Dakshina Kannada district, Karnataka
ಶ್ರೀ ಆದಿನಾಥ ಸ್ವಾಮಿ ಬಸದಿ, ಬಾಳ್ತಿಲ ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದಲ್ಲಿ ಈ ಬಸದಿ ಯಿದ್ದು ಶ್ರೀ ಆದಿನಾಥ ಸ್ವಾಮಿಯನ್ನು ಮೂಲ ನಾಯಕನಾಗಿ ಪೂಜಿಸಲಾಗುತ್ತದೆ. ಬಸದಿಯ ಪಕ್ಕದಲ್ಲಿ ಇಂದ್ರರ ಮನೆ ಮತ್ತು ಬಾಳ್ತಿಲ ಬೀಡು ಇದೆ. ಇದಕ್ಕೆ ಹತ್ತಿರದ ಇನ್ನೊಂದು ಬಸದಿಯೆಂದರೆ ಸುಮಾರು ಹದಿಮೂರು ಕಿ.ಮೀ. ದೂರ ವಿರುವ ಪಾಣೆಮಂಗಳೂರಿನ ಶ್ರೀ ಶಾಂತಿನಾಥ ಸ್ವಾಮಿ ಬಸದಿ. ಈ ಬಸದಿಗೆ ಸಂಬಂಧಪಟ್ಟ ಮನೆಗಳೆಂದರೆ, ಸುಗಂಧಿಯಮ್ಮ ಬರಿಮಾರು ಮನೆ, ಚಂದಯ್ಯ ಶೆಟ್ಟಿ ಬಾಳ್ತಿಲ ಕೊಡಂಗೆ ಮನೆ. ಧರ್ಮರಾಜ ಬಂಗ ಬಾಳ್ತಿಲ ಬೀಡು ಮನೆ ನೇಮಿರಾಜ ಜೈನ್ ಗಾಡ್ ಗಿಫ್ಟ್ ಗಾಂಧೀಜಿ ರಸ್ತೆ ಮೆರಿಹಿಲ್ ಮಂಗಳೂರು, ಶ್ರೀಮತಿ ಶ್ರೀಯಲಾ ದೇವಿ ಬುರ್ದು ಮನೆ. ಮೋಹನ್ ರಾಜ್ ಚೌಟ ಅಮ್ಮೂರು ಗುತ್ತು, ನಿರ್ಮಲ ಕಾಂತಿಲಾಲ್ ಅಂಗಡಿ ಮನೆ ಬಾಳ್ತಿಲ, ಅಜಿತ್ ಕುಮಾರ್ ಜೈನ್ ದಾಸರ ಗುಡ್ಡೆ ಮನೆ, ಶ್ರೀಮತಿ ವಸಂತಿ ಪಾಪೆತ್ತಿಮಾರು ಮನೆ, ಕೆ. ರಾಜರತ್ನ ಕೊಡಂಗೆ ಮನೆ ಬಾಳ್ತಿಲ, ಬ್ರಿಜೇಶ್ ಜೈನ್ ಬಾಳ್ತಿಲ ಬೀಡು, ರತ್ನವರ್ಮ ಇಂದ್ರ ಬಾಳ್ತಿಲ ಬಸದಿ ಮನೆ, ಚಂದ್ರರಾಜ್ ಜೈನ್ ಸದ್ಧರ್ಮ ನಿಕೇತನ, ಜಿನರಾಜ ಅತಿಕಾರಿ ಬಾಳ್ತಿಲ ಕೋರ್ದು, ನಿರಂಜನ್ ಕುಮಾರ್ ಜೈನ್ ಅಮ್ಮೂರು ಪಟೇಲ್ ಮನೆ, ಬಿ. ವೃಷಭರಾಜ್ ಜೈನ್ ಪದ್ಮಾ ನಿಲಯ ಬರಿಮಾರು, ಉದಯ ಕುಮಾರ್ ಜೈನ್ ಸಣ್ಣಕುಕ್ಕು ಪದ್ಮನಿವಾಸ, ಜಗದೀಶ್ ಜೈನ್ ಲಕ್ಷ್ಮೀ ನಿವಾಸ, ಶ್ರೀ ಪಾಲ್ ಹೆಗ್ಡೆ ಜೈನ್ ಕಂಪೌಂಡ್. ಈ ಎಲ್ಲಾ ಕುಟುಂಬಗಳು