Bagalkote district, Karnataka
Cave-4 is a jaina cave-temple, the smallest among the cave-temples at badami and datable to early 7th century ce. Somewhat unfinished,
It consists of an open verandah and an oblong antechamber with a sanctuary piercing into its rear wall.
Its verandah walls accommodate relief sculptures of bahubali (also called gommata) in penance and parsvanatha in penance over coming the obstacles of his demonic enemy kamathathe sanctuary doorframe depicts kama as the door- guardian. On the rear wall of the sanctuary is the relief sculpture of a sermon- delivering tirthankara, probably mahavira with halo behind and seated on a lion- throne under a chaitya-tree and triple-umbrellaand attended by chauri-bearers, vidyadharas offering flowers and divine drums beating by themselves.
There are several smaller and larger figures of tirthankaras in the antechamber. The small lady, seated beside a tirthankara, carved at the right side of the entrance to the cave is jakkavea pious votary who attained salvation according to the jaina vow called sallekhana. Kolimanchi is among the craftsmen who have signed on the boulder of the cavethe cave was originally accessed from the east side and separated from cave-3 by a stone wall
Badami is a town in the Bagalkot District of Karnataka Located 125 kms from Hubli. It was the second capital for Early Chalukyas From 543 to 757. 5 sites (1 group of 4 Caves and 4 free-standing temples) in Badami have been identified as World Heritage Site of UNESCO .
4th cave is Dedicated to Jaina Rock Cut Temple, with intricately carved pillars, Mahaveera, Parshvanatha & Bahubali Tirthankaras .
Bahubali standing in “Kayotsarga Posture” and engaged in undeterred meditation. Cobras are showing themselves from anthills near his feet. Madhavi creepers entwining his limbs rise to the skies. The Vidyadharis, fearing disturbance to his meditation, gently remove the creepers and offer him respects. This is the earliest known 6th Century A.D. stone Gommata also called Bahubali in India.
7ನೇ ಶತಮಾನದ ಆರಂಭದಲ್ಲಿ ನಿರ್ಮಿಸಲ್ಪಟ್ಟ ಈ ಜೈನ ಗುಹಾಲಯವು ಬಾದಾಮಿಯ ಗುಹಾಲಯಗಳಲ್ಲಿಯೇ ಅತ್ಯಂತ ಚಿಕ್ಕದು ತುಸು ಅಪೂರ್ಣವಾಗಿರುವ ಇದು ತೆರೆದ ಮುಖಮಂಟಪ, ಅಂತರಾಳ ಮತ್ತು ಗರ್ಭಗೃಹವನ್ನು ಹೊಂದಿದೆ.
ಮುಖಮಂಟಪದ ಗೋಡೆಗಳಲ್ಲಿ ಬಾಹುಬಲಿ, ಪಾರ್ಶ್ವನಾಥನ ಶಿಲ್ಪಗಳಿವೆ. ಗರ್ಭಗೃಹದ ಬಾಗಿಲವಾಡದಲ್ಲಿ ಕಾಮನು ದ್ವಾರಪಾಲಕನಾಗಿದ್ದಾನೆ. ಗರ್ಭಗುಡಿಯ ಗೋಡೆಯಲ್ಲಿ ಕುಳತ ತೀರ್ಥಂಕರ ಉಪದೇಶಿಸುತ್ತಿರುವ ಶಿಲ್ಪ ಬಹುಶಃ ಮಹಾವೀರನದು. ಅವನನ್ನು ಪ್ರಭಾಮಂಡಲ, ಚೈತ್ಯ ವೃಕ್ಷ, ಮೂಕ್ಕೊಡೆ, ಸಿಂಹಪೀಠ, ಚಾಮರ ಧಾರಿಗಳು, ಪುಷ್ಪಧಾರೆ ವಿದ್ಯಾಧರರು, ದೇವ ದುಂಭಿಗಳೊಂದಿಗೆ ತೋರಿಸಲಾಗಿದೆ.
ಬಾಗಲಕೋಟೆ ಜಿಲ್ಲೆಯ ತಾಲ್ಲೂಕು ಕೇಂದ್ರ ಬಾದಾಮಿ ಪಟ್ಟಣವು, ಕ್ರಿ.ಶ. ೫೦೦ ರಿಂದ ೮೧೩ರವರೆಗೆ ಆಳ್ವಿಕೆ ಮಾಡಿರುವ ಚಲುಕ್ಯರ ರಾಜಧಾನಿಯಾಗಿತ್ತು. ಚಲುಕ್ಯರು ಮತ್ತು ಅವರ ಮಾಂಡಲಿಕರು ಜೈನ ಧರ್ಮಕ್ಕೆ ವಿಶೇಷವಾದ ಪ್ರೋತ್ಸಾಹವನ್ನು ಕೊಟ್ಟಿದ್ದರು. ಅಂದು ಕೊಪ್ಪಳ, ಐಹೊಳೆ, ಪಟ್ಟದಕಲ್ಲು, ಬಾದಾಮಿ, ಅಣ್ಣಿಗೇರಿ, ಲಕ್ಷೆö್ಮÃಶ್ವರ, ಹೂಲಿ, ಆಡೂರು, ಹೊಂಬುಜ, ಹಳ್ಳೂರು, ಶ್ರವಣಬೆಳಗೊಳ, ಕೆಲಸೂರು, ಕರಟಗೇರಿ, ಬಂಕಾಪುರ, ಭಾಲ್ಕಿ, ಗಡಿಕೇಶ್ವಾರ, ಜೇಬುಳಗೇರಿ, ಕೋಗಳಿ, ಮಲ್ಲಸಮುದ್ರ, ನವಿಲೂರು, ಹಲಸಿ, ಬಸ್ತಿಪುರ (ಕೊಳ್ಳೆಗಾಲ), ನರಸಿಂಹರಾಜಪುರ, ಕೀರ್ತಿಪುರ (ಕಿತ್ತೂರು) ಮೊದಲಾದೆಡೆಗಳಲ್ಲಿ ಬಸದಿಗಳ ನಿರ್ಮಾಣ, ಶಿಲ್ಪಗಳ ಪ್ರತಿಷ್ಠಾಪನೆ, ದಾನ-ದತ್ತಿಗಳು ಇತ್ಯಾದಿ ಜೈನ ಚಟುವಟಿಕೆಗಳು ನಡೆದಿವೆ.೨ ಬಾದಾಮಿ ಪಟ್ಟಣದ ಬೆಟ್ಟದಲ್ಲಿ ಕ್ರಿ.ಶ. ಸುಮಾರು ೭ನೆಯ ಶತಮಾನದಲ್ಲಿ ಕೊರೆಯಲ್ಪಟ್ಟಿರುವ ಜೈನ ಗುಹಾಲಯವಿದೆ. ಇದು ಬೆಟ್ಟದ ಮೇಲಿರುವುದರಿಂದ ಮತ್ತು ಇಲ್ಲಿರುವ ಉಳಿದ ಗುಹಾಲಯಗಳಿಗಿಂತ ಮೇಲಿರುವುದರಿಂದ ಇದನ್ನು `ಮೇಗಣ ಬಸದಿ', `ಮೇಣ ಬಸದಿ' ಎಂದೆಲ್ಲ ಕರೆಯಲಾಗುತ್ತದೆ.
