Nerenki.com

Vikrama Setty Basadi - Adinatha Swamy

Dakshina Kannada district, Karnataka

ಶ್ರೀ ಆದಿನಾಥ ಸ್ವಾಮಿಯ ವಿಕ್ರಮ ಶೆಟ್ಟಿ ಬಸದಿ

 

ಈ ವಿಕ್ರಮ ಶೆಟ್ಟಿ ಬಸದಿಯು ಮಂಗಳೂರು ತಾಲೂಕಿನ ಪಡುಮಾರ್ನಾಡು ಗ್ರಾಮವು ಮೂಡುಬಿದಿರೆಯಲ್ಲಿದೆ. ಈ ಬಸದಿಯ ಸುತ್ತಲೂ ಅನೇಕ ಬಸದಿಗಳಿವೆ. ಈ ಬಸದಿಯ ಎದುರಿಗೆ ಪ್ರವೇಶದ್ವಾರದಲ್ಲಿ ಗೋಪುರವಿದೆ. ಈ ಬಸದಿಯ ಹತ್ತಿರವಿರುವ ಇನ್ನೊಂದು ಬಸದಿ ಎಂದರೆ ಪ್ರಸಿದ್ಧವಾದ ಗುರು ಬಸದಿ. ಈ ಬಸದಿಯ 5 ಅಡಿ ದೂರದಲ್ಲಿದೆ. ಈ ಬಸದಿಗೆ ಅನೇಕ ಗಣ್ಯ ವ್ಯಕ್ತಿಗಳು ಕೂಡ ಬರುತ್ತಾರೆ. ವಿಕ್ರಮ ಶೆಟ್ಟಿ ಬಸದಿಗೆ ಆಗಾಗ ಬರುವ ಕುಟುಂಬವೆಂದರೆ ಶ್ರಾವಕರಾದ ಶಂಭವಕುಮಾರ್, ಮಾಲತಿ ಚಂದ್ರರಾಜ್ ಬೆಟ್ಟಕೇರಿ ಇವರು, ಬಸದಿಯು ಮೂಡುಬಿದಿರೆ ಕೇಂದ್ರದಿಂದ ಒಂದೂವರೆ ಕಿ.ಮೀ ದೂರದಲ್ಲಿದೆ. ಜೈನ ಮಠದಿಂದ ಮುಂದೆ ಸಿಗುವ ಜೈನ್ ಹೈಸ್ಕೂಲು. ಅಲ್ಲಿಂದ ಸ್ವಲ್ಪ ಮುಂದೆ ಹೋಗಿ ಬಲಕ್ಕೆ ತಿರುಗಿದರೆ ಅಲ್ಲಿ ಮೊದಲಿಗೆ ವಿಕ್ರಮಶೆಟ್ಟಿ ಬಸದಿ ಸಿಗುತ್ತದೆ. ಈ ಬಸದಿಯು ಕಲ್ಲಿನಿಂದ ನಿರ್ಮಾಣಗೊಂಡಿದ್ದು ಇದು ಶಿಲಾಮಯವಾಗಿದೆ. ವಿಕ್ರಮ ಶೆಟ್ಟಿ ಬಸದಿಯನ್ನು ಈಗ ಜೈನ ಮಠದವರು ನಡೆಸುತ್ತಿದ್ದಾರೆ. ಈ ಬಸದಿಯ ಅಧ್ಯಕ್ಷರು ಪಟ್ಟಣ ಶೆಟ್ಟಿ, ಶ್ರೀ ಸುದೇಶ್ ಕುಮಾರ್ ಮತ್ತು ಪ್ರಮುಖ ಸದಸ್ಯರು ಅನಡ್ಕ ಶ್ರೀ ದಿನೇಶ್‌ ಕುಮಾರ್ ಅವರು, ಬೆಟ್ಟಕೇರಿ ಮನೆತನಕ್ಕೆ ಸೇರಿದವರಾಗಿರುತ್ತಾರೆ. ಶ್ರೀ ಜಯಸೇನ ಇಂದರು ವಿಕ್ರಮ ಶೆಟ್ಟಿ ಬಸದಿಯ ಇಂದ್ರರಾಗಿದ್ದಾರೆ.

