Nerenki.com

Humcha Guddada Basadi Gommateshwara

Shivamogga district, Karnataka

Bahubali

Recently in 2012-13, the Guddada Basadi has been renovated nd reconstructed but the masonry structure and elevation is in the odern style. An historically significant Bahubali image, now in the newly built temple, is dated CE 898, a thousand and hundred years old, almost 84 years earlier to the consecration of Gommata in situ mage on the apex of Dodda Betta or Vindhyagiri at Sravanabelagola.

The Bahubali monolithic image is definitely one of the priced Monuments of the Rashtrakuta times. The Guddada Basadi had a Pancasakha door frame and was subsequently restructured in the eleventh century. The Miśraka pillars that once were in the mandapa show - a plain cubial base, the shaft immediately above being decorated with a pattern consisting of elongated overlapping petals with frilled edges... All in all, this seems to be a rather rare type of decorated pillar, among the most beautiful in Karnataka[Dhaky: 1986: 223].

The ornate figural ceilings of authentic Rashtrakuta specification in the Bogara Basadi and Pārsvanatha Basadi of PaĻiyakka, look very chaste and dignified. Some of the earlier pillar forms of considerable beauty and effectiveness are still vibrant in these two shrines. The typically Rashtrakuta columns with exquisite decorative details, inside Bogara Basadi, though modelled after the Ellora Jaina cave- pillars, are moderately ornamented.


ಗುಡ್ಡದ ಬಾಹುಬಲಿ: ಪ್ರಾಚೀನ ಗೊಮ್ಮಟ

ಸಾಂತರರ ಹೆಸರಾಂತ ಅರಸರಲ್ಲಿ ಒಬ್ಬನಾದ ವಿಕ್ರಮಾದಿತ್ಯ (ವಿಕ್ರಮ) ಸಾಂತರನು ತನ್ನ ಬಳೆಯಾಕೆ (ಬಂಗಾರದವಳು) ಪಾಜಯಕ್ಕನ ಕೋರಿಕೆಯನ್ನು ಮನ್ನಿಸಿ, ಕೆಲ್ಲಂಗೆಜುಯ ಹಿರಿಯ ಮೋನಿ-ಭಟಾರರನ್ನು ಹೊಂಬುಚ್ಚ ಮರಕ್ಕೆ ಕ್ರಿ. ಶ. 895 ಸುಮಾರಿನಲ್ಲಿ ಬರಮಾಡಿಕೊಂಡನು. ಮೋನಿ ಭಟಾರಕರು ಮೊಂಬುಚ್ಚದ ಗುಡ್ಡ ಮೇಲೆ ಇಳಿದುಕೊಂಡರು. ಅವರ ಆದೇಶದಂತೆ ವಿಕ್ರಮಾದಿತ್ಯ ಸಾಂತರನು ಗುಡ್ಡದ ಕಲ್ಲು ಬಸದಿಯನ್ನು ಕಟ್ಟಿಸಿ ಮೋನಿ ಭಟಾರರಿಗೆ ಒಪ್ಪಿಸಿದನು (ಹೊಂ, 26, 898) ಇದು ಬಾಹುಬಲಿ ಬಸದಿ.

