Nerenki.com

Adinatha Swamy Basadi Panjikal

Dakshina Kannada district, Karnataka

ಶ್ರೀ ಬಾಲೇಶ್ವರ ಆದಿನಾಥ ಸ್ವಾಮಿ ಬಸದಿ, ಪಂಜಿಕಲ್ಲು مد ಈ ಬಸದಿಯು ಬಂಟ್ವಾಳ ತಾಲೂಕಿನ ಪಂಜಿಕಲ್ಲು ಗ್ರಾಮದಲ್ಲಿದೆ. ಬಸದಿಯ ಹತ್ತಿರ ಈ ಊರಿನ ಪುರೋಹಿತರ ಮನೆ ಮತ್ತು ಬ್ರಹ್ಮ ಬೈದರ್ಕಳ ಹಾಗೂ ಕೊಡಮಣಿತ್ತಾಯ ದೈವದ ಗರಡಿ ಇದೆ. ಈ ಬಸದಿಗೆ ಹತ್ತಿರದಲ್ಲಿರುವ ಇನ್ನೊಂದು ಬಸದಿ ವಾಮದಪದವಿನಲ್ಲಿರುವ ಅಜ್ಜಿಬೆಟ್ಟು ಶ್ರೀ ಅದಿನಾಥಸ್ವಾಮಿ ಬಸದಿ. ಅದು ಸುಮಾರು 8 ಕಿ.ಮೀ. ದೂರದಲ್ಲಿದೆ. ಈ ಪಂಜಿಕಲ್ಲು ಬಸದಿಗೆ 15 ಶ್ರಾವಕರ ಮನೆಗಳು ಇವೆ. ಅವರು ಆಗಾಗ ಬಸದಿಗೆ ಆಗಮಿಸುತ್ತಿರು ತ್ತಾರೆ. ಬಸದಿಯು ಕಾರ್ಕಳ ಶ್ರೀ ಮಠಕ್ಕೆ ಸೇರಿದ್ದಾಗಿದೆ. ಬಂಟ್ವಾಳದಿಂದ ಮೂಡುಬಿದಿರೆ ಮಾರ್ಗವಾಗಿ 6 ಕಿ.ಮೀ. ಬಂದು ನಂತರ ಅಣ್ಣಳಿಕೆ ಎಂಬಲ್ಲಿ ಬಲಕ್ಕೆ ತಿರುಗಿ ಅಲ್ಲಿಂದ 2 ಕಿ.ಮೀ. ಕ್ರಮಿಸಿದರೆ ಬಸದಿ ಸಿಗುತ್ತದೆ. ಈ ಆದಿನಾಥಸ್ವಾಮಿ ಬಸದಿಯು ಮೂಲವಾಗಿ ಹಂಚಿನ ಮಾಡಿನದ್ದಾಗಿದ್ದು. ಈಗ Aard ಜೀರ್ಣೋದ್ಧಾರಗೊಂಡು ಶಿಲಾಮಯವಾಗುತ್ತಿದೆ. ಈಗ ಈ ಬಸದಿಯನ್ನು ಊರಿನ ಜೈನ ಪುರೋಹಿತರೇ ನಡೆಸುತ್ತಿದ್ದಾರೆ. ಅವರೇ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷರು. ಇತರ ಪ್ರಮುಖ ಸದಸ್ಯರು ಶ್ರೀ ಸುದರ್ಶನ್ ಜೈನ್, ಶ್ರೀ ಪ್ರಕಾಶ್ ಕುಮಾರ್. ಬಸದಿಯ ಇಂದ್ರರ ಹೆಸರು ಶ್ರೀ ದೇವಕುಮಾರ್ ಇಂದ್ರ, ಬಸದಿಯನ್ನು ಬಾಲೇಶ್ವರ ಕುಟುಂಬದವರು ಸುಮಾರು 200 ವರ್ಷಗಳ ಹಿಂದೆ ಕಟ್ಟಿಸಿದ್ದಾರೆ. ಆ ಮನೆಯವರು ಈಗಲೂ ಇದೇ ಊರಿನಲ್ಲಿ ದ್ದಾರೆ. ಬಸದಿ ಈಗ ಊರಿನ ಮತ್ತು ಪರವೂರಿನ ಶ್ರಾವಕರ ಮತ್ತು ಇದರ ದಾನಿಗಳ ಸಹಾಯದಿಂದ ಜೀರ್ಣೋದ್ಧಾರ ಗೊಳ್ಳುತ್ತಿದೆ. ಪ್ರಾಚೀನ ಕಾಲದಲ್ಲಿ ಈ ಗ್ರಾಮದಲ್ಲಿ ಜಾಸ್ತಿ ಹಂದಿಗಳು ಇದ್ದ ಕಾರಣ ಅವುಗಳನ್ನು ಬೇಟೆಯಾಡುವುದಕ್ಕಾಗಿ ಬೇಡರು ಕಾಡಿನಲ್ಲಿ ಹೋಗುತ್ತಿದ್ದರು. ಒಂದು ಸಂದರ್ಭಅವರು ಒಂದು ಹಂದಿಯನ್ನು ಬೇಟೆಯಾಡಿದರು. ಅದಕ್ಕೆ ಬಾಣ ಬಿಡಲು ಗುರಿ ಇಟ್ಟಾಗ ಈ ಬಸದಿಯ ಬಳಿಯಲ್ಲಿ ಬೆಂಕಿ ಬಿತ್ತು. ಆಗ ಬೇಡ ಹಂದಿಯನ್ನು ಬಿಟ್ಟು ಬಸದಿಗೆ ಬಂದ. ಆದರೆ ಆ ಹಂದಿ ಅಲ್ಲಿ ಕಲ್ಲಾಗಿ ಹೋಗಿತ್ತು. ಆದುದರಿಂದ ಈ ಬಸದಿಯನ್ನು ಪಂಜಿಕಲ್ಲು ಬಸದಿಯೆಂದು ಕರೆಯುತ್ತಾರೆ. ಬಸದಿಗೆ ಮೇಗಿನ ನೆಲೆ ಇದೆ. ಅಲ್ಲಿ ಶ್ರೀ ಆನಂತನಾಥ ತೀರ್ಥಂಕರರಿಗೆ ಪೂಜೆ ನಡೆಯುತ್ತದೆ. ಆ ನೆಲೆಯಲ್ಲಿ ಬೇರೆ ಯಾವುದೇ ಮೂರ್ತಿಗಳಿಲ್ಲ. ಆದರೆ ಕೆಳಗಿನ ಗರ್ಭಗೃಹದಲ್ಲಿ ಶ್ರೀ ಪದ್ಮಾವತಿ ಅಮ್ಮನವರ ಮೂರ್ತಿ ಮೂಲ ತೀರ್ಥಂಕರರ ಬಲಭಾಗದಲ್ಲಿ ಇದೆ. ಬ್ರಹ್ಮದೇವರ ಮೂರ್ತಿಯೂ ಇದೆ. ಬಸದಿಯ ಎದುರು ಮಾನಸ್ತಂಭ ಇಲ್ಲ. ಬಸದಿಯ ಬಳಿಯಲ್ಲಿ ಪಾರಿಜಾತ ಹೂವಿನ 2 ಗಿಡಗಳಿವೆ. ಬಸದಿಯ ಅಂಗಳದಲ್ಲಿ ಈಗ ಬೇರೆ ಯಾವುದೇ ಹೂವಿನ ಗಿಡಗಳನ್ನು ಜೀರ್ಣೋದ್ದಾರ ಕೆಲಸದಿಂದಾಗಿ ನೆಡಲಾಗಿಲ್ಲ. ಈಗ ಯಾವುದೇ ಎಡಬಲ ಗೋಪುರಗಳಿಲ್ಲ. ಬಸದಿಯ ಮುಂದೆ ಗೋಪುರ ಇದೆ. ಬಸದಿಗೆ ಕಾರ್ಯಾಲಯವಿಲ್ಲ. ಯಾವುದೇ ಮುನಿಗಳು ಇಲ್ಲಿ ಚಾತುರ್ಮಾಸ ಕೈಗೊಂಡಿಲ್ಲ. ಪೂಜ್ಯ ಗುಣನಂದಿ ಮುನಿಮಹಾರಾಜರು ಸ್ವಲ್ಪ ಸಮಯ ಈ ಬಸದಿ ಯಲ್ಲಿದ್ದರು. ಪ್ರಾರ್ಥನಾ ಮಂಟಪಕ್ಕೆ ಹತ್ತುವಲ್ಲಿ ಗೋಡೆಯ ಮೇಲೆ ದ್ವಾರಪಾಲಕರ ಚಿತ್ರಗಳಿವೆ. ಜೀರ್ಣೋದ್ಧಾರವಾದ ನಂತರ ಹೊಸದಾಗಿ ಕಲ್ಲಿನ ಮೂರ್ತಿಗಳು ರಚನೆಯಾಗುತ್ತವೆ. ಬೇರೆ ಯಾವುದೇ ಚಿತ್ರಗಳಿಲ್ಲ. ಪ್ರಾರ್ಥನಾ ಮಂಟಪದಲ್ಲಿ ಎರಡು ಕಂಬಗಳಿರುವ ಮಂಟಪವಿದೆ. ಅಲ್ಲಿ ಜಯಘಂಟೆ, ಜಾಗಟೆಗಳನ್ನು ತೂಗು ಹಾಕಲಾಗಿದೆ. ಅಲ್ಲಿಂದ ಮುಂದುವರಿದು ತೀರ್ಥಂಕರ ಸ್ವಾಮಿಯ ಬಳಿಗೆ ಹೋಗು ವಾಗ ಸಿಗುವ ಮಂಟಪವನ್ನು ತೀರ್ಥಂಕರ ಮಂಟಪವೆಂದು ಕರೆಯುತ್ತಾರೆ. ಗಂಧಕುಟಿಯು ತೀರ್ಥಂಕರ ಮಂಟಪದಲ್ಲಿದೆ. ಇದರ ಬಳಿಯಲ್ಲಿ ಗಣಧರ ಪಾದ, ಶ್ರುತ, ಬ್ರಹ್ಮದೇವರು ಇತ್ಯಾದಿ ಮೂರ್ತಿಗಳಿವೆ. ಪ್ರತಿದಿನ ನಿತ್ಯಪೂಜೆ ನಡೆಯುತ್ತದೆ. ಮಾತೆ ಪದ್ಮಾವತೀ ದೇವಿಯ ಮೂರ್ತಿ ಇದ್ದು, ದೇವಿಗೆ ಸೀರೆ ಉಡಿಸಿ, ಬಳೆಗಳನ್ನು ಹಾಕಿ. ಹೂವಿನಿಂದ ಅಲಂಕಾರ ಮಾಡಿ ಪೂಜೆ ಮಾಡಲಾಗುತ್ತದೆ. ಈ ಅಮ್ಮನವರ ಮೂರ್ತಿ ಪೂರ್ವಕ್ಕೆ ಮುಖ ಮಾಡಿಕೊಂಡಿದೆ. ಕಾಲಿನ ಬಳಿಯಲ್ಲಿ ಕುಕ್ಕುಟ ಸರ್ಪವಿದೆ. ಯಾವುದೇ ವಾರ್ಷಿಕ ಜಾತ್ರೆ, ರಥೋತ್ಸವ ಇಲ್ಲಿ ನಡೆಯುವುದಿಲ್ಲ. ಬಸದಿಯಲ್ಲಿ ಹೊಂಬುಚ್ಚದಂತೆ ಅಮ್ಮನವರ ಎದುರು ಹೂಹಾಕಿ ನೋಡುವ ಕ್ರಮವಿದೆ. ಮೂಲನಾಯಕ ಶ್ರೀ ಆದಿನಾಥಸ್ವಾಮಿ ಮೂರ್ತಿ ಶಿಲೆಯದ್ದು.
