Dakshina Kannada district, Karnataka
ಶ್ರೀ ಆದಿನಾಥಸ್ವಾಮಿ ಅಜ್ಜಿಬೆಟ್ಟು ಬಸದಿ, ವಾಮದಪದವು
ಅಜ್ಜಿಬೆಟ್ಟು ಬಸದಿ భగవానా ಶ್ರೀ ಆದಿನಾಥಸ್ವಾಮಿయ ಚೈತ್ಸಾಲಯವು ಬಂಟ್ವಾಳ ತಾಲೂಕು, ಅಜ್ಜಿಬೆಟ್ಟು ಗ್ರಾಮದ ಮಾಡುದಪದವು ಸಮೀಪದಲ್ಲಿದೆ. ಈ ಬಸದಿಗೆ 5 ಕಿ.ಮೀ. ದೂರದಲ್ಲಿ ನಾಡಬೆಟ್ಟು ಬಸದಿ ಇದೆ. ಬಸದಿಗೆ ಒಟ್ಟು 44 ಕುಟುಂಬಗಳಿದ್ದು, ಶ್ರಾವಕರು ಪಂಚಪರ್ವಗಳಲ್ಲಿ ಮತ್ತು ಬಸದಿಯಲ್ಲಿ ನಡೆಯುವ ವಿಶೇಷ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಹಂಚಿನ ಮಾಡಿನ ಈ ಬಸದಿಯು ಕಾರ್ಕಳ ಮಠಕ್ಕೆ ಸೇರಿದ್ದು, ಪುಂಜಾಲಕಟ್ಟೆಯಿಂದ 9 ಕಿ.ಮೀ. ಹಾಗೂ ಸಿದ್ಧಕಟ್ಟೆಯಿಂದ ಕಿ.ಮೀ, ದೂರದಲ್ಲಿದೆ. ಮಂಗಳೂರಿನ ಕೆ. ರಾಜವರ್ಮ ಬಳ್ಳಾಲರ ಅಧ್ಯಕ್ಷತೆಯಲ್ಲಿರುವ ಶ್ರೀ ಅದಿನಾಥ-ಪದ್ಮಾವತೀ ಆಡಳಿತ ಸಮಿತಿಯ ಮುಖಾಂತರ ವಿನಿಯೋಗಗಳು ನಡೆಯುತ್ತಿದ್ದು, ವೃಷಭರಾಜ ಇಂದ್ರರು ಅರ್ಚಕರಾಗಿರುತ್ತಾರೆ.
ಈ ಬಸದಿಯನ್ನು ಕಟ್ಟಿಸಿದ ಬಗ್ಗೆ ನಿಖರವಾದ ಮಾಹಿತಿ ಇಲ್ಲದಿದ್ದರೂ ಸುಮಾರು 600 ವರ್ಷಗಳ ಹಿಂದಿನ ಬಸದಿ ಎಂದು ಹೇಳುತ್ತಾರೆ. ಇದು ಅಜ್ಜಬೆಟ್ಟು ಮಾಗಣೆ ಬಸದಿ ಎಂದು ತಿಳಿದುಬರುತ್ತದೆ. 1960ನೇ ಇಸವಿಯಲ್ಲಿ ಬಸದಿಯು ಸಂಪೂರ್ಣವಾಗಿ ಶಿಥಿಲಗೊಂಡಿದ್ದು, ಶ್ರೀಗಳಾದ ಧರ್ಮಪಾಲ ಚೌಟ, ನಾಭಿರಾಜ ಕೆಲ್ಲ ಮತ್ತು ಮಲ್ಲಿನಾಥ ಇಂದ್ರರ ಮುಂದಾಳತ್ವದಲ್ಲಿ ಸಂಪೂರ್ಣ ಜೀರ್ಣೋದ್ಧಾರಗೊಂಡಿತು. ಆನಂತರ 1991ರಲ್ಲಿ ಆಡಳಿತ ಸಮಿತಿಯ ಮುಖಾಂತರ ಮನಃ ಶುದ್ದ ಸಂಪ್ರೋಕ್ಷಣೆಗಳು ಜರಗಿದವು. ಬಸದಿಗೆ ಮೇಗಿನ ನೆಲೆ ಮಾತ್ರ ಇದ್ದು, ಮೂಲನಾಯಕ ಇರುವುದಿಲ್ಲ ಮತ್ತು ಪೂಜೆ ಇರುವುದಿಲ್ಲ. ಬಸದಿಯಲ್ಲಿ 24 ತೀರ್ಥಂಕರರ ಮೂರ್ತಿಗಳು ಬ್ರಹ್ಮದೇವರ ಮೂರ್ತಿಗಳಿವೆ. ವಿಶೇಷವಾಗಿ ಈ ಬಸದಿಯು ಪದ್ಮಾವತೀ ಅಮ್ಮನವರ ಅತಿಶಯ ಕ್ಷೇತ್ರವಾಗಿರುತ್ತದೆ. ಬಸದಿಯ ಬಳಿಯಲ್ಲಿ ಹೂವಿನ ಗಿಡಗಳಿದ್ದು, ಪಾರಿಜಾತ ಹೂವಿನ ಗಿಡ ಇರುವುದಿಲ್ಲ. ಬಸದಿಯ ಎಡ ಬಲ ಗೋಪುರಗಳನ್ನು ಭಕ್ತರ ಆಶ್ರಯಕ್ಕಾಗಿ ಉಪಯೋಗಿಸ ಲಾಗುತ್ತದೆ. ಬಸದಿಯ ಎಡ ಬಲಗಳಲ್ಲಿ ದ್ವಾರಪಾಲಕನ ಚಿತ್ರ ಮಾಡ ಮಂಟಪದಲ್ಲಿ 4 ಕಂಬಗಳ ಮಂಟಪವಿದ್ದು ಜಯಘಂಟೆ, ಜಾಗಟೆಗಳನ್ನು ತೂಗು ಹಾಕಲಾಗಿದೆ.
