Nerenki.com

Shanthinatha Swamy Basadi Arikal

Dakshina Kannada district, Karnataka

Shanthinatha Basadi Arikal -319

ಶ್ರೀ ಶಾಂತಿನಾಥ ಬಸದಿ, ಆರಿಕಲ್ಲು ಅಂಕಲ್ಲು ಶ್ರೀ ಶಾಂತಿನಾಥ ಸ್ವಾಮಿ ಬಸದಿಯು ಬಂಟ್ವಾಳ ತಾಲೂಕು ಕಡೇಶಿವಾಲಯ ಗ್ರಾಮದಲ್ಲಿದೆ. ಇದೇ ತಾಲೂಕಿನ ಬಾಳೆಲ ಶ್ರೀ ಆದಿನಾಥ ಸ್ವಾದ ಬಸದಿಯು ಇದಕ್ಕೆ ಹತ್ತಿರದಲ್ಲಿದ್ದು 15 ಕಿ.ಮೀ. ಅಂತರದಲ್ಲಿದೆ. ಈ ಪರಿಸರದಲ್ಲಿ ಜೈನ ಶಾವಕರ ಮನೆಗಳು ಕಡಿಮೆ ಇರುವುದರಿಂದ ಇಲ್ಲಿಯ ಕಾರ್ಯಕ್ರಮಗಳಿಗೆ ಪರಿಸರದಲ್ಲಿರುವ ನೇಹರ ಬಂದಾಗಳೂ ಈ ಜಿನಾಲಯಕ್ಕೆ ಭಯ ಭಕ್ತಿಯಿಂದ ನಡೆದುಕೊಳ್ಳುತ್ತಾರೆ. ಶ್ರೀ ಜೈನಮಠದ ಧಾರ್ಮಿಕ ವ್ಯಾಪ್ತಿಗೆ ಒಳಪಟ್ಟಿದೆ. ಈಗ ಈ ಬಸದಿಯು ಆಧುನಿಕ ರೀತಿಯಲ್ಲಿ ಕಂಡು ಬಂದಿದ್ದು ಹಂಚಿನ ಮಾಡನ್ನು ಹೊಂದಿದೆ. ಇದರ ನಿರ್ಮಾಣದ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಿಲ್ಲದಿದ್ದರೂ ಸುಮಾರು ನೂರು ವರ್ಷಗಳ ಹಿಂದೆ ಅಮ್ಮು ಪಡಿವಾಳ ಎಂಬವರು ಇದನ್ನು ನಿರ್ಮಿಸಿದ್ದರು ಎಂದು ಹೇಳಲಾಗುತ್ತದೆ. ಶ್ರೀ ಅಮರನಾಥ ಅಜಿಲರ ಅಧ್ಯಕ್ಷತೆಯಲ್ಲಿ ಬಸದಿಯ ದೈನಂದಿನ ಕಾರ್ಯಕ್ರಮಗಳು ನಡೆಯುತ್ತವೆ.  ಬಸದಿಯ ಪೌರೋಹಿತ್ಯವನ್ನು ಶ್ರೀ ಪಾದ ಇಂದ್ರರು ನಿರ್ವಹಿಸುತ್ತಾರೆ. ಪೂಜ್ಯ ಬಸದಿಯ ಪ್ರವೇಶ ದ್ವಾರದ ಇಕ್ಕೆಲಗಳಲ್ಲಿ ದ್ವಾರಪಾಲಕರ ವರ್ಣಚಿತ್ರಗಳಿವೆ. ಬಲಬದಿಯ ಗೋಡೆಯ ಮೇಲೆ ಸರಸ್ವತಿ ಮತ್ತು ಎಡಬದಿಯ ಗೋಡೆಯ ಮೇಲೆ ಲಕ್ಷ್ಮೀಯ ವರ್ಣಚಿತ್ರಗಳನ್ನು ಕಾಣಬಹುದು. ಒಳಗೆ ಪ್ರವೇಶಿಸಿದಾಗ ಸಿಗುವ ಪ್ರಾರ್ಥನಾ ಮಂಟಪದಲ್ಲಿ ನಾಲ್ಕು ಕಂಬಗಳಿರುವ ಮಂಟಪ ಇಲ್ಲದಿದ್ದರೂ ಇಲ್ಲಿ ಜಯಘಂಟೆ ಮತ್ತು ಜಾಗಟೆ ಗಳನ್ನು ತೂಗಿ ಹಾಕಲಾಗಿದೆ. ಇದಕ್ಕಿಂತ ಮುಂದೆ ಇರುವ ಮಂಟಪದಲ್ಲಿ ಗಂಧಕುಟಿ ಇದೆ. ಆದರೆ ಇಲ್ಲಿ ಯಾವುದೇ ಹೆಚ್ಚಿನ ಪೂಜಾ ಮೂರ್ತಿಗಳಿಲ್ಲ. ಬಳಿಯಲ್ಲಿ ಶ್ರೀ ಪದ್ಮಾವತೀ ದೇವಿಯ ಮೂರ್ತಿ ಇದ್ದು ಅದಕ್ಕೆ ಸೀರೆ ಉಡಿಸಿ. ಬಳೆಗಳನ್ನು ಹಾಕಿ ಪೂಜೆ ಮಾಡಲಾಗುತ್ತದೆ, ದೇವಿಯ ಕಾಲಿನ ಬಳಿಯಲ್ಲಿ ಕುಕ್ಕುಟ ಸರ್ಪವಿದೆ. ಇಲ್ಲಿಯ ಮರಿಯ ಕಾಲಿನ ಬಳಿಯಲ್ಲಿ ಎದುರು ಹೂ ಹಾಕಿ ಹರಿಯ ಹುಂಬುಚದಂತೆ ಆಮ್ಮನವರ ಕೇಳುವ ಪದ್ಧತಿ ಇದೆ. ಅದು ಕೊಡುವ ಅಥವಾ ಅನುಮತಿ ಮೇಲೆ ಹಳೆಯ ಬರದಲ್ಲಿರುವ ಕಂಡಾವುದೇ ಬೆಂಬ ಗರ್ಭಗೃಹದಲ್ಲಿ ಶ್ರೀ ಶಾಂತಿನಾಥ ಸ್ವಾಮಿಯ ಪಂಚ ಲೋಹದ ವಿಗ್ರಹವಿದೆ. ವಿದ್ಯಾಸನ ಭಂಗಿಯಲ್ಲಿರುವ ಈ ಮೂರ್ತಿಯ ಮೂರು ಬದಿಯಲ್ಲಿ ಮಕರ ತೋರಣದ ಅಲಂಕಾರವಿರುವ ಪ್ರಭಾವಳಿಯಿದೆ. ದಿನವೂ ಬಸದಿಯ ಈ ಮೂಲ ಸ್ವಾಮಿಗೆ ಕ್ಷೀರಾಭಿಷೇಕ, ಜಲಾಭಿಷೇಕ ಇತ್ಯಾದಿಗಳನ್ನು ಮಾಡಿ ಪೂಜೆಯನ್ನು ನೆರವೇರಿಸಲಾಗುತ್ತದೆ. ಇಲ್ಲಿ ಮೂರು ಬಾರಿಯ ಪೂಜೆಯ ಬದಲು ಶ್ರಾವಕರ ಅನುಕೂಲದ ಅನುಸಾರ ದಿನಕ್ಕೆ ಒಂದು ಬಾರಿ ಪೂಜೆಯನ್ನು ನಡೆಸಲಾಗುತ್ತದೆ. ಜೀರ್ಣಗೊಂಡಿದ್ದ ಈ ಬಸದಿಯನ್ನು ಇತ್ತೀಚೆಗೆ ಪುನರ್ ನವೀಕರಿಸಲಾಗಿದೆ. ಬಸದಿಯ ಪ್ರಾಂಗಣದ ಮೂಲೆಯಲ್ಲಿ ಕ್ಷೇತ್ರಪಾಲನ ಸನ್ನಿಧಿ ಇದೆ. ಹತ್ತಿರದಲ್ಲಿ ಚರಸ್ಥಿತಿಯಲ್ಲಿರುವ ಇತರ ಯಾವುದೇ ಮೂರ್ತಿಗಳಿಲ್ಲ. ಹಿಂದೆ ಬಸದಿಯ ಸುತ್ತಲೂ ಆವರಣ ಗೋಡೆಯನ್ನು ನಿರ್ಮಿಸಿದ್ದು ಈಗ ಆದು ಜೀರ್ಣಗೊಂಡಿದೆ.  ಬಸದಿಯ ಸಂಪರ್ಕಕ್ಕೆ ಮೊ.: 9845450602

Deities & Specialities

Purohith

Mahendra Indra

9741846612

  1. [object Object]