ಸಂಪೂರ್ಣ ದ್ರಾವಿಡ ಶೈಲಿಯಲ್ಲಿದ್ದ ಈ ಕಲ್ಲಿನ ಬಸದಿಯೂ ಪೂರ್ಣಪಾಳು ಬಿದ್ದುದರಿಂದ ಆದರ ಕಲ್ಲುಗಳನ್ನು ಸಂಖ್ಯೆ ಹಾಕಿ ಒಂದರ ಮೇಲೆ ಒಂದರಂತೆ ಈಗಲೂ ಗುಡ್ಡದ ಮೇಲೆ, ಆ ಹಳೆಯ ಬಸದಿಯಿದ್ದ ಜಾಗದಲ್ಲೇ ಇರಿಸಿದ್ದಾರೆ. ಹೀಗೆ ಸಂಗ್ರಹಿಸಿ ಬಿಟ್ಟಿರುವ ಆವಶೇಷವೂ ಪಾಳು ಬಸದಿಯ ಶಿಲ್ಪದ ಕಲ್ಪನೆಗೆ ಆಧಾಯವಾಘಿದೆ. ಕೆಲವು ದುಂಡು ಕಂಬಗಳ ಮೇಲಿರುವ ಕೆತ್ತನೆಯ ನಯ-ನಾಜೂಕು ಆಕರ್ಷಕವಾಗಿದೆ. ಅದರ ಸುತ್ತಲೂ ಇಂಗ್ಲೀಷಿನ ಎಲ್ ಆಕಾರದಲ್ಲಿ ಹೊಸ ಕಟ್ಟಡ ಬಂದಿದೆ. ಈ ಸಿಮೆಂಟು ಕಟ್ಟಡಕ್ಕೆ ಮಹಡಿಯೂ ಇದೆ. ಇದರ ಕೆಳಗಡೆಯ ಒಂದು ದೊಡ್ಡ ಪಡಸಾಲೆಯೊಳಗೆ, ಪ್ರಾಚೀನ ಗುಡ್ಡದ ಬಸದಿಯ ಮೂಲ ನಾಯಕ ಬಿಂಬವಾದ ಬಾಹುಬಲಿ ಮೂರ್ತಿಯನ್ನು ನಿಲ್ಲಿಸಿ ಇಟ್ಟಿದ್ದಾರೆ. ಈ ಬಾಹುಬಲಿ ಮೂರ್ತಿಯು ಕ್ರಿ. ಶ. 898 ಕಡೆದು ಮಾಡಿರುವ ಏಕಶಿಲಾ ವಿಗ್ರಹ. ಕೆಲವು ಕಾರಣಗಳಿಗೆ ಈ ಪಾಳು ಬಿದ್ದ ಬಸದಿಗೂ ಉಳಿದಿರುವ ಬಾಹುಬಲಿ ಮೂರ್ತಿಗೂ ಹೆಚ್ಚಿನ ಐತಿಹಾಸಿಕ ಮಹತ್ವವಿದೆ.

ಹೊಂಬುಜದ ಗುಡ್ಡದ ಮೇಲಿನ ಕಲ್ಲುಬಸದಿಯ ಬಾಹುಬಲಿಯು ಒಂದೇ ಕಲ್ಲಿನ ರಚನೆ. ಪಾದದ ಕೆಳಗೆ ಬಿರಿದ ತಾವರೆಯನ್ನು ದಳಗಳೊಂದಿಗೆ ಬಿಡಿಸಿ ತೋರಿಸಿದೆ. ತಲೆಯ ಹಿಂಬದಿಗೆ ಲಾಳಾಕಾರದಲ್ಲಿನ, ಪ್ರಭಾವಳಿಯು ಲಕ್ಷಣವಾಗಿದೆತಲೆಯ ಮೇಲುಗಡೆ ಮುಕ್ಕೊಡೆಯಿದೆ. ಬಾಹುಬಲಿ ಮೂರ್ತಿಯ ತಲೆಯ ಮೇಲೆ ಕೊಡೆಯಿರುವುದು ಆಪರೂಪವಾಗಿದೆ. ಆರಳಿದ ತಾವರೆಯ ಎಲೆ ಮೇಲೆ ನಿಂರುವ ಬಾಹುಬಲಿ ಮೂರ್ತಿಯ ನೆತ್ತಿಯ ಮೇಲೆ ಹಿಡಿದಿರುವ ಕೊಡೆಯವರೆಗೆ ಒಟ್ಟು  ಆರು ಅಡಿಯಾಗುತ್ತದೆ; ಆದರೆ, ತಲೆಯಿಂದ ಕಾಲಿನವರೆಗೆ ಈ ವಿಗ್ರಹದ ಎತ್ತರ 41/2 ಆಡಿ (54ಅಂಗುಲ ಪ್ರರ್ಮಾಣ) ಇದೆ. ಹಿಮ್ಮಡಿಯಿಂದ ಆರಂಭವಾದ ಮಾಧವೀ ಲತೆಯು ಎರಡು ಕಾಳುಗಳನ್ನು ಸುತ್ತುವರಿದು ಮಂಡಿಯನ್ನು ದಾಟಿ ತೊಡೆಯವರೆಗೂ ಹಬ್ಬ ನೀಳವಾಗಿ ಚಾಚಿ ಇಳಿಬಿಟ್ಟಿರುವ ತೋಳಿನ ಅಂಗೈವರೆಗೆ ಕಾಣುತ್ತದೆ. ಈ ಬಳ್ಳಿಯ ಕೆತ್ತನೆಯಲ್ಲಿರುವ ನಾಜೂಕಿನ ಕೆಲಸ ಗದುನಾರ್ಹವಾದುದುಸೊಂಟದಿಂದ ಕಿಬ್ಬೊಟ್ಟೆ ಮತ್ತು ಹೊಕ್ಕಳವರೆಗೆ ತ್ರಿವಳಿಯಿದೆ. ಕಿರಿದಾದ ಸೊಂಟಕ್ಕೆ ಕೆಳಕ್ಕೆ ನಿತಂಬದವರೆಗೂ ಸೊಂಟದ ಮೇಲಕ್ಕೆ ಎದೆಯಿಂದ ಹೆಗಲಿನವರೆಗೂ ಹರಸು ತುಂಬಿರುವಂತೆ ದಷ್ಟಪುಷ್ಟ ದೇಹದಾರ್ಡ್ಯತೆ ಒಡಮೂಡಿದೆ.