ತಿಂಗಳಿಗೆ ಒಂದು ಬಾರಿ ಬಸದಿಗೆ ಭೇಟಿ ನೀಡುತ್ತವೆ. ಇದು ಮೂಡಬಿದಿರೆ ಜೈನ ಮಠದ ಧಾರ್ಮಿಕ ವ್ಯಾಪ್ತಿಗೆ ಒಳಪಟ್ಟಿದೆ. ಕಲ್ಲಡ್ಕ-ಉಪ್ಪಿನಂಗಡಿ ರಸ್ತೆಯಲ್ಲಿ ಸೂರಿಕುಮೇರಿ ಎಂಬ ಪ್ರದೇಶದಲ್ಲಿ ಎಡಕ್ಕೆ ತಿರುಗಿ ಒಳ ರಸ್ತೆಯಲ್ಲಿ ಸುಮಾರು 3 ಕಿಲೋಮೀಟರ್ ಸಾಗಿದರೆ ಈ ಬಸದಿಯನ್ನು ಸಂಪರ್ಕಿಸಬಹುದು. ಬಸದಿಯ ಗೋಡೆ ಹಾಗೂ ನೆಲಕ್ಕೆ ಗ್ರಾನೈಟ್ ಹಾಸಿ ಟೆರೇಸಿನಿಂದ ಮುಚ್ಚಿಗೆ ಮಾಡಲಾಗಿದೆ. ಶ್ರೀ ಮಹಾವೀರ ಪ್ರಸಾದ್ ಮಾಣಿ ಇವರು ಇದರ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷರಾಗಿದ್ದಾರೆ. ಈ ಬಸದಿಯು ದೇವರಾಜ್ ರೈಗಳ ಪ್ರೋತ್ಸಾಹದಿಂದ ಬಾಳಿಲ ಬೀಡಿನ ನಾಭಿರಾಜ ಬಂಗರಿಂದ 1959ರಲ್ಲಿ ಕಟ್ಟಿಸಲ್ಪಟ್ಟಿತೆಂದು ಹೇಳಲಾಗುತ್ತದೆ. ಆ ಕುಟುಂಬದವರು ಬಾಳ್ತಿಲ ವಾಸವಾಗಿದ್ದಾರೆ. ಈ ಬಸದಿಯು ಆಗ ಹಾಳೆ ಬೀಡಿನಲ್ಲಿ ರಲ್ಲಿ ಜೀರ್ಣೋದ್ಧಾರಗೊಂಡಿದೆ. ಇದರ ಇತಿಹಾಸದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬರುವುದಿಲ್ಲ. ಇಲ್ಲಿ ಮೇಗಿನ ನೆಲೆ ಇದ್ದು, ಅಲ್ಲಿ ಭಗವಾನ್ ಶ್ರೀ ಆದಿನಾಥ ಸ್ವಾಮಿಯನ್ನು ಪೂಜಿಸಲಾಗುತ್ತದೆ. ಈ ಬಸದಿಯಲ್ಲಿ ಪದ್ಮಾವತಿ ಅಮ್ಮನವರ ಎರಡು ಮೂರ್ತಿಗಳಿದ್ದು ಒಂದು ಮೂರ್ತಿಯನ್ನು ಗರ್ಭಗುಡಿಯಲ್ಲಿ ಇನ್ನೊಂದು ಮೂರ್ತಿಯನ್ನು ಹೊರಗಿನ ಸಭಾ ಮಂಟಪದಲ್ಲಿ ಪೂಜಿಸಲಾಗುತ್ತದೆ. ಬಸದಿಯ ಬಳಿಯಲ್ಲಿ ಒಂದು ಪಾರಿಜಾತ ಹೂವಿನ ಗಿಡವಿದ್ದು ಬೇರೆ ಹೂವಿನ ಗಿಡಗಳನ್ನೂ ಕಾಣಬಹುದು. ಬಸದಿಯ ಗೋಡೆಗಳಲ್ಲಿ ದ್ವಾರಪಾಲಕರ ಅಂದವಾದ ವರ್ಣಚಿತ್ರವಿದ್ದು, ಹೂವಿನ ಮಾಲೆಯನ್ನು ಹಾಕಿ ಅಲಂಕಾರಗೊಳಿಸಲಾಗಿದೆ. ಪ್ರಾರ್ಥನಾ ಮಂಟಪದಲ್ಲಿ ನಾಲ್ಕು ಕಂಬಗಳಿರುವ ಮಂಟಪ ಇಲ್ಲ. ಆದರೆ ಜಯಘಂಟೆ ಜಾಗಟೆ ಗಳನ್ನು ತೂಗಿ ಹಾಕಲಾಗಿದೆ. ಗಂಧಕುಟಿಯು ತೀರ್ಥಂಕರ ಮಂಟಪದಲ್ಲಿದ್ದು ಅದರಲ್ಲಿ 24 ತೀರ್ಥಂಕರ ಬಿಂಬಗಳನ್ನು ಪ್ರತಿಷ್ಠಾಪಿಸ ಲಾಗಿದೆ. ಪದ್ಮಾವತಿ ಅಮ್ಮನವರ ಮೂರ್ತಿಯು ದಕ್ಷಿಣಕ್ಕೆ ಮುಖ ಮಾಡಿಕೊಂಡಿದ್ದು, ಅಲಂಕಾರ ಮಾಡಿ ಪೂಜಿಸ ಲಾಗುತ್ತದೆ. ಈ ಅಮ್ಮನವರೆದುರು ಹೊಂಬುಚ್ಚದಂತೆ ಹೂ ಹಾಕಿ ನೋಡುವ ಕ್ರಮವಿದ್ದು, ಏನಾದರು ಹರಕೆ ಹೇಳಿದರೆ ಇಷ್ಟಾರ್ಥ ಸಿದ್ಧಿಯಾಗುತ್ತದೆಂಬ ನಂಬಿಕೆ ಜನರಲ್ಲಿದೆ.
ಮೂಲಸ್ವಾಮಿಯ ಪರಂಕಾಸನ ಭಂಗಿಯಲ್ಲಿರುವ ಬಿಂಬವು ಬಿಳಿ ಶಿಲೆಯಲ್ಲಿದ್ದು, ಸುಮಾರು ಮೂರು ಅಡಿ ಎತ್ತರವಿದೆ. ಸ್ವಾಮಿಯ ಸುತ್ತಲೂ ಮಕರ ತೋರಣ ಪ್ರಭಾವಳಿ ಯಿದೆ. ನಿತ್ಯವೂ ಮೂಲಸ್ವಾಮಿಗೆ ಜಲಾಭಿಷೇಕ ಪಂಚಾಮೃತ ಅಭಿಷೇಕ, ಕ್ಷೀರಾಭಿಷೇಕಗಳನ್ನು ಮಾಡಲಾಗುತ್ತದೆ. ಇಲ್ಲಿ ದಿನದಲ್ಲಿ ಬೆಳಿಗ್ಗೆ ಮತ್ತು ಸಂಜೆ ಎರಡು ಹೊತ್ತು ಪೂಜೆ ನಡೆಯುತ್ತದೆ. ಮಹಾವೀರ ಜಯತಿ, ಜೀವದಯಾಷ್ಟಮಿ, ಮುಂತಾದ ಹಬ್ಬಗಳನ್ನು ಆಚರಿಸಲಾಗುತ್ತದೆ. ಬಸದಿಯ ಬಲ ಮೂಲೆಯಲ್ಲಿ ಕ್ಷೇತ್ರಪಾಲನ ಸನ್ನಿಧಿ ಇದ್ರು. ಅಲ್ಲಿ ಒಂದೇ ಪೀಠದಲ್ಲಿ ಎರಡು ಮೆಟ್ಟಿಲುಗಳಂತೆ ಮಾಡಿ ಕ್ಷೇತ್ರಪಾಲನನ್ನು ಮೇಲಿನ ಮೆಟ್ಟಿಲಿನಲ್ಲಿ ಕೆಳಗೆ ನಾಗನಕಲ್ಲು ಮತ್ತು ತ್ರಿಕೂಲ ಗಳನ್ನು ಪ್ರತಿಷ್ಠಾಪಿಸಲಾಗಿದೆ. ಅಮಾವಾಸ್ಯೆಯ ದಿನ ಕ್ಷೇತ್ರಪಾಲನಿಗೆ ವಿಶೇಷ ಪೂಜೆ ನಡೆಸಲಾಗುತ್ತದೆ. ಬಸದಿಯ ಸುತ್ತಲೂ ಮುರಕಲ್ಲಿನಿಂದ ನಿರ್ಮಿಸಿದ ಭದ್ರವಾದ ಪ್ರಾಕಾರ ಗೋಡೆಯಿದೆ. . ಮಾಹಿತಿ: ರತ್ನವರ್ಮ ಅಂದ್ರ 9900965271