ಈ ಗುಹಾಲಯದ ವರಾಂಡದ ಬಲಬದಿಯ ಭಿತ್ತಿಯಲ್ಲಿ ಬಾಹುಬಲಿಯ ಉಬ್ಬುಶಿಲ್ಪವಿದೆ. ಇದು ಏಳು ಅಡಿ ಎಂಟು ಅಂಗುಲ ಎತ್ತರವಾಗಿದೆ. ಪೀಠದ ಮೇಲೆ ನಿಂತಿರುವ ಬಾಹುಬಲಿಯ ಹಿನ್ನೆಲೆಯಲ್ಲಿ ಕಾಡಿನ ಚಿತ್ರಣವಿದೆ. ಕೈಗಳು ಮತ್ತು ಕಾಲುಗಳನ್ನು ಮಾಧವೀ ಲತೆಗಳು ಬಳಸಿವೆ. ಕಾಲುಗಳ ಹತ್ತಿರ ಬೆಳೆದಿರುವ ಹುತ್ತಗಳಲ್ಲಿ ನಾಲ್ಕು ಸರ್ಪಗಳು ಹೆಡೆಗಳನ್ನೆತ್ತಿ ಹರಿದಾಡುತ್ತಿವೆ. ಜಡೆಗಟ್ಟಿದ ಕೂದಲುಗಳು (ನೀಳವಾದ ಕೇಶರಾಶಿ) ಭುಜಗಳ ಪಾರ್ಶ್ವಗಳಲ್ಲಿ ಇಳಿಬಿದ್ದಿವೆ. ಕೈಗಳು ಮತ್ತು ಕಾಲುಗಳನ್ನು ಬಳಸಿರುವ ಮಾಧವೀ ಲತೆಗಳನ್ನು ಇಬ್ಬರು ವಿದ್ಯಾಧರಿಯರು (ಖೇಚರಿಯರು) ಬಿಡಿಸುತ್ತ ನಿಂತಿದ್ದಾರೆ. ಇನ್ನಿಬ್ಬರು ವಿದ್ಯಾಧರಿಯರು ಬಾಹುಬಲಿಯ ಪಾದದಡಿಯಲ್ಲಿ ಅಂಜಲಿಮುದ್ರಾಸಕ್ತರಾಗಿ ವೀರಾಸನದಲ್ಲಿ ಆಸೀನರಾಗಿದ್ದಾರೆ. ಈ ಬಾಹುಬಲಿಯ ಉಬ್ಬುಶಿಲ್ಪದಲ್ಲಿ ಉತ್ತಮವಾದ ಕಲ್ಪನೆ ಮತ್ತು ಸ್ಫುಟವಾದ ಕೆತ್ತುವಿಕೆ ಗೋಚರಿಸುತ್ತದೆ.
ನಂತರ ಕಾಲದ ಅನೇಕ ಚಿಕ್ಕ ಮತ್ತು ದೊಡ್ಡ ಗಾತ್ರದ ತೀರ್ಥಂಕರರ ಶಿಲ್ಪಗಳು ಗುಹಾಲಯದಲ್ಲಿವೆ. ಗುಹಾಲಯದ ಪ್ರವೇಶದಲ್ಲಿ ತೀರ್ಥಂಕರನ ಪಕ್ಕದಲ್ಲಿ ಚಿಕ್ಕ ಮಹಿಳೆಯು ಕುಳಿತಿದ್ದಾಳೆ. ಇವಳು ಸಲ್ಲೇಖನದಿಂದ ಮೊಕ್ಷ ಪಡೆದ ಒಕ್ತಾವೆ ಎಂದು ಶಿಲ್ಪದ ಕೆಳಗಿರುವ ಶಾಸನದಿಂದ ತಿಳಿಯುತ್ತದೆ. ಗುಹೆಯ ಪರಿಸರದಲ್ಲಿ 'ಕೋಆಮಂಚಿ'ಯ ಹೆಸರಿದೆ. ಈ ಗುಹಾಲಯಕ್ಕೆ ಮೂಲತಃ ಪೂರ್ವ ದಿಕ್ಕಿನಿಂದ ತಲುಪಲು ಹಾದಿಯಿತ್ತು
ಬಾದಾಮಿ ಪರಿಚಯ
