Dakshina Kannada district, Karnataka
Temple Description
ಶ್ರೀ ಶಾಂತಿನಾಥ ಸ್ವಾಮಿಯ ಹಿರೇ ಅಮ್ಮನವರ ಬಸದಿ
ಮೂಡುಬಿದಿರೆಯ ಪ್ರಸಿದ್ಧವಾದ ಹಿರೇ ಅಮ್ಮನವರ ಬಸದಿಯಲ್ಲಿ ಪೂಜಿಸಲ್ಪಡುವ ಮೂಲ ನಾಯಕ 16 ನೇ ತೀರ್ಥಂಕರರಾದ ಶ್ರೀ ಶಾಂತಿನಾಥ ಸ್ವಾಮಿ, ಈ ಬಸದಿಯು ಮಂಗಳೂರು: ತಾಲೂಕಿನ ಮೂಡಬಿದರೆ ಪ್ರಾಂತ್ಯ ಗ್ರಾಮದಲ್ಲಿದೆ. ಬಸದಿಗೆ ಹತ್ತಿರದಲ್ಲಿ ಸಾವಿರ ಕಂಬ ಬಸದಿ. ದಕ್ಷಿಣ ದಿಕ್ಕಿನಲ್ಲಿ ಧವಳಾ ಕಾಲೇಜು, ಆನ್ನೇಯದಲ್ಲಿ ಶೆಟ್ಟರ ಬಸದಿ ಅಥವಾ ವರ್ಧಮಾನ ಬಸದಿ. ಈ ಬಸದಿಯು ಯಾವುದೇ ಮಠಕ್ಕೆ ಸೇರಿರುವುದಿಲ್ಲ. ಪ್ರತ್ಯೇಕವಾಗಿದೆ. ಇದು ಒಳಗೆ ಶಿಲಾಮಯವಾಗಿದ್ದು ತಾಮ್ರದ ಮಾಡಿನಿಂದ ಅಲಂಕೃತಗೊಂಡಿದೆ. ಈ ಬಸದಿಯನ್ನು ಕಟ್ಟೆಮಾರು ಮನೆತನದವರಾದ ಭಾಸ್ಕರ ಶೆಟ್ಟಿಯವರು ನಡೆಸುತ್ತಿದ್ದಾರೆ. ವ್ಯವಸ್ಥಾಪಕ ಮಂಡಳಿ ಅಧ್ಯಕ್ಷರೆಂದೂ ಯಾರೂ ಇಲ್ಲ. ಆಡಳಿತದವರು ಇದನ್ನು ನಡೆಸುತ್ತಿದ್ದಾರೆ. ಶ್ರೀ ಜಯವರ್ಮ ಇಂದ್ರ – ಬಸದಿಯ ಇಂದ್ರರ ಹೆಸರು. ಈ ಬಸದಿಯು 1000 ವರ್ಷಗಳ ಹಿಂದೆ ನಿರ್ಮಿಸಿದ್ದಾಗಿದೆ. ಅವರ ಹೆಸರು ಗೊತ್ತಿಲ್ಲ. ನಿರ್ಮಿಸಿದವರ ಮನೆಯವರು ಮಂಗಳೂರಿನ ಬಳಿಯ ಮಳಲಿ ಕಟ್ಟೆಮಾರು ಎಂಬಲ್ಲಿದ್ದಾರೆ. ಇದನ್ನು 2003 ರಲ್ಲಿ ರಲ್ಲಿ ಜೀರ್ಣೋದ್ಧಾರ ಮಾಡಲಾಗಿದೆ.
ಬಸದಿಯನ್ನು ಪ್ರವೇಶಿಸುವಾಗ ಸಿಗುವ ಎಡಬಲ ಬದಿಯ ಗೋಪುರವನ್ನು ಕುಳಿತುಕೊಳ್ಳಲು ಉಪಯೋಗಿಸುತ್ತಾರೆ. ಈ ಬಸದಿಯಲ್ಲಿ ಯಾವ ಕಾರ್ಯಾಲಯವೂ ಇಲ್ಲ. ಮುನಿಗಳೂ ಬರಲಿಲ್ಲ. ಯಾವ ಮುನಿವಾಸ ಕೋಣೆಯೂ ಇಲ್ಲ. ನೈವೇದ್ಯ ಕೋಣೆ ಮಾತ್ರ ಇದೆ. ಈ ಬಸದಿಯಲ್ಲಿ ಯಾರು ಕೂಡಾ ಚಾತುರ್ಮಾಸ ನಡೆಸಿಲ್ಲ. ಯಾವುದೇ ರೀತಿಯ ಶಿಲ್ಪಕಲಾಕೃತಿಗಳು ಕೂಡ ಕಂಬಗಳಲ್ಲಿ ಇರುವುದಿಲ್ಲ.
