜೆ ಉಂಟು. ಬೆಳಿಗ್ಗೆ ಸ್ವಾಮಿಗೆ ಮತ್ತು ಅಮ್ಮನವರಿಗೆ ಅಭಿಷೇಕ ಉಂಟು.

 ದಿನನಿತ್ಯ 3/4 ಕಿಲೋ ಅಕ್ಕಿಯ ನೈವೇದ್ಯ ಸಮರ್ಪಣೆ ಆಗಬೇಕು. ಶುಕ್ರವಾರ ರಾತ್ರಿ ಕೂಡಾ ಅಮ್ಮನವರಿಗೆ ವಿಶೇಷ ಅಭಿಷೇಕ ಮಾಡಿ ಭಕ್ತಾದಿಗಳಿಂದ ಪೂಜೆಗಳು ನಡೆಯುತ್ತಿದೆ. ಶುಕ್ರವಾರ ಖಾಯಂ ಆಗಿ 24 ಭಕ್ತರಿಂದ ಪೂಜಾಸೇವೆ ಹಾಗೂ ಬೇರೆ ಸೇವೆಗಳು ಜರಗುತ್ತವೆ. ಬಸದಿಯ ಒಳ ಅಂಗಳದ ನೈರುತ್ಯ ಮೂಲೆಯಲ್ಲಿ ಕ್ಷೇತ್ರಪಾಲನ ಗುಡಿ, ನಾಗದೇವರ ಬನ, ಬೇರೆ ಬೇರೆ ಉಂಟು. ಕ್ಷೇತ್ರಪಾಲನ ಮೂರ್ತಿ ನಾಗ ಬನದಲ್ಲಿ ನಾಗದೇವರ ಆರು ಮೂರ್ತಿಗಳು ಬೇರೆ ಬೇರೆ ಪೀಠಗಳ ಮೇಲೆ ಸ್ಥಾಪಿತವಾಗಿದೆ. ಬಸದಿಯ ಸುತ್ತಲೂ ದಶ ದಿಕ್ಷಾಲಕರ ಬಲಿಕಲ್ಲುಗಳು ಉಂಟು. ಇದಕ್ಕೆ ಪೂಜೆ ನಡೆಯುತ್ತದೆ. ಹೊರಗಿನ ಆವರಣದ ವಾಯವ್ಯ ದಿಕ್ಕಿನಲ್ಲಿ ಸುಂದರವಾದ ಶ್ರೀ ಮೂಜಿಲ್ನಾಯ ದೈವದ ಗುಡಿ ದೈವದ ಮೂರ್ತಿಗಳು ಬೆಳ್ಳಿಯ ಹಿತ್ತಾಳೆಯ ಆಯುಧಗಳು ಮುಖವಾಡಗಳು ಉಂಟು. ದೈವಕ್ಕೆ ನಿತ್ಯಪೂಜೆ ಆಗಬೇಕು ಸಂಕ್ರಾಂತಿ ದಿವಸ ವಿಶೇಷ ಅಭಿಷೇಕ ಆಗೆಲು ಸೇವೆ ಜರಗುತ್ತದೆ. ಬಸದಿಯ ಒಳ ಅಂಗಳದಲ್ಲಿ ಸುತ್ತಲೂ ಭದ್ರವಾದ ಮುರಕಲ್ಲಿನ ಪ್ರಾಕಾರ ಗೋಡೆ ಇದೆ. ಆದರೆ ಹೊರ ಅಂಗಳದ ಪ್ರಾಕಾರ ಗೋಡೆ ಜರಿದು ಬಿದ್ದು ನಾಶವಾಗಿದೆ. ಈ ಬಗ್ಗೆ ಹತ್ತೂವರೆ ಲಕ್ಷ ಅಂದಾಜು ಪಟ್ಟಿ ತಯಾರಿಸಿ ಸರಕಾರಕ್ಕೆ ಕಳುಹಿಸಿ ಅನುದಾನಕ್ಕೆ ಕಾಯುತ್ತಿದ್ದಾರೆ. ಬಸದಿಗೆ ಕಾರ್ಯಾಲಯ ಗೋಪುರದಲ್ಲಿ ಇದೆ. ಸಭಾಭವನ ಇಲ್ಲ ಸರಕಾರಕ್ಕೆ ಸಹಾಯಕ್ಕೆ ಬರಕೊಂಡಿದ್ದಾರೆ ಸಹಾಯ ಬಂದಿಲ್ಲ.