ಬಾಗಲಕೋಟೆ ಜಿಲ್ಲೆಯಲ್ಲಿರುವ ಬಾದಾಮಿಯು (1555 75°41' ಪೂ.) ತಾಲೂಕಿನ ಕೇಂದ್ರ ಸ್ಥಳವಾಗಿದೆ. ಇದು ಬೆಂಗಳೂರಿನಿಂದ ಉತ್ತರಕ್ಕೆ ಸುಮಾರು 500 ಕಿ.ಮೀ. ದೂರದಲ್ಲಿದೆಹುಬ್ಬಳ್ಳಿ-ಸೊಲ್ಲಾಪುರ ರೇಲ್ವೆ ಮಾರ್ಗದಲ್ಲಿ ಬಾದಾಮಿ ರೇಲ್ವೆ ನಿಲ್ದಾಣವಿದೆ. ಹುಬ್ಬಳ್ಳಿಯಿಂದ ಸುಮಾರು 125 ದೂರದಲ್ಲಿರುವ ಬಾದಾಮಿಯನ್ನು ಹುಬ್ಬಳ್ಳಿ-ಸೊಲ್ಲಾಪುರ ರಸ್ತೆಯಲ್ಲಿರುವ ಕುಳಗೇರಿ ಕ್ರಾಸಿನಿಂದ 20 ಕಿ.ಮೀ. ಪೂರ್ವಕ್ಕೆ ರಾಮದುರ್ಗ - ಬಾದಾಮಿ ರಸ್ತೆಯ ಮಾರ್ಗದಿಂದಾಗಲಿ, ಹುಬ್ಬಳ್ಳಿ ಗದಗ ಸೊಲ್ಲಾಪುರ ರೈಲು ಮಾರ್ಗದಿಂದಾಗಲಿ ತಲುಪಬಹುದು. ಗದಗ - ಬಾಗಲಕೋಟೆ ರಸ್ತೆ ಮೂಲಕ ಆ ಭಾಗದಿಂದ ಕೂಡ ತಲುಪುವದು ಸಾಧ್ಯ. ಬಾಗಲಕೋಟೆಯಿಂದಲೂ (ಸು36 ಕಿ.ಮೀ.) ಬಾದಾಮಿಗೆ ನೇರವಾಗಿ ರಸ್ತೆ ಮತ್ತು ರೈಲು ಮಾರ್ಗದ ಸಂಪರ್ಕಗಳಿವೆಹುಬ್ಬಳ್ಳಿಯಲ್ಲಿ ವಿಮಾನ ನಿಲ್ದಾಣವೂ ಬೆಂಗಳೂರು ಮತ್ತು ಮುಂಬಯಿಯಿಂದ ಪ್ರತಿದಿನ ವಿಮಾನಯಾನಗಳಿವೆ.
ಉತ್ತರ ಮತ್ತು ದಕ್ಷಿಣಕ್ಕಿರುವ ಎರಡು ಕಲ್ಲು ಬೆಟ್ಟಗಳು ಪೂರ್ವ ದಿಕ್ಕಿನಲ್ಲಿ ಕ್ರಮೇಣ ಹೊಂದಿಕೊಂಡಿದ್ದು ಬಾದಾಮಿಯ, ಕಣಿವೆಯನ್ನು ರೂಪಿಸಿವೆ. ಕಣಿವೆಯ ಪಶ್ಚಿಮ ಭಾಗದಲ್ಲಿ ಅಡ್ಡಲಾಗಿ ದಕ್ಷಿಣೋತ್ತರವಾಗಿ ಮತ್ತು ಉತ್ತರ ಭಾಗದಲ್ಲಿ ಪಶ್ಚಿಮದಿಂದ ಪೂರ್ವಕ್ಕೆ ಕಟ್ಟೆ ಕಟ್ಟಿ ದೊಡ್ಡ ಕೆರೆಯನ್ನು ನಿರ್ಮಿಸಲಾಗಿದೆ. ಇದನ್ನು ಅಗತೀರ್ಥ ಅಥವಾ ಭೂತನಾಥ ಹೊಂಡ ಎಂದು ಕರೆಯುತ್ತಾರೆ, ಬಾದಾಮಿಯ ಜೀವನಾಡಿಯಾಗಿ ಇದು ಇಂದಿಗೂ ಚಟುವಟಿಕೆಯಿಂದ ಕೂಡಿರುವ ಕರೆಯಾಗಿ ವರ್ತಿಸುತ್ತಿದೆ. ಇದರ ಉತ್ತರಕ್ಕಿರುವ ಬೆಟ್ಟದಲ್ಲಿ ದೇವಾಲಯಗಳು, ಕೋಟೆ ಮತ್ತು ಪ್ರಾಚ್ಯವಸ್ತು ಸಂಗ್ರಹಾಲಯ ಹಾಗು ದಕ್ಷಿಣಕ್ಕಿರುವ ಬೆಟ್ಟದಲ್ಲಿ ಗುಹಾಲಯಗಳು ಮತ್ತು ಕೋಟೆ ಇವೆ.
ನಾಲ್ಕನೆಯ ಜೈನ ಗುಹಾಲಯ
ಇದು ಗಾತ್ರದಲ್ಲಿ ಬಾದಾಮಿಯ ಗುಹಾಲಯಗಳಲ್ಲಿ ಅತಿ ಚಿಕ್ಕದುಅಪೂರ್ಣವಾಗಿದೆ. ಇದರ ಕಾಲ ಸುಮಾರು ಕ್ರಿ.ಶ. 7ನೇ ಶತಮಾನ. ಮೂಲದಲ್ಲಿ ಇದನ್ನು ತಲುಪಲು ಪೂರ್ವದಿಕ್ಕಿನಿಂದ ಕಡಿದಾದ ಹಾದಿಯಿತ್ತು. ಚಿಕ್ಕ ಮುಖಮಂಟಪ, ಅಂತರಾಳದಂತಹ ಒಳಮಂಟಪ ಹಾಗು ಅದರ ಹಿಂಗೋಡೆಯಲ್ಲಿ ಸ್ವಲ್ಪ ಎತ್ತರದಲ್ಲಿ ಕೊರೆದಿರುವ ಗರ್ಭಗೃಹ ಇದರ ಭಾಗಗಳು, ಗರ್ಭಗೃಹದ ದ್ವಾರದ ಬಲಗಡೆ ಹೂಹಿಡಿದಿರುವ ವ್ಯಕ್ತಿಯೂ ಹಾಗು ಎಡಗಡೆ ಕಬ್ಬಿನ ಬಿಲ್ಲು ಹಿಡಿದಿರುವ ಕಾಮನ ದ್ವಾರಪಾಲಕರಾಗಿ ಚಿತ್ರಿತರಾಗಿದ್ದಾರೆ ಗರ್ಭಗೃಹದ ಹಿಂಗೋಡೆಯಲ್ಲಿ ಸಿಂಹಾಸನದ ಮೇಲೆ ಕುಳಿತು ದಿವ್ಯಧ್ವನಿಯಿಂದ ಜಿನಶಾಸನವನ್ನು ಉಪದೇಶಿಸುವುದರಲ್ಲಿ ಮಗ್ನನಾಗಿರುವ ತೀರ್ಥಂಕರನ ಉಬ್ಬುಶಿಲ್ಪವಿದೆ. ಚಾಮರಧಾರಿ ಯಕ್ಷರು, ಚೈತ್ಯವೃಕ್ಷ, ಮುಕ್ಕೊಡೆ, ಪ್ರಭಾಮಂಡಲ, ದೇವದುಂದುಬಿ, ಪುಷ್ಪವೃಷ್ಟಿ ಎಂಬ . ಪ್ರಾತಿಹಾರ್ಯಗಳನ್ನು ಶಿಲ್ಪಿ ಸ್ಪಷ್ಟವಾಗಿ ತೋರಿಸಿದ್ದಾನೆ.
ಬಲ ಗೋಡೆಯಲ್ಲಿ ಬಾಹುಬಲಿಯ ಶಿಲ್ಪವಿದೆ. ಬಾಹುಬಲಿಯು ಕಾಯೋತ್ಸರ್ಗ ಭಂಗಿಯಲ್ಲಿ ನಿಂತು ಕಠೋರ ತಪಸ್ಸಿನಲ್ಲಿ ಮಗ್ನನಾಗಿದ್ದಾನೆ. ಅವನ ಪಾದಗಳ ಸಮೀಪ ಹುತ್ತಗಳಿಂದ ಹಾವುಗಳು ಹೆಡೆಯೆತ್ತಿವೆ. ಅವನ ಕಾಲುಕೈಗಳನ್ನು ಬಳಸಿ ಮಾಧವೀ ಚಲಿಸುವ ಬಳ್ಳಿಗಳು ಆಕಾಶದೆತ್ತರಕ್ಕೆ ಏರಿವೆ. ಆಕಾಶದಲ್ಲಿ ವಿದ್ಯಾಧರಿಯರು ತಮಗೆ ತಡೆಯಾಗುತ್ತಿದ್ದ ಬಳ್ಳಿಗಳು ಈ ಬಳುಕುವುದರಿಂದ ಅವನ ತಪಸ್ಸು
ಭಂಗವಾಗಬಾರದೆಂದು ಕೆಳಗಿಳಿದು ಬಂದು ಮಾಧವೀಲತೆಗಳನ್ನು ಬೇರ್ಪಡಿಸಿ
