Nerenki.com

Aihole Gommateshwara

Bagalkote district, Karnataka

Aihole , Jaina Cave, Meena Basadi, 7th Century ,Gommata (Bahubali)

Aihole  is a Village in Hungund Taluk of  Bagalkot District of Karnataka Located 160 kms from Hubli. The southwest-facing Jaina Cave called Meena- basadi (Jaina Fish-shrine) is excavated into the western side of the of the Meguti hill outside the village.

The Garbhagriha houses a sculpture of Mahavira, the 24th Tirthankara Inside.

On its east wall is a relief of Bahubali (Gommata) standing in  “Kayotsarga Posture”, engrossed in deep penance. Snakes and anthills show at his feet. Madhavi creepers rise in a net taking support of his limbs. On either side stands a Vidyadhari, busy cautiously removing the Madhavi creepers, lest his penance get disturbed. Two Vidyadharas are trying to cross through the creeper net.

 According to the story, the creepers embracing Bahubali's arms formed a huge net in the sky posing obstruction to the movement of Vidyadharas floating about the sky, and Vidyadharis, worried about the possible disturbance to Bahubali's penance, used to come down time and now to free the creepers off him.

The west wall of the verandah depicts Kamathapatarga of Parshvanatha. Five-hooded yakiba Dharanendra spreads his hoods over Parshvanatha, standing in kayotsarga. Of the two Naga ladies standing to his right, one holding the diamond umbrella is Yakshi Padmavati, queen of Dharanendra.The person at the upper left corner is Samvara (enemy of Parshvanatha, also called Kamatha) hurling a rock at Parshvanatha. Samvara is again depicted in left lower part of the panel in a submissive attitude, accepting his failure in obstructing Parshvanatha's penance. In his previous life Parshvanatha had saved a Naga couple from his enemy Kamatha as Parshvanatha he faced the same Kamatha now reborn as demonic Samvara. He tried all sorts of hurdles to disturb the Parshvanatha's penance but in vain. When he tried to pour heavy rains and drown Parshvanatha, the Naga couple, now reborn as Naga king Dharanendra and his queen Padmavati came to Parshvanatha's rescue. Dharanendra (as snake) lifted up Parsvanatha on the support of his tail and splayed open his hoods to shelter him. Padmavati held up a diamond parasol. Thus Parshvanatha achieved supreme knowledge (kerala-jnana) FrustratedSamvara surrendered to Parshvanatha.

On the ceiling of the hall there are decorations of lotuses and mythical animals. Flanking the entrance to the sanctum stand two dvarapalas each holding a lotus. The dwarf attendant of the dvarapala on the left side curiously holds a fish.

The small chamber on the right flank of the hall contains the relief of samavasarana-kalyana (the first sermon celebration) of Tirthankara Parshvanatha. Parshvanatha sits under a parasol on a lion throne flanked by two chauri-bearers. To his right sits Yaksha Dharanendra with five hoods and folded hands. To the left sits yakshi Padmavati. On the right side wall the luxury of Parshva's life before his attaining kevalajnana (Supreme knowledge) is depicted, while on the left side wall is Indra on elephant Airarata hurrying with his retinue to the site.

In the sanctum, a Tirthankara (Ford-maker), probably Mahavira, with halo, sits on a lion throne under a chaitya tree and triple parasol, flanked by chauri-bearers.

The principal architect of this cave probably was Pallasvami Mahadivya Utuna, who has inscribed his name in the vicinity in 7th-century characters more than once.

ಪರಿಚಯ

ಚಲುಕ್ಯರ ರಾಜಧಾನಿಯಾಗಿದ್ದ ಬಾದಾಮಿಯಿಂದ ಸುಮಾರು 35 ಕಿ.ಮೀ. ಹಾಗೂ ಪಟ್ಟದಕಲ್ಲಿನಿಂದ ಸುಮಾರು 12 ಕಿ.ಮೀ. ದೂರದಲ್ಲಿರುವಐಹೊಳೆಯು (16 02' ಉ. 75 88' ಪೂ.) ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನಲ್ಲಿ ಮಲಪ್ರಭಾ ನದಿಯ ಬಲ ದಂಡೆಯ ಮೇಲಿರುವ ಚಿಕ್ಕ ಊರು, ಬೆಂಗಳೂರಿನಿಂದ ಸುಮಾರು 510 ಕಿ.ಮೀ. ಉತ್ತರಕ್ಕಿದೆ. ಸಮೀಪದ ರೇಲ್ವೆ ನಿಲ್ದಾಣವೆಂದರೆ ಹುಬ್ಬಳ್ಳಿ-ಗದಗ- ಸೊಲ್ಲಾಪುರ ರೇಲ್ವೇ ಮಾರ್ಗದಲ್ಲಿರುವ ಬಾದಾಮಿ, ಬಾದಾಮಿಯಿಂದಾಗಲಿ, ಬಾಗಲಕೋಟೆಯಿಂದಾಗಲಿ (35 ಕಿ.ಮೀ.) ಐಹೊಳೆಯನ್ನು ರಸ್ತೆ ಮಾರ್ಗದ ಮೂಲಕ ತಲುಪಬಹುದು. ಬಾದಾಮಿಯಿಂದ ಬಂದರೆ ಮಧ್ಯದಲ್ಲಿ ವಿಶ್ವಪರಂಪರೆಯ ನೆಲೆಯಾಗಿ ಪ್ರಸಿದ್ಧವಿರುವ ಪಟ್ಟದಕಲ್ಲು ಸಹ ಸಿಗುತ್ತದೆಸುಮಾರು 160 ಕಿ.ಮೀ. ದೂರದಲ್ಲಿರುವ ಹುಬ್ಬಳ್ಳಿಯಲ್ಲಿ ವಿಮಾನ ನಿಲ್ದಾಣವಿದ್ದು ಬೆಂಗಳೂರು ಮತ್ತು ಮುಂಬಯಿಯಿಂದ ಪ್ರತಿ ದಿನವೂ ವಿಮಾನಯಾನಗಳಿವೆ. ಸೊಲ್ಲಾಪುರದ ಕಡೆಯಿಂದ ಬಾಗಲಕೋಟೆಯ ಮಾರ್ಗವಾಗಿಯೂ ಅಮಿನಗಡ (9 ಕಿ.ಮೀ.) ಮೂಲಕ ಐಹೊಳೆಯನ್ನು ತಲುಪಬಹುದು.

ಐಹೊಳೆಯು ಬಾದಾಮಿಯಂತೆಯೇ ಮರಳುಗಲ್ಲಿನ ಬೆಟ್ಟದ ಪರಿಸರದಲ್ಲಿದೆಇಲ್ಲಿಯ ಪ್ರೀ-ಕೇಂಬ್ರಿಯನ್ ಯುಗದ, ಜೀವಸಂಕುಲ ಸೃಷ್ಟಿಯಾಗುವದಕ್ಕಿಂತ ವರ್ಷಗಳಿಗಿಂತ ಮುಂಚಿನ (ಸುಮಾರು 542 ಹಿಂದಿನ) ಜಲಜಶಿಲೆಗಳ ಬೆಟ್ಟಗಳು ಮಿಲಿಯನ್ ಮಾನವ ಚಟುವಟಿಕೆಯಲ್ಲಿ ಮಹತ್ವದ ಪಾತ್ರವಹಿಸಿವೆಮುಖ್ಯವಾಗಿ ಇಲ್ಲಿರುವ ನೂರಾರು ಗುಡಿಗಳಿಗೆ ಈ ಕಲ್ಲುಗಳೇ ಸಾಮಗ್ರಿಯಾಗಿವೆ. ಮಲಪ್ರಭಾ ನದಿ ಐಹೊಳೆ ಊರಿನಿಂದ ಸುಮಾರು ಒಂದು ಕಿ.ಮೀ. ಪಶ್ಚಿಮಕ್ಕೆ ಉತ್ತರಾಭಿಮುಖವಾಗಿ ಹಾವಿನಂತೆ ಹರಿಯುತ್ತಿದೆಎರಡು ಚಿಕ್ಕ ಹಳ್ಳಗಳು ಐಹೊಳೆಯ ಇಕ್ಕೆಲಗಳಲ್ಲಿ ಪೂರ್ವ ದಿಕ್ಕಿನಿಂದ ಹರಿದು ಬಂದು ಮಲಪ್ರಭೆಯನ್ನು ಸೇರಿವೆ.

