Dakshina Kannada district, Karnataka
ಶ್ರೀ ಮಹಾವೀರ ಸ್ವಾಮಿ
ಬೆಟ್ಟೇರಿ ಬಸದ
ಬೆಟ್ಟೇರಿ ಬಸದಿಯಲ್ಲಿ ಪೂಜಿಸಲ್ಪಡುವ ಮೂಲನಾಯಕ ಭಗವಾನ್ ಶ್ರೀ ಮಹಾವೀರ ಸ್ವಾಮಿ. ಈ ಬಸದಿ ಮಂಗಳೂರು ತಾಲೂಕು, ಮೂಡುಬಿದಿರೆ ಜೈನರ ಪೇಟೆಯಲ್ಲಿದೆ. ಇದರ ಸಮೀಪವೇ ಹಿರೇ ಬಸದಿಯಿದೆ. ಅಲ್ಲಿಂದ ಈ ಬಸದಿಯ ದೂರವು 1 ಕಿ.ಮೀ. ಇಲ್ಲಿ ಬರುವ ಕುಟುಂಬಗಳು ಹತ್ತಿರದ ಶ್ರಾವಕ ಮನೆಯವರು ಮಾತ್ರ ಈ ಬಸದಿಯು ಮೂಡುಬಿದರೆಯ ಶ್ರೀಮಠಕ್ಕೆ ಸೇರಿದೆ. ಇದು ಯಾರಿಂದ ಕಟ್ಟಲ್ಪಟ್ಟಿದೆ ಎಂಬುದು ತಿಳಿದು ಬರುವುದಿಲ್ಲ. ಯಾವುದೇ ರೀತಿಯು ಐತಿಹಾಸಿಕ ಪುರಾವೆಗಳು ಈ ಬಸದಿಯಲ್ಲಿ ಕಂಡು ಬರುವುದಿಲ್ಲ.
ಇಲ್ಲಿ ಮಹಾವೀರ ತೀರ್ಥಂಕರರ ಪೂಜೆಯು ಶ್ರದ್ಧಾ ಭಕ್ತಿಗಳಿಂದ ನಡೆಯುತ್ತದೆ. ಪದ್ಮಾವತಿ ಅಮ್ಮನವರ ಮೂರ್ತಿಯು ಕಂಡು ಬರುತ್ತದೆ. ಅದೇ ರೀತಿ ಬ್ರಹ್ಮದೇವನ ಮೂರ್ತಿಯು ಕಂಡು ಬರುವುದಿಲ್ಲ. ಆದರೆ ಮಾನಸ್ತಂಭವು ಕಂಡು ಬರುವುದಿಲ್ಲ. ಆದರೆ ಬಸದಿಯ ಬಳಿ ಎರಡು ಪಾರಿಜಾತ, ಹೂವಿನ ಗಿಡಿಗಳು ಕಂಡು ಬರುತ್ತದೆ. ಜೊತೆಗೆ ಬಸದಿಯ ಅಂಗಳದಲ್ಲಿ ದಾಸವಾಳ, ನಂದಿಬಟ್ಟಲು ಗಿಡಗಳು ಕಂಡು ಬರುತ್ತದೆ. ಬಸದಿಯ ಎದುರು ಭಾಗದಲ್ಲಿ ಜನರಿಗೆ ಕುಳಿತುಕೊಳ್ಳಲು ಗೋಪುರವನ್ನು ಉಪಯೋಗಿಸುತ್ತಾರೆ. ಇಲ್ಲಿ ಬಸದಿಯ ಯಾವುದೇ ರೀತಿಯ ಕಾರ್ಯಾಲಯವಿಲ್ಲ. ಮುನಿವಾಸ ಅಥವಾ ಮುನ್ಯಾಸೋ ಕೋಣೆಯು ಕಂಡು ಬರುವುದಿಲ್ಲ, ಇಲ್ಲಿಯ ಗೋಡೆಯ ಮೇಲೆ ದ್ವಾರಪಾಲಕರ ಚಿತ್ರವು ಕಂಡು ಬರುತ್ತದೆ. ದ್ವಾರಪಾಲಕರ ಕಲ್ಲಿನ ಮೂರ್ತಿಯೂ ಕಂಡು