 

ಈ ಬಸದಿಯನ್ನು ಸುಮಾರು 12ನೇ ಶತಮಾನದಲ್ಲಿ ವಿಕ್ರಮ ಶೆಟ್ಟಿ ಎಂಬ ಜೈನ ಶ್ರಾವಕರು ಕಟ್ಟಿದ್ದರಿಂದ ವಿಕ್ರಮ ಶೆಟ್ಟಿ ಬಸದಿಯೆಂದೇ ಹೆಸರುವಾಸಿಯಾಗಿದೆ. ಇವರ ಮನೆತನದವರು ಈಗ ಎಲ್ಲಿದ್ದಾರೆ ಎಂದು ತಿಳಿದಿಲ್ಲ. ಈ ಬಸದಿಯ ಪ್ರಧಾನ ಮೂಲನಾಯಕ ಬಿಂಬವು ಅಲಂಕಾರ ಗೊಂಡಿರುವ ಗಂಧ ಕುಟಿಯ ಹಿಂಬದಿ ಗರ್ಭಗೃಹದಲ್ಲಿ ವಿರಾಜಮಾನವಾಗಿದೆ. ಕೃಷ್ಣಶಿಲೆಯ ಈ ಚಿಕ್ಕ ಬಿಂಬವು ವಿಡಾಸನ ಭಂಗಿಯಲ್ಲಿದೆ. ಮೇಲ್ಗಡೆ ಪ್ರಭಾವಳಿಯಲ್ಲಿ ಮಕರ 'ತೋರಣ ಅಲಂಕಾರವಿದೆ. ಇಕ್ಕೆಲಗಳಲ್ಲಿರುವ ಕಂಬದಂತ ರಚನೆಗಳಿಂದಾಗಿ ಇದು 12ನೇ ಶತಮಾನದ ಬಿಂಬವನ್ನ ಬಹುದು. ಈ ಬಸದಿಯು ಇನ್ನೂ ಜೀರ್ಣೋದ್ದಾರಗೊಂಡಿಲ್ಲ. ವಿಕ್ರಮ ಶೆಟ್ಟಿ ಬಸದಿಯಲ್ಲಿ ಶ್ರೀ ಆದಿನಾಥ ಸ್ವಾಮಿಯ ಪೂಜೆ ನಡೆಯುತ್ತದೆ. ಹಾಗೆಯೇ ಬ್ರಹ್ಮದೇವರು, ಶ್ರುತ, ಗಣಧರ ಕೂಷ್ಮಾಂಡಿನ ದೇವಿಯ ವಿಗ್ರಹ, ಶ್ರೀ ಚಂದ್ರನಾಥ ಸ್ವಾಮಿ ವಿಗ್ರಹ, ಹಸಿರು ಕಲ್ಲಿನ ಒಂದು ಹೆಡೆಯ ಪದ್ಮಾವತಿ ಅಮ್ಮನವರ ವಿಗ್ರಹ ಮುಂತಾದವುಗಳಿವೆ. ಬಸದಿಯ ಎದುರು ಸುಂದರವಾದ 30 ಅಡಿ ಎತ್ತರದ ಮಾನಸ್ತಂಭವಿದೆ. ಇದು ಚೌಕಟ್ಟಿ ಆಸ್ತಿವಾರದ ಮೇಲೆ ಸ್ಥಾಪನೆಗೊಂಡಿದ್ದು, ತುದಿಯಲ್ಲಿ ಒಂದು ಮಂಟಪವನ್ನು ಹೊಂದಿದೆ. ಇದರ ಪೂರ್ವ ಪಶ್ಚಿಮ, ದಕ್ಷಿಣ ಹಾಗೂ ಉತ್ತರ ದಿಕ್ಕಿನಲ್ಲಿ ಅರಹಂತರ ಮೂರ್ತಿಗಳು ಇವೆ. ಈ ಬಸದಿಗೆ ಮೇಗಿನ ನೆಲೆ ಇಲ್ಲ. ವಿಕ್ರಮ ಶೆಟ್ಟಿ ಬಸದಿಯ ಅಂಗಳದ ಬಲಭಾಗದಲ್ಲಿ ಪಾರಿಜಾತ ಮರವಿದೆ, ಬೇರೆ ಯಾವುದೇ ಹೂವಿನ ಗಿಡಗಳು ಇಲ್ಲ. ಬಸದಿಯನ್ನು ಪ್ರವೇಶಿಸುವಾಗ ಸಿಗುವ ಎಡಭಾಗದಲ್ಲಿ ವಿಶೇಷ ಪೂಜೆ ನಡೆಯುವಾಗ ಡೋಲು, ವಾಲಗ, ಕಹಳೆ ಮತ್ತು ತಬಲಗಳೊಂದಿಗೆ ಆ ಗೋಪುರದಲ್ಲಿ ಕುಳಿತು ಅವುಗಳನ್ನು ಬಾರಿಸುತ್ತಿದ್ದರು. ಬಸದಿಗೆ ತಾಗಿಕೊಂಡು ಮುನ್ಯಾಸೋ ಎಂಬ ಕೋಣೆ ಇದೆ. ಈ ಬಸದಿಯ ಕಂಬಗಳು ಸುಂದರವಾದ ಶಿಲಾಕೃತಿಗಳಿಂದ ಕೂಡಿವೆ. ಹಾಗೇ ಬಸದಿಯ ಎದುರಿನ ಪ್ರಾರ್ಥನಾ ಮಂಟಪಕ್ಕೆ ಹತ್ತುವಲ್ಲಿ ಗೋಡೆಯ ಮೇಲೆ ದ್ವಾರಪಾಲಕರ ಎರಡು ವರ್ಣ ಚಿತ್ರಗಳು ಹಾಗೂ ಗೋಡೆಗಳ ಮೇಲೆ ವೈರಾಗ್ಯದ ವಿಭಿನ್ನ ವರ್ಣ ಚಿತ್ರಗಳು ಕಣ್ಮನ ಸೆಳೆಯುತ್ತವೆ ಎಂದು ಹೇಳಬಹುದು. ಇವು ಶ್ರೀ ಆದಿನಾಥ ಸ್ವಾಮಿಯ ಜೀವನಕ್ಕೆ ಸಂಬಂಧಪಟ್ಟವು. ಇವುಗಳ ಅನುಸಾರ 'ಒಂದು ದಿನ ಆದಿನಾಥ ಸ್ವಾಮಿಯ ವೈಭವೋತ್ಸವದಿಂದ ಇರುವಾಗ ನೃತ್ಯಪದರ್ಶನವು ನಡೆಯುತ್ತಿತ್ತು. ಆಗ ಪಕ್ಕನೆ ನೃತ್ಯಕಲಾವಿದೆಯು ಕುಸಿದು ಬಿದ್ದು ಮರಣವನ್ನಪ್ಪುತ್ತಾಳೆ, ಕೂಡಲೇ ನೃತ್ಯಕ್ಕಾಗಿ ಮತ್ತೊಬ್ಬರನ್ನು ನೇಮಕ ಮಾಡಿದಾಗ ಅದುವೇ ಜೀವನ. ಇದು ಕ್ಷಣಿಕ ಎಂದು ಆದಿನಾಥ ಸ್ವಾಮಿಗೆ ಗೊತ್ತಾಗಿ ತಾನು ವೈರಾಗ್ಯದಿಂದ ಜೀವನವನ್ನು ಲೌಕಿಕ ಸುಖ ಭಾಗ್ಯಗಳನ್ನು ತ್ಯಜಿಸಿದರೂ ಧ್ಯಾನದ ಮೂಲಕ ಜ್ಞಾನಾಸಕ್ತರಾದರು. ಈ ಬಸದಿಯ ಪಾರ್ಥನಾ ಮಂಟಪದಲ್ಲಿ ನಾಲ್ಕು ಕಂಬಗಳಿದ್ದು ಅಲ್ಲಿ ಜಯಘಂಟೆ ಮತ್ತು ಜಾಗಟೆಗಳನ್ನು ತೂಗಿ ಹಾಕಲಾಗಿದೆ. ಮುಂದೆ ಶಿಲಾಕೃತಿಗಳು ಕಂಬದ ಮೇಲೆ ಮತ್ತು ಕೆಳಗೆ ಇರುವ ಮಂಟಪವನ್ನು ತೀರ್ಥಮಂಟಪ ಎಂದು ಕರೆಯುತ್ತಾರೆ. ಗಂಧಕುಟಿಯು ಈ ತೀರ್ಥಂಕರ ಮಂಟಪದಲ್ಲಿದೆ. ಅದಕ್ಕೆ ಮುಂದೆ ಇರುವುದೇ ಗರ್ಭಗುಡಿ ಹೀಗೆ ಜಿನಾಲಯದಲ್ಲಿರುವ ಮಂಟಪ, ತೀರ್ಥಂಕರ ಮಂಟಪ ಹಾಗೂ ಗರ್ಭಗುಡಿ, ಗಂಧ ಕುಟಿಯ ಬಳಿಯಲ್ಲಿ ಗಣಧರಪಾದ, ಶ್ರುತ, ಬ್ರಹ್ಮದೇವರು ಇನ್ನೂ ಅನೇಕ ಸುಂದರವಾದ ಮೂರ್ತಿಗಳಿವೆ. ಇವುಗಳಿಗೆ ಯಾವಾಗಲೂ ಪೂಜೆ ನಡೆಯುತ್ತದೆ. ಇಲ್ಲಿ ಪೂಜೆಗೊಳ್ಳುವ ಯಕ್ಷ ಗೋಮುಖ ಯಕ್ಷ ಮತ್ತು ಚಕ್ರೇಶ್ವರಿ ಯಕ್ಷಿ.