ಜೈನ ಗುಹಾಲಯ (ಮೀನ ಬಸದಿ)

ಮೀನ ಬಸದಿ ಎಂದು ಕರೆಯಲಾಗುವ ಜೈನ ಗುಹಾಲಯವು ಊರ ಹೊರಗೆ ಮೇಗುಟಿ ಬೆಟ್ಟದ ಪಶ್ಚಿಮ ಪಾರ್ಶ್ವದಲ್ಲಿ ನೈಋತ್ಯಕ್ಕೆ ಮುಖ ಮಾಡಿದೆ. ಇದು ತೆರೆದ ಮುಖಮಂಟಪ, ವಿಶಾಲ ಸಭಾಮಂಟಪ, ಅದರ ಎಡ ಬಲಗಳಲ್ಲಿ ಅಧಿಷ್ಠಾನದ ಮೇಲಿರುವ ಚಿಕ್ಕ ಮಂಟಪಗಳು, ಹಿಂಭಾಗದಲ್ಲಿ ಅಧಿಷ್ಠಾನದ ಮೇಲಿರುವ ನ್ನೊಳಗೊಂಡಿದೆ. ಕಾಲಾನಂತರದಲ್ಲಿ ಗರ್ಭಗೃಹ ಮುಖಮಂಟಪದ ಭಾಗಗಳ ತೆರೆದ ಮುಂಭಾಗವನ್ನು ದೊಡ್ಡ ಕಲ್ಲು ಘನಗಳನ್ನು ಪೇರಿಸಿ ಮುಚ್ಚಲಾಗಿದೆ. ಮುಖಮಂಟಪದ ವಿತಾನದಲ್ಲಿ ಸುಂದರ ಅಲಂಕಾರಿಕ ವಿನ್ಯಾಸಗಳಿವೆ.

ಪೂರ್ವ ಪಾರ್ಶ್ವಗೋಡೆಯಲ್ಲಿ ಬಾಹುಬಲಿಯು (ಗೊಮ್ಮಟನು) ಕಾಯೋತ್ಸರ್ಗ ಮುದ್ರೆಯಲ್ಲಿ ತನ್ನ ಪರಿಸರದ ಆಗುಹೋಗುಗಳ ಪರಿವೆ ಇಲ್ಲದೆ ತಪಸ್ಸನ್ನಾಚರಿಸುತ್ತಿದ್ದಾನೆ. ಕೆಳಗೆ ಹುತ್ತಗಳು ಬೆಳೆದು ಹಾವುಗಳು ಓಡಾಡುತ್ತಿವೆ. ಮಾಧವೀ ಬಳ್ಳಿಗಳು ಅವನ ಕೈಕಾಲುಗಳನ್ನು ಬಳಸಿ ಮೇಲೇರಿ ಆಕಾಶದಲ್ಲಿ ಜಾಲ ನಿರ್ಮಿಸಿವೆ. ಇವನ ಎಡಬಲಗಳಲ್ಲಿ ಮಾಧವೀಲತೆಯನ್ನು ಬಿಡಿಸುವುದರಲ್ಲಿ ಮಗ್ನರಾಗಿರುವ ವಿದ್ಯಾಧರಿಯರಿದ್ದಾರೆ. ಬಾಹುಬಲಿಯ ಹಿಂಭಾಗದಲ್ಲಿ ಎಡಗಡೆ ಇಬ್ಬರು ವಿದ್ಯಾಧರರು ತೇಲುತ್ತಿದ್ದಾರೆ. ಒಬ್ಬ ವಿದ್ಯಾಧರನು ಮಾಧವೀಲತೆಗಳ ಜಾಲದೊಳಗಿಂದ ತೂರಿ ಬರಲು ಪ್ರಯತ್ನಿಸುತ್ತಿದ್ದಾನೆ. ಕಥೆಯ ಪ್ರಕಾರ, ಬಾಹುಬಲಿಯ ಮೈಬಳಸಿ ಆಕಾಶದಲ್ಲಿ ಹರಡಿದ್ದ ಮಾಧವೀಲತೆಗಳು ವಿದ್ಯಾಧರ ದಂಪತಿಗಳ ಚಲನೆಗೆ ತಡೆಯೊಡ್ಡುತ್ತಿದ್ದವು. ಅದರಿಂದ ಬಾಹುಬಲಿಯ ತಪಸ್ಸಿಗೆ ಭಂಗ ಬರಬಹುದೆಂಬ ಭಯದಿಂದ, ವಿದ್ಯಾಧರಿಯರು ಆಗಾಗ ಮಾಧವೀಲತೆ ಗಳನ್ನು ಬಿಡಿಸಿ ಹೋಗುತ್ತಿದ್ದರು!