ನಮಸ್ಕರಿಸುತ್ತಿದ್ದಾರೆ. ಇಡಿ ಭಾರತದಲ್ಲಿ ಇದು ಬಾಹುಬಲಿಯ (ಗೊಮ್ಮಟನ) ಕಲ್ಲಿನ
ಶಿಲ್ಪಗಳಲ್ಲಿ ಮೊದಲನೆಯದಾಗಿದೆ. ಬಾಹುಬಲಿಯ ಎದುರುಗಡೆಯ ಗೋಡೆಯಲ್ಲಿ ಪಾರ್ಶ್ವನಾಥ
ತೀರ್ಥಂಕರನ ಉಬ್ಬುಶಿಲ್ಪವಿದೆ. ಇದು ಕಮಠೋಪಸರ್ಗದ ದೃಶ್ಯ, ಕೇವಲಜ್ಞಾನಕ್ಕಾಗಿ
ಕಾಯೋತ್ಸರ್ಗ ಭ೦ಗಿಯಲ್ಲಿ ತಪೋಮಗ್ನನಾಗಿರುವ ಪಾರ್ಶ್ವನಾಥನಿಗೆ ಐದು ಹೆಡೆಯ ಧರಣೇಂದ್ರ
ಯಕ್ಷನು ರಕ್ಷಣೆ ಒದಗಿಸಿದ್ದಾನೆ. ಅವನ ಬಲ ಪಕ್ಕದಲ್ಲಿ ಯಕ್ಷಿ ಪದ್ಮಾವತಿಯು
ವಜ್ರಕೊಡೆಯನ್ನು ಎತ್ತಿ ಹಿಡಿದಿದ್ದಾಳೆ. ಎಡ ಪಕ್ಕದ ಮೇಲಿನ ಮೂಲೆಯಲ್ಲಿ ಕಮಠ ಅಥವಾ
ಸಂವರನೆಂಬ ವೈರಿಯು ಬೆಟ್ಟವನ್ನು ಪಾರ್ಶ್ವನಾಥನೆಡೆಗೆ ಎಸೆಯುತ್ತಿದ್ದಾನೆ. ಇದೇ ರೀತಿ
ವಿವಿಧ ಉಪಸರ್ಗಗಳನ್ನೊಡ್ಡಿ ಪಾರ್ಶ್ವನಾಥನ ತಶೋಭಂಗ ಮಾಡಲು ಯ ಕಮಠನು ಸೋತಿದ್ದಾನೆ. ಇದರಿಂದ ಹತಾಶನಾಗಿ ಎರ ಪಕ್ಕದ ಪಾದದ ಬಳಿ ಪಾರ್ಶ್ವವಾಥನನ್ನು ಸ್ತುತಿಸುತ್ತ ಕುಳಿತಿದ್ದಾನೆ.
ಅಂತರಾಳದ ಗೋಡೆಗಳಲ್ಲಿರುವ ತೀರ್ಥಂಕರ ಶಿಲ್ಪಗಳು 10- 12ನೇ ಶತಮಾನದವು, ಗುಹೆಯ ಪ್ರವೇಶದಲ್ಲಿ ಎಡಗೋಡೆಯಲ್ಲಿ ಕುಳಿತ ತೀರ್ಥಂಕರನ ಶಿಲ್ಪವಿದ್ದು ಅವನ ಪಕ್ಕದಲ್ಲಿ ಒಬ್ಬ ಸ್ತ್ರೀ ಕೈಮುಗಿದು ಕುಳಿತಿರುವಂತೆ ತೋರಿಸಿದೆ. ಇದು ಜಿನಭಕ್ತಿ ಒಕ್ಕಾವೆಯು ತೀರ್ಥಂಕರನ ಸನ್ನಿಧಿಯಲ್ಲಿರುವ ಶಿಲ್ಪ, ಇದರ ಕೆಳಗೆ 11ನೇ ಶತಮಾನದ ಅಕ್ಷರಗಳಲ್ಲಿರುವ ಕನ್ನಡ ಶಾಸನವು ಕಂದಪದ್ಯಗಳಲ್ಲಿದ್ದು, 'ಜಕ್ಕಾವ' ಎಂಬ ಜಿನಭಕ್ತಿ ಸಮಾಧಿವಿಧಿಯಿಂದ ಮುಕ್ತಿಪಡೆದುದನ್ನು ತಿಳಿಸುತ್ತದೆಶಾಸನದಲ್ಲಿ ಅವಳನ್ನು ದಾನಚಿಂತಾಮಣಿ ಅತ್ತಿಮಬ್ಬೆಗೆ ಹೋಲಿಸಲಾಗಿದೆ
Guide Ramesh : 9481707823