ಒಂದು ಅಡಿಯಷ್ಟು ಎತ್ತರ ಪದ್ಮಾಸನ ಭಂಗಿಯಲ್ಲಿದೆ. ಸುತ್ತಲೂ ಮಕರ ತೋರಣದ ಪ್ರಭಾವಳಿ ಇದೆ. ನಿತ್ಯಪೂಜೆ ಮಾಡಲಾಗುತ್ತದೆ. ವಿಶೇಷ ಸಂದರ್ಭಗಳಲ್ಲಿ ಕ್ಷೀರಾಭಿಷೇಕ, ಪಂಚಾಮೃತ ಅಭಿಷೇಕಗಳನ್ನು ಮಾಡಲಾಗುತ್ತದೆ. ಮೂಲ ಮೂರ್ತಿಗೆ ವಜ್ರಲೇಪನ ಮಾಡಲಾಗಿಲ್ಲ. ಪದ್ಮಾವತಿ ಅಮ್ಮನವರಲ್ಲಿ ಬಯಸಿ ಬಂದು ಬೇಡಿದವರಿಗೆ ಇಲ್ಲ ಅಂತ ಹೇಳಿಲ್ಲ. ಎಷ್ಟೋ ಮಂದಿ ಮಕ್ಕಳಾಗದವರು ಇಲ್ಲಿ ಒಂದು ಪೂಜೆ ಮಾಡಿಸಿ ಸಂತಾನ ಪ್ರಾಪ್ತಿಯಾಗಿದ್ದೂ ಇದೆ. ಆಸ್ತಿ ವಿಚಾರ ಪ್ರಕರಣ ಹರಕೆ ಹೇಳಿದವರಿಗೆ ಫಲಿಸಿದ್ದೂ ಇದೆ. ಮದುವೆಯಾಗದೆ ಉಳಿದ ಹೆಣ್ಣುಮಕ್ಕಳಿಗೆ ಹರಕೆಯ ನಂತರ ಒಳ್ಳೆ ಸಂಬಂಧಗಳು ಕೂಡಿ ಬಂದ ಸಾಕಷ್ಟು ನಿದರ್ಶನಗಳಿವೆ. ಕಾಡಬೆಟ್ಟುವಿನ ಒಂದು ಕುಟುಂಬ ಸಂತಾನ ಪ್ರಾಪ್ತಿಗಾಗಿ ಇಲ್ಲಿ ಬಂದು ಪೂಜೆ ಮಾಡಿಸಿ ಸಂತಾನ ಪ್ರಾಪ್ತಿಯಾಗಿದೆ. ಇಲ್ಲಿ ಬೆಳಿಗ್ಗೆ ಮತ್ತು ಸಾಯಂಕಾಲ ಪೂಜೆ ನಡೆಯುತ್ತದೆ. 1971ರಲ್ಲಿ ಧಾಮ ಸಂಪ್ರೋಕ್ಷಣೆ ನಡೆದಿತ್ತು. ಅನಂತರ 1991ರಲ್ಲಿ ವಿಮಾನಶುದ್ದಿ ನಡೆದಿತ್ತು. ಬಸದಿಯಲ್ಲಿ ವಿಶೇಷವಾಗಿ ನವರಾತ್ರಿ ಪೂಜೆ, ದೀಪಾವಳಿ ಪೂಜೆ, ಮಹಾವೀರ ಸ್ವಾಮಿ ನಿರ್ವಾಣ ರಕ್ಷಾವಳಿ, ಶ್ರಾವಣ ಮಾಸದ ಪ್ರತಿ ಶುಕ್ರವಾರ ವಿಶೇಷ ಪೂಜೆಗಳು ನಡೆಯುತ್ತವೆ. ಮಹಾವೀರ ಜಯಂತಿಯ ವಿಶೇಷ ಹಬ್ಬ ಪೂಜೆ ನಡೆಯುತ್ತದೆ. ಯುಗಾದಿಯ ದಿನ, ನೂಲ ಹುಣ್ಣಿಮೆಯ ದಿನ ವಿಶೆಷ ಪೂಜೆಗಳು, ಹಬ್ಬಗಳು ನಡೆಯುತ್ತವೆ. ಶುಕ್ರವಾರ ನೋಂಪು, ಅನಂತ ನೋಂಪುಗಳು ನಡೆಯುತ್ತಿದ್ದವು. ಬಸದಿಯ ಅಂಗಳದಲ್ಲಿ ಬಲಮೂಲೆಯಲ್ಲಿ ಕ್ಷೇತ್ರಪಾಲನ ಸನ್ನಿಧಿ ಇದೆ. ಅಲ್ಲಿ ತ್ರಿಶೂಲ, ನಾಗರಕಲ್ಲು, ಕ್ಷೇತ್ರಪಾಲ ಇವೆ. ಅವುಗಳನ್ನು ಒಂದು ಪೀಠದ ಮೇಲೆ ಪ್ರತಿಷ್ಠಾಪಿಸಲಾಗಿದೆ. ಈ ಅಂಗಳದಲ್ಲಿ ಬೇರೆ ಮೂರ್ತಿಗಳಿಲ್ಲ. ಬಲಿಕಲ್ಲುಗಳು ಮತ್ತು ಅಷ್ಟದಿಕ್ಷಾಲಕರ ಕಲ್ಲುಗಳಿವೆ. ಆದರೆ ಪ್ರತಿದಿನ ಪೂಜೆ ಸಲ್ಲಿಕೆ ಆಗುತ್ತಿಲ್ಲ. ಕ್ಷೇತ್ರಪಾಲನ ಹತ್ತಿರ ಇಡೀ ಊರಿನ ಜನ ತಮ್ಮ ಜಾನುವಾರುಗಳಿಗೆ ಅಸೌಖ್ಯವಾದಾಗ ಹರಕೆ ಹೇಳಿ ಜಾನುವಾರುಗಳು ಗುಣಮುಖವಾಗಿವೆ. ಹಾಗೆಯೇ ಅನೇಕ ಬಾರಿ ಹಸುಗಳನ್ನು ಕಾಡಿಗೆ ಮೇಯಲು ಬಿಟ್ಟ ನಂತರ ಸಂಜೆ ವಾಪಾಸು ಬರದಿದ್ದರೆ ಕ್ಷೇತ್ರಪಾಲನ ಬಳಿ ನಿವೇದಿಸಿ ಕೊಂಡರೆ ಕ್ಷಣಮಾತ್ರದಲ್ಲಿ ದನಕರುಗಳು ಹಟ್ಟಿಯಲ್ಲಿರುತ್ತವೆ ಎಂದು ಇಲ್ಲಿಯವರು ಹೇಳುತ್ತಾರೆ. ಹೊಸದಾಗಿ ಕಂಪೌಂಡ್ ಕೆಲಸ ನಡೆಯುತ್ತಿದೆ. ಅದು ಕರ್ಗಲ್ಲಿನಿಂದ ನಿರ್ಮಾಣ ವಾಗುತ್ತಿದೆ. ಬಸದಿಗೆ ಸಂಬಂಧಪಟ್ಟಂತೆ ಯಾವುದೇ ಆಫೀಸ್, ಹಾಲ್‌ಗಳಿಲ್ಲ. ಈ ಬಸದಿಗೆ ಶ್ರೀ ಲಲಿತಕೀರ್ತಿ ಭಟ್ಟಾರಕರು, ಕಾರ್ಕಳ ಮಠ ಹಾಗೂ ಹಿಂದೆ ಕೆಲವು ಮುನಿಗಳು ಭೇಟಿ ನೀಡಿದ್ದಾರೆ. ಬಸದಿಯ ಆಡಳಿತ ಮಂಡಳಿಯಿಂದ ಯಾವುದೇ ಸೌಲಭ್ಯಗಳು ಈ ಬಸದಿಗೆ ಆಗಿಲ್ಲ. ಛತ್ರ, ನೀರಿನ ವ್ಯವಸ್ಥೆಗ ಳನ್ನು ಮಾಡಬೇಕೆಂದು ತೀರ್ಮಾನಿಸಿದ್ದಾರೆ. ಈ ಬಸದಿಗೆ ಯಾವುದೇ ಆದಾಯ ಇಲ್ಲ. ಪುರೋಹಿತರ ಕುಟುಂಬ ಬಸದಿಯ ಪೂಜೆಯ ನಿರ್ವಹಣೆಯನ್ನು ನೋಡಿಕೊಳ್ಳುತ್ತಿದೆ. ಸರಕಾರದಿಂದ ಆರ್ಥಿಕ ಸಹಾಯವನ್ನು ಕೇಳಿಲ್ಲ. ಇಲ್ಲಿಯವರೆಗೂ ಬಸದಿಯ ಪೂಜೆ-ಪುರಸ್ಕಾರಗಳನ್ನು ಪುರೋಹಿತ ಕುಟುಂಬ ಮತ್ತು