 

ಈ ಬಸದಿಯಲ್ಲಿ ಇನ್ನೊಂದು ಪ್ರಮುಖ ಆಕರ್ಷಣೆ ಎಂದರೆ ಮಾತ್ರ ಪದ್ಮಾವತಿ ದೇವಿಯ ಮೂರ್ತಿ, ಇದಕ್ಕೆ ದಿನವೂ ಪೂಜೆ ನಡೆಯುತ್ತದೆ. ಮಾತೆ ಪದ್ಮಾವತಿ ದೇವಿಯನ್ನು ಸೀರೆ, ಬಳೆ ಮತ್ತು ಹೂವಿನಿಂದ ಅಲಂಕಾರ ಮಾಡಿ ಪೂಜೆ ಮಾಡಲಾಗುತ್ತದೆ. ಈ ಅಮ್ಮನವರ ಮೂರ್ತಿಯು ಪೂರ್ವಕ್ಕೆ ಮುಖ ಮಾಡಿಕೊಂಡಿದ್ದು, ಕಾಲಿನ ಬಳಿ ಕುಕ್ಕುಟ ಸರ್ಪವಿದೆ. ಈ ಬಸದಿಯಲ್ಲಿ ಅಮ್ಮನವರಿಗೆ ಹೊಂಬುಚ್ಚದಂತೆ ಹೂ ಹಾಕಿ ಪ್ರಸಾದ ನೋಡುವ ಕ್ರಮ ಇಂದಿಗೂ ಜಾರಿಯಲ್ಲಿದೆ. ಇಲ್ಲಿರುವ ಜಿನಬಿಂಬಗಳ ಪೀಠಗಳ ಮೇಲೆ ಕೆಲವು ಹಳೆಗನ್ನಡ ಬರಹಗಳಿವೆ. ಆದರೆ ಇದನ್ನು ಸರಿಯಾಗಿ ಓದಲು ಸಾಧ್ಯವಿಲ್ಲ. ಮೂಲ ಸ್ವಾಮಿಗೆ ದಿನಾಲೂ ಜಲಾಭಿಷೇಕ ಮತ್ತು ನಿತ್ಯಪೂಜಾವಿಧಿ ವಿಧಾನ ನಡೆಸಲಾಗುತ್ತದೆ. ಸ್ವಾಮಿಗೆ ಅಕ್ಷಯ ತದಿಗೆ ದಿವಸ ಇಕ್ಷು ರಸದ ಅಭಿಷೇಕವನ್ನು ಮಾಡಲಾಗುತ್ತದೆ. ಈ ಬಸದಿಗೆ ಪಂಚ ಕಲ್ಯಾಣ ನಡೆಸುವ ಸಮಯದಲ್ಲಿ ಮೂಲನಾಯಕ ಮೂರ್ತಿಗೆ ವಜ್ರಲೇಪನ ಮಾಡಲಾಗುತ್ತದೆ.

