Nerenki.com

Chandranatha Swamy Badaga Basadi

Dakshina Kannada district, Karnataka

This beautiful basadi lies to the north of the town Moodabidri hence the name Badaga Basadi. This is four to five centuries old. The main deity is Shri Chandranatha Swami, the image being carved out of white marble. The images of 24 Teerthankara of black granite are fascinating. A short but carefully carv Manastambha in front of the basadi appears to be a Tilak on forehead of a women.Every Year in January car festival in this temple attracts peoplefrom far & wide

ಶ್ರೀ ಚಂದ್ರಪ್ರಭ ಸ್ವಾಮಿಯ ಬಡಗ ಬಸದಿ, ಮೂಡಬಿದರೆ


ಮೂಡಬಿದ್ರೆಯ ಬಡಗ ಬಸದಿಯಲ್ಲಿ ಪೂಜಿಸಲ್ಪಡು ವವರು ಭಗವಾನ್ ಶ್ರೀ ಚಂದ್ರಪ್ರಭ ಸ್ವಾಮಿ. ಈ ಬಸದಿಯು ಮೂಡಬಿದರೆ ತಾಲೂಕು ಪ್ರಾಂತ್ಯ ಗ್ರಾಮದಲ್ಲಿದೆ. ಇದರ ಹತ್ತಿರದಲ್ಲಿರುವ ಇನ್ನೊಂದು ಬಸದಿ ಅಂದರೆ ಶೆಟ್ರ ಬಸದಿ, ಇದು ಸುಮಾರು 1/2 ಕಿ.ಮೀ ದೂರದಲ್ಲಿದೆ. ಬಡಗ ಬಸದಿಗೆ ಜೈನ ಕುಟುಂಬಗಳು ಆಗಾಗ ಬರುತ್ತಾರೆ. ಈ ಬಸದಿಯು ತಾಲೂಕು ಕೇಂದ್ರದಿಂದ 8.5 ಕಿ.ಮೀ ದೂರದಲ್ಲಿದೆ. ಬಸದಿಯು ಮೂಡಬಿದರೆಯ ಶ್ರೀ ಜೈನ ಮಠಕ್ಕೆ ಸೇರಿದ್ದು, ಅಲಂಗಾರ್ ರೋಡ್ ಬದಿಯಲ್ಲಿದೆ. ಬಡಗ ಬಸದಿ ಒಳಗಡೆ ಶಿಲಾಮಯವಾಗಿದೆ. ಹೊರಗಡೆ ಹಂಚಿನ ಮಾಡನ್ನು ಹೊಂದಿದೆ. ಈಗ ಈ ಬಸದಿಯನ್ನು ಮೂಡಬಿದರೆ ಮಠದ ಅಧ್ಯಕ್ಷರು ನಡೆಸಿಕೊಂಡು ಬರುತ್ತಾರೆ. ಬಡಗ ಬಸದಿಯ ಇಂದ್ರರ ಹೆಸರು ಶ್ರೀ ವಿದ್ಯಾಕುಮಾರ್, ಇದಕ್ಕೆ ಮೇಗಿನ ನೆಲೆ ಇದೆ. ಇಲ್ಲಿ ಶ್ರೀ ಚಂದ್ರನಾಥ ಸ್ವಾಮಿ ತೀರ್ಥಂಕರರ ಪೂಜೆ ನಡೆಯುತ್ತದೆ. ಇಲ್ಲಿ 24 ತೀರ್ಥಂಕರರ ಮೂರ್ತಿ ಮತ್ತು ಪದ್ಮಾವತಿ ಅಮ್ಮನವರ ಮೂರ್ತಿ ಇದೆ. ಬಸದಿಯ ಎದುರು ಸುಮಾರು 30 ಅಡಿ ಎತ್ತರದ ಶಿಲಾ ಮಾನ ಸಂಭವಿದೆ. ಬಸದಿಯ ಬಳಿ ಪಾರಿಜಾತ ಹೂವಿನ ಗಿಡ ಮತ್ತು ಅಂಗಳದಲ್ಲಿ ದಾಸವಾಳ, ಕ್ರೋಟನ್ ಗಿಡಗಳಿವೆ. ಬಸದಿಯನ್ನು ಪ್ರವೇಶಿಸುವಾಗ ಸಿಗುವ ಎಡ ಬಲ ಬದಿಗಳಲ್ಲಿಯ ಗೋಪುರವನ್ನು ವಾದ್ಯದವರಿಗೆ ಬಸದಿಗೆ ಬಂದವರಿಗೆ ಮತ್ತು ಭಕ್ತಾದಿಗಳಿಗೆ ಕುಳಿತುಕೊಳ್ಳಲು ಉಪಯೋಗಿಸುತ್ತಾರೆ. ಇಲ್ಲಿ ಹಿಂದೆ ಮುನಿಗಳು ಯಾರು ಇದ್ದು ಚಾತುರ್ಮಾಸ ನಡೆಸಿಲ್ಲ.

 

ಬಸದಿಯ ಕಂಬಗಳಲ್ಲಿ ಕೆಲವು ಸುಂದರ ಶಿಲ್ಪ ಕಲಾಕೃತಿಗಳನ್ನು ಬಿಡಿಸಿದ್ದಾರೆ. ಎದುರಿನ ಪ್ರಾರ್ಥನಾ ಮಂಟಪಕ್ಕೆ ಹತ್ತುವಲ್ಲಿ ಗೋಡೆಯ ಮೇಲೆ ದ್ವಾರಪಾಲಕರ ಬಣ್ಣದ ಚಿತ್ರಗಳನ್ನು ಬಿಡಿಸಲಾಗಿದೆ. ಕಲ್ಲಿನ ಮೂರ್ತಿಗಳು ಇಲ್ಲ. ಗೋಡೆಯ ಮೇಲೆ ಇನ್ನೂ ಕೆಲವು ಚಿತ್ರಗಳನ್ನು ಕಾಣಬಹುದು. ಪ್ರಾರ್ಥನಾ ಮಂಟಪದಲ್ಲಿ ನಾಲ್ಕು ಕಂಬಗಳಿರುವ ಮಂಟಪ ಇದೆ. ಅಲ್ಲಿ ಜಯಘಂಟೆ ಜಾಗಟೆ ಗಳನ್ನು ತೂಗು ಹಾಕಲಾಗಿದೆ. ಅಲ್ಲಿಂದ ಮುಂದುವರಿದು ತೀರ್ಥಂಕರ ಸ್ವಾಮಿಯ ಬಳಿಗೆ ಹೋಗುವಾಗ ಸಿಗುವ ಮಂಟಪವನ್ನು ತೀರ್ಥ ಮಂಟಪ ಎಂದು ಕರೆಯುತ್ತಾರೆ. ಗಂಧಕುಟಿಯು ಈ ತೀರ್ಥಂಕರ ಮಂಟಪದಲ್ಲಿ ಇದೆ. ಗಂಧಕುಟಿಯ ಬಳಿಯಲ್ಲಿ ಬ್ರಹ್ಮದೇವರ ಮೂರ್ತಿ ಇದೆ. ಇದಕ್ಕೆ ಯಾವಾಗಲೂ ಪೂಜೆ ನಡೆಯುತ್ತದೆ. ಇಲ್ಲಿರುವ ಜಿನಬಿಂಬಗಳ ಪೀಠಗಳ ಮೇಲೆ ಯಾವುದೇ ಬರವಣಿಗೆ ಇಲ್ಲ. ಮೂಲ ನಾಯಕನ ಮೂರ್ತಿ ಶಿಲೆಯದ್ದಾಗಿದ್ದು 3 ಅಡಿ ಎತ್ತರ ಖಡ್ಯಾಸನ ಭಂಗಿಯಲ್ಲಿದೆ. ಸುತ್ತಲೂ ಮಕರ ತೋರಣದ ಪ್ರಭಾವಳಿ ಇದೆ. ದಿನವೂ ಮೂಲ ಸ್ವಾಮಿಗೆ ಕ್ಷೀರಾಭಿಷೇಕ, ಪಂಚಾಮೃತ ಅಭಿಷೇಕ ಇತ್ಯಾದಿಗಳನ್ನು ಮಾಡಲಾಗುತ್ತಿದೆ. ಸ್ವಾಮಿಗೆ ರಥೋತ್ಸವದ ಸಮಯ ವಿಶೇಷ ಪೂಜೆಗಳನ್ನು ಮಾಡುತ್ತಾರೆ. ಈ ಮೂಲ ಬಿಂಬಕ್ಕೆ ವಜ್ರಲೇಪನ ಮಾಡಿಲ್ಲ. ಈ ಬಸದಿಯಲ್ಲಿ ದಿನಕ್ಕೆ ಒಂದೇ ಬಾರಿ ಪೂಜೆ ನಡೆಯುತ್ತದೆ. ಜನವರಿ - ಫೆಬ್ರವರಿ ಸಮಯದಲ್ಲಿ ವಾರ್ಷಿಕೋತ್ಸವ, ರಥೋತ್ಸವಗಳು ನಡೆಯುತ್ತವೆ.

