Nerenki.com

Chandranatha Swamy Basadi Valpady

Dakshina Kannada district, Karnataka

ಶ್ರೀ ಚಂದ್ರನಾಥಸ್ವಾಮಿ ಬಸದಿ, ವಾಲ್ಪಾಡಿ, ಪೆರಿಬೆಟ್ಟು ಈ ಬಸದಿಯ ಹೆಸರು ವಾಲ್ಪಾಡಿ ಶ್ರೀ ಚಂದ್ರನಾಥಸ್ವಾಮಿ ಬಸದಿ, ಪೆರಿಬೆಟ್ಟು, ಈ ಬಸದಿಯು ಮಂಗಳೂರು ತಾಲೂಕಿನ ವಾಲ್ದಾಡಿ ಗ್ರಾಮದ ವಾಲಾಡಿ ಎಂಬ ಊರಿನಲ್ಲಿದೆ. ಬಸದಿಯ ಹತ್ತಿರ ಶ್ರೀ ಬ್ರಹ್ಮ ದೇವಸ್ಥಾನ ಮತ್ತು ಶ್ರೀ ರಾಜಂ ದೈವಸ್ಥಾನ(ಗರಡಿ) ಇದೆ. ಇದರ ಹತ್ತಿರದಲ್ಲಿರುವ ಇನ್ನೊಂದು ಬಸದಿ ಅಳಿಯೂರು ಶ್ರೀ ಆದಿನಾಥಸ್ವಾಮಿ ಬಸದಿ. ಇದು ಸುಮಾರು 5 ಕಿ.ಮೀ. ದೂರದಲ್ಲಿದೆ. ಶ್ರೀ ಚಂದ್ರನಾಥಸ್ವಾಮಿ ಸನ್ನಿಧಿಗೆ 9-10 ಕುಟುಂಬದ ಸದಸ್ಯರು ಬರುತ್ತಾರೆ. ಪೆರಿಬೆಟ್ಟು ಮನೆಯವರು, ವಾಲ್ದಾಡಿ ಗುತ್ತು ಮನೆಯವರು, ಕೊಡ್ಡೆ ಮನೆಯವರು, ಪಡುಬೈಲು ಮನೆಯವರು, ವಾಲ್ದಾಡಿ ಕೆಳಗಿನ ಮನೆಯವರು, ಉಮಾನ್ ಬುನ್ನಡೆ ಮನೆಯವರು, ಕಾಯಕುಡೆ ಮನೆಯವರು, ಕೊಲ್ಲಂಗಾಲ್ ಮನೆಯವರು. ಹರೆಂಜಾರ್ ಮನೆಯವರು, ಪಾಪ್ಲಾಡಿ ಮನೆಯವರು ಆಗಾಗ ಬಸದಿಗೆ ಬರುವ ಕುಟುಂಬಗಳು. ಇದು ಮೂಡುಬಿದಿರೆ ಶ್ರೀ ಜೈನ್ ಮಠಕ್ಕೆ ಸೇರಿದ್ದು. ಬಸದಿಗೆ ಬರುವ ಹಾದಿ: ಮೂಡುಬಿದಿರೆ-ನಾರಾವಿ ರಸ್ತೆಯ ಕೊಣಜೆ ಕುಕ್ಕದ ಕಟ್ಟಿದರೆಗುಡ್ಡೆ ರಸ್ತೆಯಲ್ಲಿ ವಾಲ್ನಾಡಿಗೆ ಬಂದು 3 ಕಿ.ಮೀ. ದೂರದಲ್ಲಿರುವ ಬಸದಿಯನ್ನು ತಲುಪಬಹುದು. ಈ ಬಸದಿಯನ್ನು ವಾಲ್ಪಾಡಿ ವ್ಯವಸ್ಥಾಪಕ ಮಂಡಳಿ ಯವರು ನಡೆಸುತ್ತಿದ್ದಾರೆ. ವ್ಯವಸ್ಥಾಪಕ ಮಂಡಳಿಯ ಗೌರವ ಅಧ್ಯಕ್ಷರು ಶ್ರೀ ಸಂಪತ್ ಸಾಮ್ರಾಜ್ಯ, ಅಧ್ಯಕ್ಷರು ಶ್ರೀ ರತ್ನಕುಮಾರ ಶೆಟ್ಟಿ, ಪೆರಿಬೆಟ್ಟು ಮನೆ. ಇತರ ಪ್ರಮುಖ ಸದಸ್ಯರು ಶ್ರೀಗಳಾದ ರಘುವೀರ ಮುದ್ಯ ವಾಲ್ಪಾಡಿ ಗುತ್ತು ಮನೆ (ಕಾರ್ಯದರ್ಶಿ), ಪ್ರಭಾಚಂದ್ರ ಜೈನ್ ಕೋಡ್ಲೆ ಮನೆ (ಕೋಶಾಧಿಕಾರಿ), ಉಪಾಧ್ಯಕ್ಷರು ಶ್ರೀಗಳಾದ ಪಾಂಡಿರಾಜ ಹೆಗ್ಡೆ, ಉದಯಕುಮಾರ್ ಪೆರಿಬೆಟ್ಟು ಮತ್ತು ಗುಣಪಾಲ ಮದ್ಯ. ಬಸದಿಯ ಇಂದ್ರರ ಹೆಸರು ಶ್ರೀ ಜಯಸೇನ ಇಂದ್ರರು. ಈ ಬಸದಿಯನ್ನು ಪೆರಿಬೆಟ್ಟು ಮನೆಯ ದುಗ್ಗಣ್ಣ ಶೆಟ್ಟಿಯವರು 1895ನೇ ಇಸವಿಯಲ್ಲಿ ಕಟ್ಟಿಸಿದ್ದರು. ದಿವಂಗತ ದುಗ್ಗಣ್ಣ ಶೆಟ್ಟಿಯವರ ಕುಟುಂಬಸ್ಥರು ಆದೇ ಪರಿಬೆಟ್ಟು ಮನೆಯಲ್ಲಿ ವಾಸವಾಗಿದ್ದಾರೆ. ಈ ಬಸದಿಗೆ ಮೇಗಿನ ನೆಲೆ ಇಲ್ಲ. ಆದರೆ ಅಂತಹ ರಚನೆ ಇದೆ. ಅದರ ಮುಂದುಗಡೆ ದೇವಕೂಟವಿದೆ. ಬಸದಿಯಲ್ಲಿ ಶ್ರೀ ಪದ್ಮಾವತೀ ಅಮ್ಮನವರ ಮೂರ್ತಿ, ಬ್ರಹ್ಮ ದೇವರ ಮೂರ್ತಿಯಿದೆ. ಎದುರು ಮಾನಸ್ತಂಭ ಇಲ್ಲ. ಬಸದಿಯ ಬಳಿಯಲ್ಲಿ ಒಂದು ಪಾರಿಜಾತ ಹೂವಿನ ಗಿಡ ಇದೆ. ಅದರಂತೆ ಬಸದಿಯ ಹತ್ತಿರದಲ್ಲಿ ಬೇರೆ ಜಾತಿಯ ಹೂವಿನ ಗಿಡಗಳನ್ನು ನೆಡಲಾಗಿದೆ. ಬಸದಿಯ ಎಡ-ಬಲ ಬದಿಗಳಲ್ಲಿರುವ ಗೋಪುರವನ್ನು ವಿಶೇಷ ಪೂಜೆ-ಇತರ ಕಾರ್ಯಕ್ರಮಗಳು ನಡೆಯುವಾಗ ಜನರು ಕುಳಿತುಕೊಳ್ಳಲು ಉಪಯೋಗಿಸುತ್ತಾರೆ. ಬಸದಿಗೆ ಕಾರ್ಯಾಲಯ ಇಲ್ಲ. ಇಲ್ಲಿಗೆ ಯಾವುದೇ ಮುನಿಗಳು ಈವರೆಗೆ ಬಂದಿಲ್ಲ. ಬಸದಿಯ ಎದುರಿನ ಪ್ರಾರ್ಥನಾ ಮಂಟಪದ ಗೋಡೆಯ ಮೇಲೆ ದ್ವಾರಪಾಲಕರ ಬಣ್ಣದ ಚಿತ್ರಗಳಿವೆ. ಗೊಡೆಗಳ ಮೇಲೆ ಬೇರೆ ಯಾವುದೇ ಚಿತ್ರಗಳಿಲ್ಲ. ಪ್ರಾರ್ಥನಾ ಮಂಟಪದಲ್ಲಿ ನಾಲ್ಕು ಕಂಬಗಳಿರುವ ಮಂಟಪ ಇದೆ. ಅಲ್ಲಿ ಜಯಘಂಟೆ, ಜಾಗಟೆಗಳನ್ನು ತೂಗು ಹಾಕಲಾಗಿದೆ. ಅಲ್ಲಿಂದ ಮುಂದುವರಿದ ತೀರ್ಥಂಕರ ಸ್ವಾಮಿಯ ಬಳಿಗೆ ಹೋಗುವಾಗ ಸಿಗುವ ಮಂಟಪವನ್ನು ತೀರ್ಥಂಕರ ಮಂಟಪ ಎಂದು ಕರೆಯುತ್ತಾರೆ. ತೀರ್ಥಂಕರ ಮಂಟಪದಲ್ಲಿ ಗಂಧಕುಟಿಯಿದೆ. ಗಂಧಕುಟಿಯ ಬಳಿಯಲ್ಲಿ ಗಣಧರ ಪಾದ, ಶ್ರುತ, ಬ್ರಹ್ಮದೇವರು ಇತ್ಯಾದಿ ಮೂರ್ತಿಗಳು ಇವೆ. ಇದಕ್ಕೆ ಯಾವಾಗಲೂ ಪೂಜೆ ನಡೆಯುತ್ತದೆ. ಮಾತೆ ಪದ್ಮಾವತೀ ದೇವಿಯ ಮೂರ್ತಿಗೆ ಸೀರೆ ಉಡಿಸಿ, ಬಳೆಗಳನ್ನು ಹಾಕಿ, ಹೂವಿನ ಅಲಂಕಾರ ಮಾಡಿ ಪೂಜೆ ಮಾಡಲಾಗುತ್ತದೆ. ಈ ಅಮ್ಮನವರ ಮೂರ್ತಿ ಉತ್ತರಕ್ಕೆ ಮುಖ ಮಾಡಿಕೊಂಡಿದೆ. ಕಾಲಿನ ಬಳಿಯಲ್ಲಿ ಕುಕ್ಕುಟ ಸರ್ಪ ಇದೆ. ಪದ್ಮಾವತೀ ಅಮ್ಮನವರ ಎದುರು ಹೂ ಹಾಕಿ ನೋಡುವ ಕ್ರಮ ಇದೆ. ಇಲ್ಲಿ ಜಿನಬಿಂಬಗಳ ಪೀಠಗಳ ಮೇಲೆ ಏನೂ ಬರವಣಿಗೆ ಇಲ್ಲ. ಮೂಲ ಸ್ವಾಮಿ ಮೂರ್ತಿ ಪಂಚಲೋಹ ಆಗಿದ್ದು, ಇದು ಸುಮಾರು 9 ಅಡಿ ಎತ್ತರ ಇರಬಹುದು. ಖಡ್ಗಾಸನ ಭಂಗಿಯಲ್ಲಿದ್ದು, ಪ್ರಭಾವಳಿಯನ್ನು ಹೊಂದಿದೆ. ಕೆಳಗೆ ಯಕ್ಷ-ಯಕ್ಷಿಯರ ಮೂರ್ತಿಗಳಿದ್ದು, ಪ್ರಭಾವಳಿಯು ನಯವಾಗಿದ್ದು, ಬದಿಗಳಲ್ಲಿ ವಿಭಿನ್ನ ಆಲಂಕಾರಿಕ ಆಕೃತಿಗಳನ್ನೂ, ಮೇಲ್ಗಡೆ ಕೀರ್ತಿಮುಖವನ್ನೂ ಹೊಂದಿದೆ. ಕೆಳಗಡೆ ಚಂದ್ರ ಲಾಂಭನವು ಸ್ಪಷ್ಟವಾಗಿ ಕಂಡುಬರುತ್ತದೆ. ದಿನವೂ ಮೂಲಸ್ವಾಮಿಗೆ ಕ್ಷೀರಾಭಿಷೇಕ, ಜಲಾಭಿಷೇಕ ಮಾಡಲಾಗುವುದು. ವಿಶೇಷ ದಿನಗಳಲ್ಲಿ ಮಂಗಳಾರತಿ ಪೂಜೆ ಮಾಡಲಾಗುತ್ತದೆ. ಇಲ್ಲಿಯ ಪದ್ಮಾವತೀ ಅಮ್ಮನವರಿಗೆ ವಿಶೇಷ ಹರಕೆಗಳು ಬರುತ್ತವೆ. ಬಸದಿಯಲ್ಲಿ ಒಂದು ದಿನದಲ್ಲಿ ಒಂದು ಬಾರಿ ಪೂಜೆ ನಡೆಯುತ್ತದೆ. ಈ ಬಸದಿಯಲ್ಲಿ ವಾರ್ಷಿಕ ಪೂಜೆ. ಮಹಾನವಮಿ ಪೂಜೆ, ದೀಪಾವಳಿ ನೋಂಪಿ, ಶ್ರಾವಣ ಮಾಸದ ಪೂಜೆ ಹೀಗೆ ಕೆಲವು ವಿಶೇಷ ಪೂಜೆಗಳು ನಡೆಯುತ್ತವೆ. ಬಸದಿಯ ಅಂಗಳದ ಬಲಮೂಲೆಯಲ್ಲಿ ಕ್ಷೇತ್ರಪಾಲನ ಸನ್ನಿಧಿ ಇದೆ. ಇಲ್ಲಿ ತ್ರಿಶೂಲ, ನಾಗರಕಲ್ಲು ಇತ್ಯಾದಿಗಳು ಇವೆ. ಇವೆಲ್ಲವನ್ನು ಒಂದು ಪೀಠದ ಮೇಲೆ ಪ್ರತಿಷ್ಠಾಪಿಸಲಾಗಿದೆ. ಬಸದಿಯ ಸುತ್ತಲೂ ಮುರಕಲ್ಲಿನಿಂದ ಪ್ರಾಕಾರ ಗೋಡೆಯನ್ನು ನಿರ್ಮಿಸಲಾಗಿದೆ. ಬಸದಿಗೆ ಆಫೀಸ್ ಇಲ್ಲ. ಬಸದಿಗೆ ಸಂಬಂಧಿಸಿದ ಕಲಾಭವನ, ಸಭಾಭವನ, ದೊಡ್ಡ ಹಾಲ್ ಇತ್ಯಾದಿ ಇಲ್ಲ. ಇದಕ್ಕೆ ಸರಕಾರದಿಂದ ಯಾವುದೇ ಧನ ಸಹಾಯ ಬಂದಿಲ್ಲ. ಈ ಬಸದಿಗೆ ಶ್ರೀ ವಿಶ್ವನಂದಿ ಮನಿ ಮಹಾರಾಜರು ಭೇಟಿ ನೀಡಿದ್ದಾರೆ. ಮೂಡುಬಿದಿರೆಯ ಭಟ್ಟಾರಕರು ಮತ್ತು ನರಸಿಂಹ ರಾಜಪುರದ ಭಟ್ಟಾರಕರು ಭೇಟಿ ನೀಡಿದ್ದಾರೆ. ಗಣ್ಯ ಶ್ರಾವಕರಾದ ಡಾ| ಡಿ. ವೀರೇಂದ್ರ ಹೆಗ್ಗಡೆಯವರು. ಶ್ರೀ ಅಭಯಚಂದ್ರ ಜೈನ್, ಡಾ॥ ಎಂ.ಎನ್. ರಾಜೇಂದ್ರ ಕುಮಾರ್ ಭೇಟಿ ನೀಡಿದ್ದಾರೆ. ದೇಣಿಗೆಯನ್ನೂ ನೀಡಿದ್ದಾರೆ. ಬಸದಿಯ ಆಡಳಿತ ಮಂಡಳಿಯವರು ಈ ಕ್ಷೇತ್ರದಲ್ಲಿ ಮುಂದೆ ಸಭಾಭವನ ನಿರ್ಮಾಣ ಮಾಡಬೇಕೆಂದಿದ್ದಾರೆ. ಬಸದಿಗೆ ಮುಖ್ಯ ಆದಾಯದ ಮೂಲ: ಧರ್ಮಸ್ಥಳದ ವತಿಯಿಂದ ಸ್ವಲ್ಪ ಹಣ ಬರುತ್ತದೆ ಮತ್ತು ಒಂದೊಂದು ತಿಂಗಳ ಪೂಜೆಯ ಹಣವನ್ನು ಊರಿನ ಜೈನ ಶ್ರಾವಕರು ನೀಡುತ್ತಾರೆ. ಆರ್ಥಿಕ ಸಹಾಯ ಕೊಡಬೇಕೆಂದು ಸರಕಾರವನ್ನು ವಿನಂತಿಸಿ ಕೊಂಡಿದ್ದರು. ಇದಕ್ಕೆ ಪ್ರತಿಯಾಗಿ ಬಸದಿಯ ಸುತ್ತಲೂ ಕಾಂಪೌಂಡ್ ವಾಲ್ ನಿರ್ಮಿಸಲು ಆರ್ಥಿಕ ಸಹಾಯ ಬಂದಿದೆ. ಬಸದಿಯ ಬಗ್ಗೆ ಇಲ್ಲಿಯ ಶ್ರಾವಕರಿಗೆ ಬಹಳ ಹೆಮ್ಮೆಯಿದೆ. ಅದು ಸದಾ ಮುಂದುವರಿದು, ಧರ್ಮ ಪ್ರಭಾವನೆಯೊಂದಿಗೆ ಸಮಾಜದಲ್ಲಿ ಶಾಂತಿ-ಸೌಹಾರ್ದಗಳು ಬೆಳೆಯಲು ಸಹಕಾರಿಯಾಗಬೇಕೆಂದು ಇಲ್ಲಿಯವರು ಆಶಿಸುತ್ತಿದ್ದಾರೆ. 

Deities & Specialities

  1. # Name Contact Vehicle Type
    1 Dharmendra Indra 9845408666 dezire - 5seater, Ertiga - 7 seater
  1. # Name Contact Email Location
    1 Hotel Padival 9850299795 View Location
  1. # Name Contact Location
    1 Padiwals Restaurant (Managed By Jains) 08258237065 View Location
    2 Arihanth Ahaar 08277454582 View Location
  1. [object Object]