Dakshina Kannada district, Karnataka
ಶ್ರೀ ಪಾರ್ಶ್ವನಾಥ ಸ್ವಾಮಿ ಬಸದಿ, ಕೂಡಿಬೈಲು ರೆ. नं. 3. 4 ಬಂಟ್ವಾಳ ತಾಲೂಕಿನ ನಾವೂರು ಗ್ರಾಮದ ಅಲ್ಲಿ ಪಾದೆ ಎಂಬ ಸಣ್ಣ ಪೇಟೆಯ ಬಳಿ ಈ ಪಾರ್ಶ್ವನಾಥ ಸ್ವಾಮಿಯ ಕೂಡಿಬೈಲು ಬಸದಿ ಇದೆ. ಪಾಂತಬೈಲು ಬಸದಿಯಿಂದ ಇಲ್ಲಿಗೆ 2 ಕಂಬಳಿ ದೂರಾದಕ್ಕೆ ಸಂಬಂಧಿಸಿ ಕೆಲವು ಜೈನ ಕುಟುಂಬಗಳಿದ್ದು ಆಗಾಗ ಬರುತ್ತಿರುತ್ತಾರೆ. ಇದು ಮೂಡುಬಿದಿರೆ ಶ್ರೀ ಜೈನ ಮಠದ ಧಾರ್ಮಿಕ ವ್ಯಾಪ್ತಿಗೆ ಸೇರಿದೆ. ಈ ಬಸದಿಯನ್ನು ಶ್ರೀ ಕೆ. ನೇಮಿರಾಜ ಅಜಿಲ, ಪೃಥ್ವಿರಾಜ ಅಜಿಲ, ಡಾಕ್ಟರ್ ವಿಜಯ ಪ್ರಸಾದ್ ಮತ್ತು ಸನತ್ ಕುಮಾರ್ ಚೌಟರನ್ನೊಳಗೊಂಡ ಒಂದು ಸಮಿತಿಯು ನಡೆಸುತ್ತಿದೆ. ಇದನ್ನು ಅಜಿಲ ಮನೆತನದವರು ಕಟ್ಟಿಸಿದರು ಎಂದು ಹೇಳುತ್ತಾರೆ. ಕಾಲದೋಷದಿಂದ ಜೀರ್ಣಗೊಂಡಿದ್ದ ಈ ಬಸದಿಯನ್ನು ಕಳೆದ 2010ನೇ ಇಸವಿ ಎಪ್ರಿಲ್ ತಿಂಗಳಲ್ಲಿ ಜೀರ್ಣೋದ್ಧಾರಗೊಳಿಸಲಾಗಿತ್ತು. ಆಗ ಊರ ಪರವೂರ ಧರ್ಮ ಬಂಧುಗಳಿಂದ ವಿಶೇಷವಾದ ಸಹಾಯಗಳು ಬಂದಿದ್ದವು. ಹಂಚಿನ ಮಾಡಲಿ ಇರುವ ಈ ಬಸದಿಗೆ ಮೇಗಿನ ನೆಲೆಯೂ ಇದೆ. ಅಲ್ಲಿ ಶ್ರೀ ಅನಂತನಾಥ ಸ್ವಾಮಿ ಪೂಜಿಸಲ್ಪಡುತ್ತಿ327ದ್ದಾರೆ. ಈ ಬಸದಿಗೆ ಮಾನಸ್ತಂಭವಿಲ್ಲ. ಕೆಳಗೆ ಗರ್ಭಗೃಹದಲ್ಲಿ ಶ್ರೀ ಪಾರ್ಶ್ವನಾಥ ಸ್ವಾಮಿಯ ಜತೆಯಲ್ಲಿ ಪದ್ಮಾವತಿ ಅಮ್ಮನವರ ಮೂರ್ತಿಯೂ ಇದೆ. ಇದಕ್ಕೂ ಶ್ರದ್ಧಾ, ಭಕ್ತಿಗಳಿಂದ ಪೂಜೆಯು ನಡೆಯುತ್ತಿದೆ. ಬಸದಿಯ ಪ್ರಾಂಗಣದಲ್ಲಿ 2 ಪಾರಿಜಾತ ಹೂವಿನ ಗಿಡಗಳೂ ವಿವಿಧ ಇತರ ಜಾತಿಯ ಹೂವಿನ ಗಿಡಗಳೂ ಇವೆ. ಬಸದಿಯ ಪ್ರಾರ್ಥನಾ ಮಂಟಪಕ್ಕೆ ಮುಂದುವರೆಯುವಾಗ ಸಿಗುವ ದ್ವಾರದ ಎರಡೂ ಬದಿಗಳಲ್ಲಿ ದ್ವಾರಪಾಲಕರ ವರ್ಣ ಚಿತ್ರಗಳಿವೆ. ಗೋಡೆಗಳ ಮೇಲೆ ಸಂಮೇದ ಶಿಖರ್ಜಿ ಮತ್ತು ಗಿರ್ನಾರ್ ಕ್ಷೇತ್ರವನ್ನು ಪರಿಚಯಿಸುವ ವರ್ಣಚಿತ್ರಗಳನ್ನು ಬಿಡಿಸಲಾಗಿದೆ. ಒಳಗಿನ ಪ್ರಾರ್ಥನಾ ಮಂಟಪದಲ್ಲಿ ಜಯಗಂಟೆ ಮತ್ತು ಜಾಗಟೆಗಳನ್ನು ತೂಗಿ ಹಾಕಲಾಗಿದೆ. ಇವುಗಳನ್ನು ದಾಟಿ ಮುಂದುವರೆದಾಗ ಸಿಗುವ ಮಂಟಪವೇ ತೀರ್ಥಂಕರ ಮಂಟಪ ತೀರ್ಥಂಕರ ಮಂಟಪದ ಮುಂದಿನ ಮಂಟಪದಲ್ಲಿ ಗಂಧಕುಟ ಅವರ ಬಳೆ ಮಲ್ಲಿ ಪತ್ರಮಂದಿನ ಮಂಟಪದಲ್ಲಿ ದೇವರು ಮುಂಬಾಯಲ್ಲಿ ಹುತ ಗಣದರ ಪಾವು ಬನ್ನ ಯಾವಾಗಲೂ ಪೂಜೆ ನಡೆರಬತ್ತಿಗೆಗಳು ಇವುಗಳಿಗೆ ಪ್ರಮುಖ ಆಕರ್ಷಣೆ ಶ್ರೀ ಪದ್ಯಾವ ಈ ಮ ದೇವಿಗೆ ಸೀರೆ ಉಡಿಸಿ ಬಳೆಗಳನ್ನು ಹಾಕಿ ಹೂವಿನಿಂದ ಆಲಂಕಾರ ಮಾಡಿ ಪೂಜೆ ಮಾಡಲಾಗುತ್ತದೆ. ಅದ್ಭಾನವರು ಉತ್ತರಕ್ಕೆ ಮುಖ ಮಾಡಿಕೊಂಡಿದ್ದು ತನ್ನ ಕಾಲ ಬಳಿಯಲ್ಲಿ ಕುಕ್ಕುಟ ಸರ್ಪವನ್ನು ಹೊಂದಿದ್ದಾರೆ. ಈ ಬಸದಿಯಲ್ಲಿ ಏಪ್ರಿಲ್ ತಿಂಗಳಲ್ಲಿ ವಾರ್ಷಿಕೋತ್ಸವ ನಡೆಯುತ್ತಿದ್ದು ಸುತ್ತಮುತ್ತಲೂ ಜನರನ್ನು ಆಕರ್ಷಿಸುತ್ತದೆ ನಿತ್ಯ ಪೂಜೆ ಸಮಯದಲ್ಲಿ ಪದ್ಮಾವತಿ ಅಮ್ಮನವರಿಂದ ಪ್ರಸಾದ ನೋಡುವ ಕ್ರಮ ಇದೆ. ಇಲ್ಲಿ ಪೂಜಿಸಲ್ಪಡುವ ಮೂಲಸ್ವಾಮಿ ಶ್ರೀ ಪಾರ್ಶ್ವನಾಥನ ಬಿಂಬವು ಶಿಲೆಯಿಂದ ಮಾಡಲ್ಪಟ್ಟಿದೆ. ಪರ್ಯಂಕಾಸ ಧಂಗಿಯಲ್ಲಿದೆ. ಸುತ್ತಲೂ ಪ್ರಭಾವಳಿಯನ್ನು ಹೊಂದಿದೆ. ಶ್ರೀ ಸ್ವಾಮಿಗೆ ದಿನವೂ ಕ್ಷೀರಾಭಿಷೇಕ, ಜಲಾಭಿಷೇಕ, ಪಂಚಾಮೃತ ಅಭಿಷೇಕ ಇತ್ಯಾದಿಗಳನ್ನು ನಡೆಸಲಾಗುತ್ತದೆ. ವಜ್ರ ಲೇಪನವಾಗಿರುವ ಈ ಬಿಂಬವು ವಿಶೇಷ ಪೂಜಾ ಸಮಯದಲ್ಲಿ ಬಹಳ ಆಕರ್ಷಕವಾಗಿ ಕಾಣುತ್ತದೆ. ನವರಾತ್ರಿ ಮತ್ತು ದೀಪಾವಳಿ ಸಮಯದಲ್ಲಿ ವಿಶೇಷ ಸಮಯಗಳಲ್ಲಿ ಮಾಡಲಾಗುತ್ತದೆ. ಉಳಿದ ದಿನಗಳಲ್ಲಿ ಬೆಳಿಗ್ಗೆ ಮತ್ತು ಸಾಯಂಕಾಲ ಹೀಗೆ ಎರಡು ಬಾರಿ ಪೂಜೆ ನಡೆಯುತ್ತದೆ. ಬಸದಿಯನ್ನು ಜೀರ್ಣೋದ್ಧಾರಗೊಳಿಸಿ 2010ನೇ ಇಸವಿ ಎಪ್ರಿಲ್ ತಿಂಗಳಲ್ಲಿ ಪಂಚಕಲ್ಯಾಣ ಕಾರ್ಯಕ್ರಮವನ್ನು ನಡೆಸಲಾಗಿದೆ. ಅಂಗಣದ ಬಲಬದಿಯಲ್ಲಿ ಕ್ಷೇತ್ರಪಾಲನ ಸನ್ನಧಿ ಇದ್ದು ಅಲ್ಲಿ ಕೆಲವು ಮೂರ್ತಿಗಳು ತ್ರಿಶೂಲ ಹಾಗೂ ನಾಗರ ಕಲ್ಲುಗಳನ್ನು ಹೊಂದಿದೆ. ಇಲ್ಲಿಗೂ ಪೂಜೆ ನಡೆಯುತ್ತದೆ. ಗರ್ಭಗೃಹದ ಸುತ್ತಲೂ ಬಲಿಕಲ್ಲುಗಳು ಮತ್ತು ಅಷ್ಟದಿಕಾಲಕರ ಕಲ್ಲುಗಳು ಇದೆ. ಇವುಗಳಿಗೂ ಪೂಜೆಯನ್ನು ನಡೆಸಲಾಗುತ್ತದೆ.
ಬಸದಿಯ ಸುತ್ತಲೂ ಮುರಕಲ್ಲಿನ ಪ್ರಾಕಾರ ಗೋಡೆಯನ್ನು ನಿರ್ಮಿಸಲಾಗಿದೆ. ಈ ಬಸದಿಗೆ ಮುಖ್ಯವಾಗಿ ಮೂಡುಬಿದಿರೆ ಮಠದ ಭಟ್ಟಾರಕರು ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿಗಳು ಕೆಲವು ಸಲ ಭೇಟಿ ನೀಡಿದ್ದಾರೆ. ಹಾಗೂ ಜೀರ್ಣೋದ್ದಾರ ಕಾರ್ಯಕ್ಕೆ ದೇಣಿಗೆಯನ್ನು ನೀಡಿದ್ದಾರೆ. ಬಸದಿಗೆ ಉತ್ತಮ ರೀತಿಯ ನೀರು ಸರಬರಾಜಿನ ವ್ಯವಸ್ಥೆಯನ್ನು ಕೈಗೊಳ್ಳಲು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದ್ದು ಸಹಾಯ ಧನವನ್ನು ನಿರೀಕ್ಷಿಸಲಾಗುತ್ತಿದೆ. ಹೊಂದಿರುವ ಕಂಬದಂತಹ ಆಕೃತಿಗಳೂ ಅವುಗಳ ಮೇಲ್ಗಡ ಮಕರ ತೋರಣದ ಅಲಂಕಾರವೂ ಇದೆ. ಮಧ್ಯದಲ್ಲಿ ಮೇಲ್ಗಡೆ ಕೀರ್ತಿ ಮುಖವೂ ಇದೆ. ಈ ಪ್ರಭಾವಳಿಯ ಅಧ್ಯಯನದಿಂದ ಈ ಜಿನ ಬಿಂಬವು ಸುಮಾರು 10-11ನೇ ಶತಮಾನಕ್ಕೆ ಸಂಬಂಧಪಟ್ಟದೆಂದು ಹೇಳಬಹುದು ಮೂಲ ಸ್ವಾಮಿಗೆ ದಿನಕ್ಕೆ ಒಂದು ಬಾಲ ಪೂಜೆಯನ್ನು ನಡೆಸಲಾಗುತ್ತದೆ. ಪರ್ವಗಳ ಸಂದರ್ಭದಲ್ಲಿ ವಿಶೇಷ ಪೂಜೆ ಹಾಗೂ ನವರಾತ್ರಿಯ ದಿನಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ಬಸದಿಯಲ್ಲಿ ಕಾರ್ತಿಕ ದೀಪೋತ್ಸವವನ್ನು ನಡೆಸಲಾಗುತ್ತದೆ. ಈ ಕ್ಷೇತ್ರವು ಜನಾದರಣೀಯವಾಗಿರುವುದು ಇಲ್ಲಿಯ ಕ್ಷೇತ್ರಪಾಲನ ಪ್ರತ್ಯೇಕವಾದ ಗುಡಿ. ಇದಕ್ಕೆ ಸಂಬಂಧಿಸಿದ ಹಲವಾರು ಶಿಲಾ ಶಾಸನಗಳು ಈ ಬ್ರಹ್ಮ ದೇವನು ಅತಿಶಯ ಕಾರಣಿಕ ಶಕ್ತಿವುಳ್ಳವನೆಂದು ವರ್ಣಿಸಿದೆ. ಆದುದರಿಂದ ಇದಕ್ಕೆ ಜೈನರು, ಜೈನೇತರರು ಬಹಳ ಭಕ್ತಿ ಭಯಗಳಿಂದ ನಡೆದುಕೊಳ್ಳುತ್ತಾರೆ. ಪ್ರಾಯಶಃ ಇಲ್ಲಿಯ ಆರಾಧನೆಯಿ 1500 ವರ್ಷಗಳಿಂದಲೂ ನಡೆಯುತ್ತಾ ಬಂದಿದೆ. ಈ ಕ್ಷೇತ್ರ ಪಾಲನ ಭಕ್ತ ಜನರು ಈತನನ್ನು ಒಟ್ಟಿಗೆರಾಯ ಬ್ರಹ್ಮ ದೇವರು ಎಂದು ಕರೆಯುತ್ತಾರೆ ಹಾಗೂ ಇವನ ಸಮ್ಮುಖದಲ್ಲಿ ನಿರಂತರವಾದ ನಂದಾ ದೀಪವು ಬೆಳಗುತ್ತಿರಬೇಕೆಂದು ಅಸಂಖ್ಯಾತ ಭಕ್ತರು ನಂದಾ ದೀಪಗಳನ್ನು ಸಮರ್ಪಿಸಿದ್ದಾರೆ. ಈ ಬ್ರಹ್ಮ ದೇವರು ಸನ್ನಿಹಿತರಾಗಿರುವ ಈ ಚಂದ್ರನಾಥ ಸ್ವಾಮಿಯ ಕ್ಷೇತ್ರಕ್ಕೆ ಅನೇಕ ಜೈನ ಮಹಾರಾಜರು ಆಗಮಿಸಿ ಸ್ವಾಮಿಯ ದರ್ಶನವನ್ನು ಪಡೆದಿದ್ದಾರೆ. ಇತ್ತೀಚೆಗೆ ಬೇರೆ ಮೂಲಗಳಿಂದ ಅಥವಾ ಸರಕಾರದಿಂದ ವಿಶೇಷ ಧನ ಸಹಾಯ ಬಾರದಿದ್ದರೂ ಊರ ಪರವೂರ ಧಾರ್ಮಿಕರ ದೇಣಿಗೆಗಳಿಂದ ಬಸದಿಯನ್ನು ನಡೆಸಿಕೊಂಡು ಹೋಗ ಬಹುದೆಂಬ ವಿಶ್ವಾಸವನ್ನು ಆಡಳಿತ ನಡೆಸುವ ಧರ್ಮ ಬಂಧುಗಳು ಆಶಯ ಹೊಂದಿದ್ದಾರೆ. ಇದರ ಉನ್ನತಿಯಲ್ಲಿ ಪಾಲ್ಗೊಳ್ಳುವುದು ಸಮಾಜದ ಕರ್ತವ್ಯವೆಂಬುದು ಅಷ್ಟೇ ಸತ್ಯವಾದುದು.