ಬಸದಿಯ ಎದುರಿನ ಪ್ರಾರ್ಥನಾ ಮಂಟಪಕ್ಕೆ ಹತ್ತುವಲ್ಲಿ ಗೋಡೆಯ ಮೇಲೆ ದ್ವಾರಪಾಲಕರ ವರ್ಣ ಚಿತ್ರಗಳು ಇರುವುದಿಲ್ಲ. ಇಲ್ಲಿ ಯಾವುದೇ ರೀತಿಯ ಕಲ್ಲಿನ ಮೂರ್ತಿಗಳೂ ಇಲ್ಲ. ಮಣ್ಣಿನ ಮೂರ್ತಿಗಳಿವೆ. ಗೋಡೆಯ ಮೇಲೆ ಯಾವುದೇ ರೀತಿ ಚಿತ್ರಗಳು ಇಲ್ಲ. ಪ್ರಾರ್ಥನಾ ಮಂಟಪದಲ್ಲಿ ನಾಲ್ಕು ಕಂಬ ಇವೆ. ಜಯಘಂಟೆಗಳು ಇವೆ. ಈ ಬಸದಿಯಲ್ಲಿ ಮುಂದುವರಿದು ತೀರ್ಥಂಕರ ಸ್ವಾಮಿಯ ಬಳಿಗೆ ಹೋಗುವಾಗ ಸಿಗುವ ಮಂಟಪವನ್ನು ತೀರ್ಥ ಮಂಟಪ ಎಂದು ಕರೆಯುತ್ತಾರೆ. ಇಲ್ಲಿಯ ಗಂಧಕುಟಿಯ ಬಳಿಯಲ್ಲಿ ಕಂಚಿನ ವಿಗ್ರಹ ಇದೆ. ಇದಕ್ಕೆ ಬೆಳಿಗ್ಗೆ ಮತ್ತು ಸಂಜೆ ಪೂಜೆ ನಡೆಯುತ್ತದೆ. ಇಲ್ಲಿ ದೇವಿಗೆ ಸೀರೆ ಉಡಿ ಅಲಂಕಾರ ಮಾಡುತ್ತಾರೆ. ಅಮ್ಮನವರ 29/56 ಮಾಡಿದ್ದಾರೆ. ಕಾಲಿನ ಬಳಿ ಬೆಳ್ಳಿಯ ಕಾ ಈ ಬಸದಿಯಲ್ಲಿ ಹೊಂಬುಚ್ಚದಂತೆ ಅಮ್ಮನವರ ಎದುರು ಹೂ ಹಾಕಿ ನೋಡುವ ಕ್ರಮ ಇದೆ. ಜನರು ಕಷ್ಟಕಾಲದಲ್ಲಿ
ಈ ಬಸದಿಯಲ್ಲಿ ಪ್ರತಿ ವರ್ಷವೂ ರಥೋತ್ಸವ ನಡೆಯುತ್ತದೆ, ಬಳಿಕ ಸಾವಿರ ಕಂಬದ ಬಸದಿ ತನಕ ಶ್ರೀ ದೇವರ ಮೆರವಣಿಗೆ ಹೋಗಿ ಅನಂತರ ಅಲ್ಲಿಂದ ಬೆಟ್ಟಕೇರಿಗೆ ಹೋಗಿ ಸ್ವಸ್ಥಾನಕ್ಕೆ ಬರುತ್ತದೆ. ಶ್ರಾವಣ ಮಾಸದಲ್ಲಿ ಶುಕ್ರವಾರ ಪೂಜೆಗೆ ತುಂಬಾ ಜನರು ಬರುತ್ತಾರೆ. ಇಲ್ಲಿ 24 ಬಂದು ಪ್ರಾರ್ಥನೆ ಮಾಡಿ ಪರಿಹಾರ ಮಾಡಿಕೊಳ್ಳುತ್ತಾರೆ. ತೀರ್ಥಂಕರರು, ಮೃತ್ತಿಕಾ ಮೂರ್ತಿಗಳ ರೂಪದಲ್ಲಿ ಸನ್ನಿಹಿತ ಈ ಬಸದಿಯಲ್ಲಿರುವ ಜಿನಬಿಂಬಗಳ ಪೀಠದ ಮೇಲೆ ರಾಗಿರುವ ಶ್ರೀ ಸರಸ್ವತಿ ಅಮ್ಮ, ಶ್ರೀ ಪದ್ಮಾವತಿ ಅಮ್ಮ ಮತ್ತು ಬರವಣಿಗೆ ಇದೆ. ಆದರೆ ಅದು ಸ್ಪಷ್ಟವಾಗಿಲ್ಲ.