ಊರವರ ಸಹಕಾರದಿಂದ ನೆರವೇರಿಸಿಕೊಂಡು ಬರಲಾಗಿದೆ. ಈ ಬಸದಿಯು ಅನೇಕ ಮಹತ್ತ್ವಗಳನ್ನು ಪಡೆದಿದೆ. ಊರಿಗೆ ತೊಂದರೆ, ಸಮಸ್ಯೆ, ಕಷ್ಟ-ನಷ್ಟ ಉಂಟಾದಾಗ, ಶ್ರಾವಕರು ಮಾತ್ರವಲ್ಲದೇ ಇಡೀ ಊರಿನ ಜನತೆ ಇದೇ ಬಸದಿಗೆ ಬಂದು ತಮ್ಮ ಸಮಸ್ಯೆಯನ್ನು ಹೇಳಿಕೊಂಡು ಪ್ರಾರ್ಥಿಸುತ್ತಾರೆ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತಾರೆ. ಒಂದು ವೇಳೆ ಈ ಬಸದಿಗೆ ಬಂದು ಪ್ರಾರ್ಥನೆ ಸಲ್ಲಿಸದಿದ್ದರೆ, ಕೈ ಮುಗಿಯದಿದ್ದರೆ, ಸಮಯದ ಕೊರತೆಯ ಕಾರಣ ಕೊಟ್ಟು ಉಪೇಕ್ಷೆ ಮಾಡಿದರೆ. ಇದೇ ಪದ್ಮಾವತೀ ದೇವಿಗೆ, ಆದಿನಾಥಸ್ವಾಮಿ ಸನ್ನಿಧಾನಕ್ಕೆ ಬಂದು ಪ್ರಾರ್ಥನೆ ಸಲ್ಲಿಸುವಂತಾ ಗುತ್ತದೆ. ಇನ್ನು ಈ ಬಸದಿಯು ಇತ್ತೀಚೆಗೆ ಊರ-ಪರವೂರವರ ಸಹಕಾರದಿಂದ ಜೀರ್ಣೋದ್ಧಾರಗೊಳ್ಳುತ್ತಿದೆ. ಶಿಲಾಮಯವನ್ನಾಗಿಸಲಾಗುತ್ತಿದೆ. ಆದರೆ ಇಡೀ ಬಸದಿಯ ಜೀರ್ಣೋದ್ಧಾರಕ್ಕೆ ಆರ್ಥಿಕ ತೊಂದರೆಯಿರುವುದರಿಂದ ಗೋಡೆಯನ್ನು ಮಾತ್ರ ಶಿಲಾಮಯವನ್ನಾಗಿಸಲಾಗುತ್ತಿದೆ. ಉಳಿದೆಲ್ಲವೂ ಈ ಹಿಂದಿನಂತೆಯೇ ಇದೆ. ಹಾಗಾಗಿ ಆರ್ಥಿಕ ನೆರವಿನ ನಿರೀಕ್ಷೆಯಲ್ಲಿ ಈ ಬಸದಿಯ ಆಡಳಿತ ಮಂಡಳಿ ಇದೆ. ಆಗ ಮಾತ್ರ ಇನ್ನಷ್ಟು ಉತ್ತಮಪಡಿಸಲು ಸಾಧ್ಯ ಎಂಬುದನ್ನು ಸಮಾಜವು ಮನವರಿಕೆ ಮಾಡಿಕೊಳ್ಳಬೇಕು ಎಂದು ಈ ಬಸದಿಗೆ ಸಂಬಂಧಪಟ್ಟವರು ಹೇಳುತ್ತಾರೆ. ಮಾಹಿತಿ: ದೇವಕುಮಾರ್ ಇಂದ್ರ, ಪುರೋಹಿತರು .: 9481505454 316

Deities & Specialities

Purohith

Deva Kumar Indra

9880260298

  1. [object Object]