ಮುಖಮಂಟಪದ ಪಶ್ಚಿಮ ಗೋಡೆಯಲ್ಲಿ ಪಾರ್ಶ್ವನಾಥನ 'ಕಮಠೋಪಸರ್ಗ'ದ ದೃಶ್ಯವಿದೆ. ಕಾಯೋತ್ಸರ್ಗ ಮುದ್ರೆಯಲ್ಲಿ ನಿಂತಿರುವ ಪಾರ್ಶ್ವನಾಥನ ತಲೆಯ ಮೇಲೆ ಧರಣೇಂದ್ರ ಯಕ್ಷ ತನ್ನ ಐದು ಹೆಡೆಗಳನ್ನು ಬಿಚ್ಚಿದ್ದಾನೆಪಾರ್ಶ್ವನಾಥನ ಬಲ ಪಕ್ಕದಲ್ಲಿರುವ ಇಬ್ಬರು ನಾಗಸ್ತ್ರೀಯರಲ್ಲಿ ಒಬ್ಬಳು ಪದ್ಮಾವತಿ. ಈಕೆ ವಜ್ರಕೊಡೆಯನ್ನು ಹಿಡಿದಿದ್ದಾಳೆ. ಮೇಲ್ಗಡೆ ಎಡಮೂಲೆಯಲ್ಲಿ ಬಂಡೆಯನ್ನು ಎರಡೂ ಎಸೆಯಲು ಕೈಗಳನ್ನೆತ್ತಿ ಪಾರ್ಶ್ವನಾಥನ ಮೇಲೆ ಪ್ರಯತ್ನಿಸುತ್ತಿರುವ ಕಮಠನಿದ್ದಾನೆ.ಪಾರ್ಶ್ವನಾಥನ ತಪೋಭಂಗ ಮಾಡಲುಅಸಮರ್ಥನಾದ ಕಮಠನು ಕೆಳಗಡೆ ಎಡಪಕ್ಕದಲ್ಲಿ ಕೈಮುಗಿದು ಕುಳಿತಿದ್ದಾನೆ.

ವಿಶಾಲ ಸಭಾಮಂಟಪದ ವಿತಾನದಲ್ಲಿ ಪದ್ಮ ಹಾಗು ಇತರ ಸುಂದರ ಅಲಂಕಾರಗಳಿವೆ. ಹಿಂಭಾಗದಲ್ಲಿ ಗರ್ಭಗೃಹದ ಪಾರ್ಶ್ವಗಳಲ್ಲಿ ತ್ರಿಭಂಗಿ ಯಲ್ಲಿರುವ, ಕಮಲವನ್ನು ಹಿಡಿದಿರುವ ದ್ವಾರಪಾಲರಿದ್ದಾರೆಎಡಗಡೆಯ ದ್ವಾರಪಾಲಕನ ಬಲ ಪಕ್ಕದಲ್ಲಿ ಮೀನು ಹಿಡಿದಿರುವ ಕುಳ್ಳನಿರುವದು ಕುತೂಹಲಕಾರಿಯಾಗಿದೆ.