 

ಬಸದಿಯ ಅಂಗಳದಲ್ಲಿ ಬಲ ಮೂಲೆಯಲ್ಲಿ ಕ್ಷೇತ್ರಪಾಲನ ಸನ್ನಿಧಿ ಇದೆ. ಇಲ್ಲಿ ನಾಗರಕಲ್ಲು ಮತ್ತು ಮೂರ್ತಿ ಇದೆ. ಇವುಗಳನ್ನು ಪೀಠದ ಮೇಲೆ ಪ್ರತಿಷ್ಠಾಪಿಸಲಾಗಿದೆ. ಬಸದಿಯ ಸುತ್ತಲೂ ಇರುವ ಪ್ರಾಕಾರ ಗೋಡೆಯನ್ನು ಮುರಕಲ್ಲುಗಳಿಂದ ನಿರ್ಮಿಸಲಾಗಿದೆ. ಬಸದಿಗೆ ಸಂಬಂಧಿಸಿದಂತೆ ಯಾವುದೇ ಆಫೀಸ್, ಕಲಾಭವನ, ಸಭಾಭವನ ಇಲ್ಲ. ಇದಕ್ಕೆ ಸರಕಾರದಿಂದ ಧನ ಸಹಾಯ ಬಂದಿರುವುದಿಲ್ಲ. ಈ ಬಸದಿಗೆ ಈವರೆಗೆ ಭೇಟಿ ನೀಡಿದ ಮುನಿಗಳು ಶ್ರೀ ತರುಣಸಾಗರ ಮುನಿ ಮಹಾರಾಜರು, ಶ್ರೀ ಏಲಾಚಾರ್ಯ ವಿದ್ಯಾನಂದ ಮುನಿಮಹಾರಾಜರು, ಬಸದಿಯ ಆಡಳಿತ ಮಂಡಳಿಯವರು ಕ್ಷೇತ್ರದಲ್ಲಿ ತತ್ಕಾಲದಲ್ಲಿ ಛತ್ರ, ನೀರಿನ ಸರಬರಾಜು ಇತ್ಯಾದಿ ಏನೂ ಕಾರ್ಯಕ್ರಮಗಳನ್ನು ಇಟ್ಟುಕೊಂಡಿಲ್ಲ. ಬಸದಿಗೆ ಸರಕಾರವು ಆರ್ಥಿಕ ಸಹಾಯ ಕೊಡಬೇಕೆಂದು ವಿನಂತಿಸಿ ಕೊಂಡಿದ್ದಾರೆ. ಇದಕ್ಕೆ ಸರಕಾರದಿಂದ ಏನೂ ಪ್ರತಿಕ್ರಿಯೆ ಬಂದಿಲ್ಲ. ಆದಾಯವೂ ಕಡಿಮೆ. ಬಸದಿಯ ಪೂಜೆ ಪುರಸ್ಕಾರಗಳನ್ನು ಪ್ರಸ್ತುತ ಶ್ರೀ ಮಠದಿಂದ ನಡೆಸಿ ಹೆಚ್ಚು ಜನರನ್ನು ಬರುವಂತೆ ಮಾಡುತ್ತಾರೆ.

 

Deities & Specialities

Pooja Timings

7am

Drone Videos

Photo Album

  1. # Name Contact Vehicle Type
    1 Dharmendra Indra 9845408666 dezire - 5seater, Ertiga - 7 seater
  1. # Name Contact Email Location
    1 Hotel Padival 9850299795 View Location
  1. # Name Contact Location
    1 Padiwals Restaurant (Managed By Jains) 08258237065 View Location
    2 Arihanth Ahaar 08277454582 View Location

Purohith

Kishore Kumar

9741814961

  1. [object Object]