ಸರಕಾರದ ವತಿಯಿಂದ ಕೊಳವೆ ಬಾವಿ, ಸ್ನಾನಗೃಹ ನಿರ್ಮಾಣವಾಗಿದೆ. ಮುಂದೆ ಸಭಾಭವನ ನಿರ್ಮಿಸುವ ಯೋಜನೆ ಇದೆ. 35 ಲಕ್ಷದ ಅಂದಾಜುಪಟ್ಟಿ ತಯಾರಾಗಿರುತ್ತದೆ. ಅನುದಾನಕ್ಕೆ ಸರಕಾರಕ್ಕೆ ಮನವಿ ಬರಕೊಂಡಿದ್ದಾರೆ. ಮೂಲ ಬಸದಿ ಶಿಥಿಲವಾಗಿದೆ. 45 ಲಕ್ಷದ ಅಂದಾಜು ಪಟ್ಟಿ ತಯಾರಾಗಿದೆ ವಾನಿಗಳಿಂದ ಸಹಾಯ ನಿರೀಕ್ಷಿಸುತ್ತಾ ಇದ್ದಾರೆ. ಬಸದಿಗೆ ರೂ. 12,000 ತಸ್ವೀಕು ಬರುತ್ತಾ ಇದೆ.

. ಶುಕ್ರವಾರ ರಾತ್ರಿ ಕೂಡಾ ಅಮ್ಮನವರಿಗೆ ವಿಶೇಷ ಅಭಿಷೇಕ ಮಾಡಿ ಭಕ್ತಾದಿಗಳಿಂದ ಪೂಜೆಗಳು ನಡೆಯುತ್ತಿದೆ. ಶುಕ್ರವಾರ ಖಾಯಂ ಆಗಿ 24 ಭಕ್ತರಿಂದ ಪೂಜಾಸೇವೆ ಹಾಗೂ ಬೇರೆ ಸೇವೆಗಳು ಜರಗುತ್ತವೆ. ಬಸದಿಯ ಒಳ ಅಂಗಳದ ನೈರುತ್ಯ ಮೂಲೆಯಲ್ಲಿ ಕ್ಷೇತ್ರಪಾಲನ ಗುಡಿ, ನಾಗದೇವರ ಬನ, ಬೇರೆ ಬೇರೆ ಉಂಟು. ಕ್ಷೇತ್ರಪಾಲನ ಮೂರ್ತಿ ನಾಗ ಬನದಲ್ಲಿ ನಾಗದೇವರ ಆರು ಮೂರ್ತಿಗಳು ಬೇರೆ ಬೇರೆ ಪೀಠಗಳ ಮೇಲೆ ಸ್ಥಾಪಿತವಾಗಿದೆ. ಬಸದಿಯ ಸುತ್ತಲೂ ದಶ ದಿಕ್ಷಾಲಕರ ಬಲಿಕಲ್ಲುಗಳು ಉಂಟು. ಇದಕ್ಕೆ ಪೂಜೆ ನಡೆಯುತ್ತದೆ. ಹೊರಗಿನ ಆವರಣದ ವಾಯವ್ಯ ದಿಕ್ಕಿನಲ್ಲಿ ಸುಂದರವಾದ ಶ್ರೀ ಮೂಜಿಲ್ನಾಯ ದೈವದ ಗುಡಿ ದೈವದ ಮೂರ್ತಿಗಳು ಬೆಳ್ಳಿಯ ಹಿತ್ತಾಳೆಯ ಆಯುಧಗಳು ಮುಖವಾಡಗಳು ಉಂಟು. ದೈವಕ್ಕೆ ನಿತ್ಯಪೂಜೆ ಆಗಬೇಕು ಸಂಕ್ರಾಂತಿ ದಿವಸ ವಿಶೇಷ ಅಭಿಷೇಕ ಆಗೆಲು ಸೇವೆ ಜರಗುತ್ತದೆ. ಬಸದಿಯ ಒಳ ಅಂಗಳದಲ್ಲಿ ಸುತ್ತಲೂ ಭದ್ರವಾದ ಮುರಕಲ್ಲಿನ ಪ್ರಾಕಾರ ಗೋಡೆ ಇದೆ.


ಮಾಹಿತಿ: ಅರ್ಕಕೀರ್ತಿ ಇಂದ್ರ 08255269450 ដាយ : 9164659776 :
Chandranatha Indra  08255/269300 ຜູ່ : 9449330646


Deities & Specialities

Purohith

Harsha Kumar Indra

7892838721

  1. [object Object]