ಸಭಾಮಂಟಪದ ಒಂದು ಪಾರ್ಶದಲ್ಲಿರುವ ಚಿಕ್ಕ ಮಂಟಪದಲ್ಲಿ ಪಾರ್ಶನಾಥನ 'ಸಮವಸರಣ ಕಲ್ಯಾಣ'ದ (ಪ್ರಥಮ ಉಪದೇಶ ಸಂದರ್ಭದ) ಅಪೂರ್ಣ ಶಿಲ್ಪವಿದೆ. ಸಿಂಹಾಸನದ ಮೇಲೆ ಪದ್ಮಾಸನದಲ್ಲಿ ತೀರ್ಥಂಕರನು ಕುಳಿತಿದ್ದಾನೆ. ಮೇಲೆ ಕೊಡೆಯಿದ್ದು, ಇಕ್ಕೆಲಗಳಲ್ಲಿ ಚಾಮರ ಹಿಡಿದಿರುವ ಪುರುಷರಿದ್ದಾರೆ. ಬಲಗಡೆ ಐದು ಹೆಡೆಯ ಧರಣೇಂದ್ರನು ಕುಳಿತು ತೀರ್ಥಂಕರನಿಗೆ ನಮಸ್ಕರಿಸುತ್ತಿದ್ದಾನೆ. ಎಡ ಪಕ್ಕದಲ್ಲಿರುವವಳು ಪದ್ಮಾವತೀ ಯಕ್ಷಿಬಲಭಾಗದ ಗೋಡೆಯಲ್ಲಿ ಪಾರ್ಶ್ವನಾಥನು ಜಿನಪದವಿಗೇರುವ ಮೊದಲು ಅನುಭವಿಸಿದ ವಿಲಾಸಿ ಜೀವನವನ್ನು, ಎಡಭಾಗದ ಗೋಡೆಯಲ್ಲಿ ಐರಾವತವನ್ನೇರಿ ತನ್ನ ಪರಿವಾರದೊಂದಿಗೆ ಪಾರ್ಶ್ವನಾಥನ 'ಸಮವಸರಣ'ಕ್ಕೆ ಧಾವಿಸುತ್ತಿರುವ ಇಂದ್ರನನ್ನು ತೋರಿಸಲಾಗಿದೆ

ಗರ್ಭಗೃಹದಲ್ಲಿರುವ ತೀರ್ಥಂಕರನು ಸಿಂಹಾಸನದ ಮೇಲೆ ಅರ್ಧಪರ್ಯಂಕಾಸನದಲ್ಲಿ ಕುಳಿತಿದ್ದಾನೆ. ವೃಕ್ಷದ ಕೆಳಗೆ ಧ್ಯಾನಮುದ್ರೆಯಲ್ಲಿ ಕುಳಿತಿರುವ ತೀರ್ಥಂಕರನ ಇಕ್ಕೆಲಗಳಲ್ಲಿ ಚಾಮರ ಹಿಡಿದಿರುವ ಸೇವಕರಿದ್ದಾರೆ. ಅವನ ತಲೆಯ ಹಿಂದೆ ಪ್ರಭಾಮಂಡಲ ಮತ್ತು ಮೇಲೆ ಮುಕ್ಕೊಡೆಯಿದೆಐದು ಪ್ರಾತಿಹಾರ್ಯಗಳನ್ನು ಮಾತ್ರ ತೋರಿಸಿರುವ ಈ ತೀರ್ಥಂಕರ ಶಿಲ್ಪವು ಪ್ರಾಯಶಃ ಮಹಾವೀರನದು.

'ಪಳ್ಳಸ್ವಾಮಿ ಮಹಾದಿವ್ಯ ಉತುಣ'ನು ಈ ಗುಹಾಲಯದ ಪ್ರಮುಖ ವಾಸ್ತುಶಿಲ್ಪಿಯಿರಬೇಕು. ಈ ಗುಹಾಲಯದ ಕಾಲ ಸುಮಾರು ಕ್ರಿ.ಶ. 7ನೇ ಶತಮಾನ. ಈ ಗುಹಾಲಯದಿಂದ ತುಸು ಉತ್ತರಕ್ಕೆ ಬೆಟ್ಟದ ಬದಿಗುಂಟ ಸಾಗಿದರೆ ಬಿಡಿ ಗುಹಾಲಯವನ್ನು ಓವಜನ ರಚಿಸಲು ಶಿಷ್ಯ ನರಸೊಬ್ಬನು ಇನ್ನೊಂದು ಬಂಡೆಯ ಮುಖದಲ್ಲಿ ಗೆರೆಗಳನ್ನು ಕೊರೆದಿರುವದನ್ನು ಕಾಣಬಹುದು. ಐಹೊಳೆಯ ಇನ್ನೊಂದು ತೀರ ಚಿಕ್ಕ ಜೈನ ಗುಹೆಯು ಇದೇ ಬೆಟ್ಟದಲ್ಲಿ ಚಿಕ್ಕ ಸ್ವತಂತ್ರ ಬಂಡೆಯಲ್ಲಿದೆ