 

ಈ ಬಸದಿಗೆ ಬರುವ ಜನರು ಕೊಷ್ಠಾಂಡಿನ ಆಮ್ಮನವರಿಗೆ ಹರಕೆಯನ್ನು ಕೆಲವರು ಹೆರಿಗೆ ಸಮಯದಲ್ಲಿ ಬೆಳ್ಳಿಯ ತೊಟ್ಟಿಲು ಮತ್ತು ಮಗುವಿನ ಆಕೃತಿಯನ್ನು ಹರಕೆಯ ರೂಪದಲ್ಲಿ ಅರ್ಪಿಸಿ ವಿಶೇಷವಾಗಿ ಪೂಜೆ ನಡೆಯುತ್ತದೆ. ಪ್ರತಿವರ್ಷ ಮಾರ್ಚ್ ಇಪ್ಪತ್ತೊಂಭತ್ತರಂದು ಸಹಸ್ರ ಕುಂಕುಮಾರ್ಚನೆ ಮತ್ತು ಶ್ರೀ ಆದಿನಾಥ ಸ್ವಾಮಿಗೆ ಪಂಚಾಮೃತ ಅಭಿಷೇಕವು ನಡೆಯುತ್ತದೆ. ಸೆಪ್ಟೆಂಬರ್ ತಿಂಗಳಲ್ಲಿ ಮಂಗಳವಾರ ವಿಶೇಷ ಪೂಜೆ, ಹಬ್ಬದ ಪ್ರಯುಕ್ತ ನೋಂಪು ಮತ್ತು ಜೀವದಯಾಷ್ಟಮಿಯನ್ನು ನಡೆಸಲಾಗುತ್ತದೆ. ಬಸದಿಯ ಅಂಗಳದಲ್ಲಿ ಬಲಭಾಗದ ಮೂಲೆಯಲ್ಲಿ ಕ್ಷೇತ್ರಪಾಲನ ಸನ್ನಿಧಿ ಇದೆ. ಇಲ್ಲಿ ನಾಗರಕಲ್ಲು ಮತ್ತು ಕೆಲವು ಗುಂಡು ಕಲ್ಲುಗಳನ್ನು ಒಂದು ಪೀಠದ ಮೇಲೆ ಪ್ರತಿಷ್ಠಾಪಿಸಲಾಗಿದೆ. ಈ ಬಸದಿಯಲ್ಲಿ ಯಾವುದೇ ಶಾಸನ ಹಾಗೂ ಬರವಣಿಗೆಯ ಕಲ್ಲುಗಳು ದೊರೆತಿಲ್ಲ. ಬಸದಿಯ ಸುತ್ತಲೂ ಮುರಕಲ್ಲಿನ ಪ್ರಾಕಾರಗೋಡೆ ಇದೆ. ಈ ಬಸದಿಗೆ ಇತ್ತೀಚಿಗಿನ ವರ್ಷಗಳಲ್ಲಿ ಮುನಿಗಳಾದ ಶ್ರೀ ತರುಣಸಾಗರ್‌ಜೀ ಮತ್ತು ಶ್ರೀ ವಿರಾಗಸಾಗರ ಮುನ ಮಹಾರಾಜರು ಭೇಟಿ ನೀಡಿ ಹೋಗಿದ್ದಾರೆ. ವಿಕ್ರಮ ಶೆಟ್ಟಿ ಬಸದಿಗೆ ಮೂಲ ಆದಾಯ ಶ್ರೀ ಜೈನ ಮಠದಿಂದ ಕೊಡುವ ಮುನ್ನೂರು ರೂಪಾಯಿಗಳ ಕೊಡುಗೆ, ವಿಕ್ರಮ ಬಸದಿಯ ಸ್ಥಿತಿಗತಿಗಳನ್ನು ಸುಧಾರಿಸಲು ಇನ್ನೂ ಜೀರ್ಣೋದ್ಧಾರ ಕೆಲಸಗಳನ್ನು ಮಾಡಬೇಕೆಂದಿದ್ದಾರೆ

Deities & Specialities

Pooja Timings

9.30 am to 10.30 am

Photo Album

  1. # Name Contact Vehicle Type
    1 Dharmendra Indra 9845408666 dezire - 5seater, Ertiga - 7 seater
  1. # Name Contact Email Location
    1 Hotel Padival 9850299795 View Location
  1. # Name Contact Location
    1 Padiwals Restaurant (Managed By Jains) 08258237065 View Location
    2 Arihanth Ahaar 08277454582 View Location

Purohith

Jayasena Indra

7760431852

  1. [object Object]