ಮೂಲನಾಯಕ ಶ್ರೀ ಶಾಂತಿನಾಥ ಸ್ವಾಮಿಯ ಮೂರ್ತಿ ಕಪ್ಪುಶಿಲೆಯದ್ದಾಗಿದೆ. ಎತ್ತರ 2.5 ಅಡಿ, ಸುತ್ತಲೂ ಮಕರ ತೋರಣದ ಕಂಚಿನ ಪ್ರಭಾವಳಿಯ ಅಲಂಕಾರವಿದೆ. ವಜ್ರಲೇಪನ ಮಾಡಲಾಗಿಲ್ಲ. ಈ ಬಸದಿಯಲ್ಲಿ ದಿನಕ್ಕೆ ಎರಡು ಬಾರಿ ಮಾತ್ರ ಪೂಜೆ ಇದೆ. ಇಲ್ಲಿ ಶ್ರಾವಣ ಮಾಸದ
ಶುಕ್ರವಾರ, ದೀಪಾವಳಿಯ ಒಂದು ದಿನ ಆಚರಣೆ ಇದೆ. ಬಸದಿಯ ಬಲ ಮೂಲೆಯಲ್ಲಿ ತ್ರಿಶೂಲ ಮತ್ತು ನಾಗರಕಲ್ಲುಗಳು ಇವೆ. ಇವೆಲ್ಲವನ್ನೂ ಬೇರೆ ಬೇರೆಯಾಗಿ ಪ್ರತಿಷ್ಠಾಪಿಸಲಾಗಿದೆ. ಸುಮಾರು 60-70 ವರ್ಷಗಳ ಹಿಂದ ಕ್ಷೇತ್ರಪಾಲ ತನ್ನ ವಾಹನದ (ನಾಯಿ) ಮೆಲೆ ಕುಳಿತುಕೊಂಡು ಈ ಅಂಗಣದ ಸುತ್ತ ಬರುತ್ತಿದ್ದುದು ತಿಳಿದಿದೆ. ಬಸದಿಯ ಸುತ್ತಲೂ ಸರಿಯಾದ ಸ್ಥಳಗಳಲ್ಲಿ ಬಲಿಕಲ್ಲು ಅಷ್ಟಧಿಕಾಲಕರ ಕಲ್ಲುಗಳಿವೆ, ಅವರಿಗೂ ಪೂಜೆ ನಡೆಯುತ್ತದೆ. ಈ ಬಸದಿಯ ಸುತ್ತಲೂ ಪ್ರಾಕಾರಗೋಡೆ ಇದ್ದು ಅದು ಮುರಕಲ್ಲಿನಿಂದ ನಿರ್ಮಿಸಲ್ಪಟ್ಟಿದೆ. ಈ ಬಸದಿಯಲ್ಲಿ ಯಾವುದೇ ಆಫೀಸು' ಇಲ್ಲ. ಯಾವ ತರಹದ ಹಾಲ್ ಕೂಡ ಇಲ್ಲ. ಸರಕಾರದ ಯಾವುದೇ ರೀತಿಯ ಧನ ಸಹಾಯ ಬಂದಿರುವುದಿಲ್ಲ.
ಈ ಬಸದಿಗೆ ಹೊಂಬುಚ್ಚ ಮಠದ ಶ್ರೀ ಶ್ರೀ ದೇವೇಂದ ಕೀರ್ತಿ ಭಟ್ಟಾರಕ ಸ್ವಾಮೀಜಿ ಆಗಮಿಸಿದ್ದಾರೆ. ಜಾತ್ರೆಯ ದಿನದಂದು ಊಟದ ವ್ಯವಸ್ಥೆ ಮಾಡಿಸುತ್ತಿದ್ದರು. ಈ ಬಸದಿಗೆ ಆಡಳಿತ ಮಂಡಳಿಯವರು ಸದ್ಯ ಛತ್ರ, ನೀರಿನ ಸರಬರಾಜು ಇತ್ಯಾದಿ ಕಾರ್ಯಕ್ರಮವನ್ನು ನಡೆಸುವ ಯೋಜನೆಯಲ್ಲಿಲ್ಲ. ಈಗಲೂ ಅಂತಹ ಅನುಕೂಲಗಳು ಇಲ್ಲ, ಈ ಬಸದಿಗೆ ಯಾವುದೇ ಮುಖ್ಯ ಆದಾಯದ ಮೂಲಗಳು ಇಲ್ಲ, ಸರಕಾರದಿಂದ ಸಹಾಯ ಏನೂ ಬಂದಿಲ್ಲ. ಸರಕಾರದಿಂದ ಈ ಬಸದಿಗೆ ಸಹಕಾರ ಸಿಗದಿದ್ದರೂ ಬಸದಿಯ ಪೂಜೆ ಪುರಸ್ಕಾರಗಳು ಭಕ್ತರ ಸಹಾಯದಿಂದಲೇ ಆಗುತ್ತದೆ ಎಂಬ ನಂಬಿಕೆ ಇದೆ ಎಂದು ಹೇಳುತ್ತಾರೆ.
Pooja Timings
Additional Informations
| # | Name | Contact | Vehicle Type |
|---|---|---|---|
| 1 | Dharmendra Indra | 9845408666 | dezire - 5seater, Ertiga - 7 seater |
| # | Name | Contact | Location | |
|---|---|---|---|---|
| 1 | Hotel Padival | 9850299795 | View Location |
| # | Name | Contact | Location |
|---|---|---|---|
| 1 | Padiwals Restaurant (Managed By Jains) | 08258237065 | View Location |
| 2 | Arihanth Ahaar | 08277454582 | View Location |