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಐಹೊಳೆ ಗ್ರಾಮದ ಬೆಟ್ಟದಲ್ಲಿ ಬಾದಾಮಿ ಚಲುಕ್ಯರ ಆಳ್ವಿಕೆಯ ಕಾಲದಲ್ಲಿ (ಕ್ರಿ.ಶ. ಸುಮಾರು ೭ನೆಯ ಶತಮಾನ) ಕೊರೆಯಲ್ಪಟ್ಟಿರುವ ಜೈನ ಗುಹಾಲಯವಿದೆ. ಇದರ ವರಾಂಡದ ಬಲಬದಿಯ ಭಿತ್ತಿಯಲ್ಲಿ ಬಾಹುಬಲಿಯ ಉಬ್ಬುಶಿಲ್ಪವಿದೆ. ಇದು ಐದು ಅಡಿ ಹತ್ತು ಅಂಗುಲ ಎತ್ತರವಾಗಿದೆ. ಪೊದೆಗಳ ಮಧ್ಯೆ ಪೀಠದ ಮೇಲೆ ನಿಂತಿರುವ ಬಾಹುಬಲಿಯ ಕಾಲುಗಳ ಪಾರ್ಶ್ವಗಳಲ್ಲಿ ಬಳ್ಳಿ, ಹುತ್ತ, ಸರ್ಪಗಳನ್ನು ಈ ಮೇಲಿನ ಬಾದಾಮಿ ಪಟ್ಟಣದ ಉಬ್ಬುಶಿಲ್ಪದಲ್ಲಿದ್ದಂತೆಯೇ ತೋರಿಸಲಾಗಿದೆ. ಆದರೆ ಇಲ್ಲಿ ಬಾಹುಬಲಿಯ ಪಾರ್ಶ್ವಗಳಲ್ಲಿ ತ್ರಿಭಂಗಿಯಲ್ಲಿ ನಿಂತು ಮಾಧವೀ ಲತೆಗಳನ್ನು ಬಿಡಿಸುವುದರಲ್ಲಿ ಮಗ್ನರಾಗಿರುವ ವಿದ್ಯಾಧರಿಯರು ಕಿರೀಟಮಕುಟ, ಗ್ರೆöÊವೇಯಕಹಾರಗಳು, ಕರ್ಣಕುಂಡಲಗಳು, ಛನ್ನವೀರದಂತೆ ಸಾಗಿರುವ ಸ್ತನಸೂತ್ರ, ಕಂಕಣಗಳು, ಪಾದಸರಗಳು, ಕಟಿವಸ್ತç ಮೊದಲಾದ ವಸ್ತಾçಭರಣಗಳನ್ನು ಧರಿಸಿ ಸರ್ವಾಲಂಕೃತರಾಗಿದ್ದಾರೆ. ಬಾಹುಬಲಿಯ ಶಿಲ್ಪಕ್ಕಿಂತ ಈ ವಿದ್ಯಾಧರಿಯರ ಶಿಲ್ಪಗಳನ್ನು ಆಕರ್ಷಕವಾಗಿ ಕೆತ್ತಿರುವುದು ಗಮನೀಯವಾಗಿದೆ. ಆಕಾಶದಲ್ಲಿ ಇಬ್ಬರು ವಿದ್ಯಾಧರರು ತೇಲುತ್ತಿದ್ದಾರೆ. ಶಿಲ್ಪದ ಹಿನ್ನೆಲೆಯಲ್ಲಿ ವೃಕ್ಷಗಳನ್ನು ಚಿತ್ರಿಸಲಾಗಿದೆ. ಈ ಶಿಲ್ಪ ಸಂಕೀರ್ಣವು ಜಿನಸೇನಾಚಾರ್ಯರ `ಪೂರ್ವಪುರಾಣ' ಕೃತಿಯಲ್ಲಿನ ಬಾಹುಬಲಿಯ ಕಥಾನಿರೂಪಣೆಯನ್ನು ನೆನಪಿಸುತ್ತದೆ.

Deities & Specialities

Documentary Videos

Aihole Meena Basadi Courtesy : Sagar Shiraguppi

Additional Informations

Guide Jagadish : 7829168144

  1. [object Object]