ಮೂಲಸ್ವಾಮಿಯ ಬಳಿಗೆ ಹೋಗುವಾಗ ತೀರ್ಥಮಂಟದ ವಿರುತ್ತದೆ. ಈ ತೀರ್ಥಮಂಟಪದಲ್ಲಿ ಗಂದಕುಟಿಯಿದೆ. ಗಂಧಕುಟಿಯ ಬಳೆ ಗಂದರೆ ಪದ ಗಂಡುಪದ ಮೂರ್ತಿ ಇದ್ದು ಪ್ರತಿದಿನ ಪಾದ ಕುತ ಆದೇವ ಪ್ರತಿವರ್ಷ ಫೆಬ್ರವರಿ 8ರಂದು ವಾರ್ಷಿಕ ಜಾತ್ರೆ ನಡೆಯುತ್ತಿದ್ದು ವಿಮಾನ ಶುದ್ದಿ, ಸ್ವಾಮಿ ಪ್ರತಿತ್ಯ ಕ್ಷೇತವಾಲ ಪ್ರತಿಷ್ಠ ಪದ್ಮಾವತ ದೇವಿ ಪ್ರತಿಷ್ಠೆಯೊಂದಿಗೆ ಉತ್ಸವಾದಿಗಳು ಜರಗುತ್ತವೆ ಅಲ್ಲದೆ ಕಾರ್ತಿಕ ಮಾಸದ ಹುಣ್ಣಿಮೆಯಂದು ಸ್ವಾಮಿಯ. ದೀಪೋತ್ಸವವು ಜರಗುತ್ತದೆ. ಉತ್ತರಾಭಿಮುಖವಾಗಿರುವ ಈ ಕ್ಷೇತ್ರದ ಮಹಾಮಾತೆ ಪದ್ಮಾವತೀ ಅಮ್ಮನವರ ಕೃಪಾಕಟಾಕ್ಷ ವದಿಂದ ಜೈನ ಬಾಂಧವರಂತೆಯೇ ಅಸಂಖ್ಯಾತ ಜೈನೇತರ ಭಕ್ತವೃಂದವನ್ನೂ ತನ್ನೆಡೆಗೆ ಆಕರ್ಷಿಸಿದೆ. ದೇವಿಗೆ ಸೀರೆ ಉಡಿಸಿ, ಬಳೆಗಳನ್ನಿಟ್ಟು, ಹೂವಿನ ಅಲಂಕಾರದೊಂದಿಗೆ ಪೂಜೆ ನಡೆಯುತ್ತಿದ್ದು, ಪ್ರತಿ ಶುಕ್ರವಾರ ಜೈನ ಹಾಗೂ ಜೈನೇತರ ಭಕ್ತಾದಿಗಳಿಂದ ವಿಶೇಷ ಪೂಜೆ ನೆರವೇರುತ್ತದೆ. ಶ್ರಾವಣ ಮಾಸದ ಶುಕ್ರವಾರಗಳಲ್ಲಿ ಅಸಂಖ್ಯಾತ ಜೈನ ಹಾಗೂ ಜೈನೇತರ ಭಕ್ತಾದಿಗಳ ಸಮೂಹ ನೆರೆದು ದೇವಿ ಅನುಗ್ರಹಕ್ಕೆ ಪಾತ್ರರಾಗುವರು. ಲಕ್ಷ ಪುಷ್ಪಾರ್ಚನೆ ಪೂಜೆಯು ಪದ್ಮಾವತೀ ಅಮ್ಮನವರಿಗೆ ಪ್ರಿಯವಾದ ಅರ್ಚನೆಯಾಗಿದ್ದು, ಭಕ್ತಾದಿಗಳು ತಮ್ಮ ಇಷ್ಟಾರ್ಥಕ್ಕಾಗಿ ಲಕ್ಷ ಹೂವಿನ ಪೂಜೆಯನ್ನು ಹರಕೆ ಹೊತ್ತು ತಮ್ಮ ಅಭೀಷ್ಟ ನೆರವೇರಿಸಿಕೊಳ್ಳುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಜೈನೇತರ ಭಕ್ತಾದಿಗಳಿಂದಲೂ ಈ ಸೇವೆ ನಡೆಯುತ್ತಾ ಇದೆ. ಇಲ್ಲಿ ಹರಕೆಯ ಲಕ್ಷ ಹೂವಿನ ಪೂಜೆಯು ವರ್ಷಪೂರ್ತಿ ನಡೆಯುತ್ತಿರುತ್ತದೆ. . ಹೊಂಬುಚ್ಚ ಕ್ಷೇತ್ರಕ್ಕೆ ಹೊತ್ತ ಹರಕೆಯ ಸೇವೆಯನ್ನು ಈ ಕ್ಷೇತ್ರದಲ್ಲಿ ನೆರವೇರಿಸಲಾಗುವುದು. ಇದು ಇಲ್ಲಿನ ಇನ್ನೊಂದು ವಿಶೇಷತೆಯಾಗಿರುತ್ತದೆ. ಇಲ್ಲಿ ಅಮ್ಮನವರ ಸನ್ನಿಧಿಯಲ್ಲಿ ಹೂ ಹಾಕಿ ನೋಡುವ ಸಂಪ್ರದಾಯವಿದ್ದು, ಊರ ಹಾಗೂ ಪರವೂರ ಜೈನ, ಜೈನೇತರ ಭಕ್ತಾದಿಗಳು ಬರುತ್ತಾರೆ. ಅಲ್ಲದೆ ಸನ್ನಿಧಿಯಲ್ಲಿ ವಿವಾಹ ಕಾರ್ಯಗಳನ್ನು ನೆರವೇರಿಸಿಕೊಳ್ಳುತ್ತಾರೆ.
ಮೂಲಸ್ವಾಮಿ ಬಿಂಬ ಕಪ್ಪು ಶಿಲೆಯದ್ದಾಗಿದ್ದು, 12 ಇಂಚು ಎತ್ತರವಿದೆ. ಮೂರ್ತಿಯು ನಿಂತ ಭಂಗಿಯಲ್ಲಿದ್ದು, ಸುತ್ತಲೂ ಕಂಚಿನ ಪ್ರಭಾವಳಿ ಇದೆ. ಸ್ವಾಮಿಗೆ ನಿತ್ಯವೂ ಜಲ, ಕ್ಷೀರ, ಗಂಧಾಭಿಷೇಕಗಳು ನಡೆಯುತ್ತವೆ. ವಜ್ರಲೇಪನ ಮಾಡಿರುವು ದಿಲ್ಲ. ಸ್ವಾಮಿಗೆ ವಾರ್ಷಿಕ ಪೂಜೆ, ದೀಪೋತ್ಸವ, ಧನುಪೂಜೆಗಳು ನಡೆಯುತ್ತವೆ. 1960ನೇ ಇಸವಿಯಲ್ಲಿ ಬಸದಿಯು ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದು ಪೂಜೆ ಮಾಡುವರೇ ಒಳ ಪ್ರವೇಶಕ್ಕೂ ಅಸಾಧ್ಯವಾಗಿತ್ತು. ಆದರೂ ಇಲ್ಲಿನ ಹಿರಿಯ ಅರ್ಚಕರಾದ ದಿ ಮಲ್ಲಿನಾಥ ಇಂದ್ರರು ದೃಢ ಮನಸ್ಸಿನಿಂದ ಒಳಹೊಕ್ಕು ಪೂಜೆ ನೆರವೇರಿಸುತ್ತಾ ಇದ್ದರು. ಒಂದು ದಿನ ಬುಡೋಳಿ ದಿ ಧರ್ಮಪಾಲ ಚೌಟರು ಮತ್ತು ಅವರ ಭಾವ ನಾಭಿರಾಜ ಕೆಲ್ಲರಿಗೆ ಜಮೀನು ಕೇಸಿನಲ್ಲಿ ಕಂಟಕ ಬಂದಾಗ ಏನೂ ತೋಚದೆ ಎಲ್ಲಾ ಭಾರವನ್ನು ಇಲ್ಲಿ ಶ್ರೀ ಪದ್ಮಾವತೀ ಅಮ್ಮನವರ ಸನ್ನಿಧಿಯಲ್ಲಿ ಬಂದು ಪೂಜೆ ನೆರವೇರಿಸಿ ತಮ್ಮ ಅಳಲನ್ನು ತೋಡಿಕೊಂಡು ಜಮೀನು ಕೇಸಿನಲ್ಲಿ ಜಯವಾದರೆ ಕೂಡಲೇ ಈ ಬಸದಿಯ ಜೀರ್ಣೋದ್ಧಾರವನ್ನು ಕೈಗೆತ್ತಿಕೊಳ್ಳುವುದಾಗಿ ಪ್ರಾರ್ಥಿಸಿ ಕೊಂಡರು. ಕೇಸಿನಲ್ಲಿ ಜಯವನ್ನು ಕಂಡುಕೊಂಡು ಬಸದಿಯನ್ನು ದಾನಿಗಳ ಸಹಾಯದಿಂದ ಸಂಪೂರ್ಣವಾಗಿ ಜೀರ್ಣೋದ್ಧಾರಗೊಳಿಸಿದರು.
ಅನಂತರ ಬಸದಿಯ ಪೂಜಾದಿ ಕಾರ್ಯಗಳು ನಡೆಯುತ್ತಾ ಇದ್ದು, ಶುಕ್ರವಾರದಂದು ಬೆಳಿಗ್ಗೆ, ಮಧ್ಯಾಹ್ನ, ಸಾಯಂಕಾಲ ಪೂಜೆ ನಡೆಯುತ್ತಿದ್ದು, ಬಾಕಿ ಉಳಿದ ದಿವಸಗಳಲ್ಲಿ ಬೆಳಿಗ್ಗೆ ಪೂಜೆ ನಡೆಯುತ್ತದೆ. ಇತ್ತೀಚೆಗೆ 1991ರಲ್ಲಿ ಧಾಮ ಸಂಪ್ರೋಕ್ಷಣೆ ನಡೆದಿರುತ್ತದೆ. ಬಸದಿಯಲ್ಲಿ ಪಂಚಪರ್ವಗಳಲ್ಲದೆ ಶ್ರಾವಣ ಮಾಸದ ಪೂಜೆ, ನವರಾತ್ರಿ ಪೂಜೆ ಧನುರ್ಮಾಸದ ಪೂಜೆ, ಅನಂತ ನೋಂಪಿ, ಶುಕ್ರವಾರ ನೋಂಪಿಗಳು ನಡೆಯುತ್ತವೆ. ಬಸದಿಯಲ್ಲಿ ಕ್ಷೇತ್ರಪಾಲ ಸನ್ನಿಧಿ ಇದೆ. ಅದರಲ್ಲಿ ತ್ರಿಶೂಲ, ನಾಗರಕಲ್ಲುಗಳಿದ್ದು ಪೀಠದಲ್ಲಿ ಪ್ರತಿಷ್ಠಾಪಿಸಲಾಗಿದೆ. ಬಲಿಕಲ್ಲು, ಅಷ್ಟದಿಕಾಲಕರ ಕಲ್ಲು ಇವೆ. ಬಸದಿಯ ಸುತ್ತಲೂ ಕೆಂಪುಕಲ್ಲಿನ ಕಂಪೌಂಡ್ ವಾಲ್ ಇದೆ. ಬಸದಿಗೆ ಆಫೀಸು ಇದ್ದು, ಬಸದಿಯ ಸಮೀಪದಲ್ಲಿ ಭಕ್ತಾದಿಗಳ ಅನುಕೂಲಕ್ಕಾಗಿ ಸಮುದಾಯ ಭವನ ನಿರ್ಮಾಣ ಹಂತ ದಲ್ಲಿದೆ.
ಅಜ್ಜಿಬೆಟ್ಟು ಬಸದಿಗೆ ಸುವರಾರು 600 ವರ್ಷಗಳ ಇತಿಹಾಸವಿದ್ದು ಆ ಕಾಲದಿಂದಲೂ ವಿಶೇಷ ಪೂಜೆ ಪುರಸ್ಕಾರಗಳು, ಅತಿಥಿ ಸತ್ಕಾರಗಳು, ದಾನ ಧರ್ಮಾದಿಗಳು ನಡೆಯುತ್ತಿದ್ದವು.