ಬರುತ್ತದೆ. ಬೇರೆ ಯಾವುದೇ ಚಿತ್ರ ಕಂಡು ಬರುವುದಿಲ್ಲ. ಇಲ್ಲಿ ಪ್ರಾರ್ಥನಾ ಮಂಟಪದಲ್ಲಿ ನಾಲ್ಕು ಕಂಬಗಳು ಕಂಡು ಕೊಂಡಿಲ್ಲ. ಬಸದಿಗೆ ಸರ್ಕಾರವು ಆರ್ಥಿಕ ಸಹಾಯ ಬರುತ್ತದೆ. ಇಲ್ಲಿ ಜಯಘಂಟೆ, ಜಾಗಟೆಗಳನ್ನು ತೂಗಿ ಕೊಡಬೇಕೆಂದು ಇವರು ಸರ್ಕಾರವನ್ನು ವಿನಂತಿಸಿಕೊಂಡಿಲ್ಲ. ಹಾಕಲಾಗಿದೆ. ಶಿಲ್ಪಾಕೃತಿಯ ರೇಖಾಚಿತ್ರಗಳು ಇತ್ಯಾದಿ ಇದು ಮೂಡುಬಿದಿರೆ ಜೈನ ಮಠದ ಆಡಳಿತಕ್ಕೆ ಸೇರಿದೆ. ಯಾವುದೇ ಕಲಾಕೃತಿಗಳು ಕಂಡು ಬರುವುದಿಲ್ಲ, ತೀರ್ಥಂಕರ ದೇಣಿಗೆ ಕೊಡುಗೆಗಳಿಂದಲೇ ಇಷ್ಟು ದೊಡ್ಡ ಬಸದಿಯನ್ನು ಬಳಿಗೆ ಹೋಗುವಾಗ ಸಿಗುವ ಮಂಟಪವನ್ನು ತೀರ್ಥ ನಡೆಸುವುದು ಕಷ್ಟವೆಂಬುದು ಈ ಬಸದಿಯ ಹಾಗೂ ಮಂಟಪ' ಎಂದು ಕರೆಯುತ್ತಾರೆ. ಗಂಧಕುಟಿಯು ಈ ಆವರಣದ ಅಧ್ಯಯನದಿಂದ ವೇದ್ಯವಾಗುತ್ತದೆ.
ತೀರ್ಥಂಕರ ಮಂಟಪದಲ್ಲಿ ಇಲ್ಲ. ಅಥವಾ ಇದಕ್ಕೆ ಮುಂದೆ ಇರುವ ಇನ್ನೊಂದು ಮಂಟಪದಲ್ಲಿ ಕಂಡು ಬರುವುದಿಲ್ಲ
ಗಂಧಕುಟಿಯ ಬಳಿಯಲ್ಲಿ ಗಣಧರಪಾದ, ಶ್ರುತ ಬ್ರಹ್ಮದೇವರು ಇತ್ಯಾದಿ ಯಾವುದೇ ರೀತಿಯ ಮೂರ್ತಿಗಳು ಕಂಡು ಬರುವುದಿಲ್ಲ. ಈ ಬಸದಿಯಲ್ಲಿ ಪೂಜೆಗೊಳ್ಳುವ ಯಕ್ಷ ಯಕ್ಷಿಯರು, ಧರಣೇಂದ್ರ ಮತ್ತು ಪದ್ಮಾವತಿ ದೇವಿ, ಮಾತೆ ಪದ್ಮಾವತಿ ದೇವಿಯ ಮೂರ್ತಿ ಇದ್ದು ಪೂಜೆ ನಡೆಯುತ್ತದೆ. ಈ ದೇವಿಗೆ ಸೀರೆ ಉಡಿಸಿ ಬಳೆಗಳನ್ನು ಹಾಕಿ ಹೂವಿನಿಂದ ಅಲಂಕಾರ ಮಾಡಿ ಪೂಜೆ ನಡೆಯಲಾಗುತ್ತದೆ. ಅಮ್ಮನವರ ಕಾಲಿನ ಬಳಿಯಲ್ಲಿ ಕುಕ್ಕುಟ ಸರ್ಪವು ಕಂಡು ಬರುತ್ತದೆ. ಈ ಬಸದಿಯಲ್ಲಿ ಹೊಂಬುಚ್ಚದಂತೆ ಅಮ್ಮನವರ ಎದುರು ಹೂ ಹಾಕಿ ನೋಡುವ ಕ್ರಮವು ಕಂಡು ಬರುವುದಿಲ್ಲ. ಇಲ್ಲಿಯ ಜಿನಬಿಂಬಗಳ ಮತ್ತು ಪೀಠಗಳ ಮೇಲೆ ಯಾವುದೇ ರೀತಿಯ ಬರವಣಿಗೆ ಕಂಡು ಬರುವುದಿಲ್ಲ. ಈ ಬಸದಿಯಲ್ಲಿ ದಿನದಲ್ಲಿ ಬೆಳಿಗ್ಗೆ, ಮಧ್ಯಾಹ್ನ ಮತ್ತು ಸಾಯಂಕಾಲ ಹೀಗೆ ಮೂರು ಬಾರಿ ಪೂಜೆ ನಡೆಯುತ್ತಿಲ್ಲ.
ಈ ಬಸದಿಯ ಬಲಭಾಗದಲ್ಲಿ ಮೂರ್ತಿಗಳು, ತ್ರಿಶೂಲ, ನಾಗರಕಲ್ಲು ಮತ್ತು ಇತ್ಯಾದಿಗಳು ಇವೆ. ಅದೇ ರೀತಿ ಪೀಠವು ಇದೆ. ಬಸದಿಯ ಸುತ್ತಲೂ ಪ್ರಾಕಾರ ಗೋಡೆ ಇದೆ. ಇವು ಮುರಕಲ್ಲಿನಿಂದ ನಿರ್ಮಿತವಾಗಿದೆ. ಈ ಬಸದಿಗೆ ಆಫೀಸ್ ಎಂಬುದು ಇಲ್ಲ. ಇದಕ್ಕೆ ಸಂಬಂಧಿಸಿದ ಕಲಾಭವನ ಸಭಾಭವನ ಇತ್ಯಾದಿ ಹಾಲ್‌ಗಳು ಕಂಡು ಬರುವುದಿಲ್ಲ. ಬಸದಿಯ ಆಡಳಿತ ಮಂಡಳಿಯವರು ಕ್ಷೇತ್ರದಲ್ಲಿ ಮುಂದೆ, ಛತ್ರ ನೀರಿನ ಸರಬರಾಜು ಇತ್ಯಾದಿ ಏನು ಕಾರ್ಯಕ್ರಮ ನಿರ್ಮಾಣಗಳನ್ನು ನಡೆಸಬೇಕೆಂದು ಯೋಜನೆ ಹಾಕಿ ಕೊಂಡಿಲ್ಲ.
| # | Name | Contact | Vehicle Type |
|---|---|---|---|
| 1 | Dharmendra Indra | 9845408666 | dezire - 5seater, Ertiga - 7 seater |
| # | Name | Contact | Location | |
|---|---|---|---|---|
| 1 | Hotel Padival | 9850299795 | View Location |
| # | Name | Contact | Location |
|---|---|---|---|
| 1 | Padiwals Restaurant (Managed By Jains) | 08258237065 | View Location |
| 2 | Arihanth Ahaar | 08277454582 | View Location |