ಖಡ್ಗಸನದಲ್ಲಿ ಬಾಹುಬಲಿಯ ಎರಡೂ ತೋಳುಗಳು ಕೆಳಕ್ಕೆ ತೊಡೆಯವರೆಗೆ ಇಳಿದಂತೆ ಜಾಚಿದ್ದು ಕಂಕುಳಿಂದ ಅಂಗೈವರೆಗೆ ಸಂದು ಇದ್ದು, ಈ ತೆರಪು ಸೊಂಟದ ಬಳಿ ಒಂದಂಗುಲದಷ್ಟಿದೆ. ನಖಶಿಖಾರಿತ ಪೂರ್ಣ ನಗ್ನತೆಯಿದೆ. ಎರಡೂ ಅಡಿಗಳೂ, ಕಾಳಿನ ಬೆರಳುಗಳು, ಹಿಮ್ಮಡಿ, ಮಂಡಿ,ಕೈಬೆರಳುಗಳು, ವಕ್ಷಸ್ಥಳ, ಕುತ್ತಿಗೆ, ಮುಖಮಂಡಲ- ಎಲ್ಲವೂ ಪ್ರಮಾಣಬದ್ಧವಾಗಿ ಸಾವಯವತೆಯಿಂದ ಕೂಡಿದ್ದು ಸುಖಾನುಭವ ಕೊಡುತ್ತವೆ. ಕುತ್ತಿಗೆಯಿಂದ ಕೆಳಕ್ಕೆ ಮೂರು ಗೆರೆಗಳನ್ನು ಉಂಗುರಾಕಾರದಲ್ಲಿ ತೋರಿಸಿದೆ. ಸ್ವಲ್ಪ ಕೋಲು ಮುಖವಿದ್ದು ಗಲ್ಲ, ಕೆನ್ನೆ, ತುಸು ಬಿರಿದ ತುಟಿ, ನೀಳ ಮೂಗು, ತೆರೆದ ಕಣ್ಣು ಎಸಳಿನಂತೆ ಬಾಗಿದ ಹುಲ್ಲು, ಸಮ ಪ್ರಮಾಣದ ಮಗೆ, ಭುಜಗಳವರೆಗೆ ಇಳಿಯ ಬಿಟ್ಟಿರುವ ತಲೆಗೂದಲು, ಉದ್ದನೆಯ ಕಿವಿಗಳು-ಇವುಗಳಿಂದ ಮುಗುಳ್ಳಗೆಯ ಮುಖಮಂಡಲ ಮುಗ್ಧವಾಗಿದೆ. ಒಟ್ಟಾರೆಯಾಗಿ ಅಡಿಯಿಂದ ಮುಡಿಯವರೆಗೆ ಬಾಹುಬಲಿ ವಿಗ್ರಹ ತನ್ನ ಅಂಗ ಸೌಷ್ಠವದಿಂದ ಕಣ್ಣನಗಳಲ್ಲಿ ಸೆಳೆಯುತ್ತದೆ. ಕರ್ನಾಟಕದ ಏಕಶಿಲಾ ಶಿಲ್ಲದ ಚರಿತ್ರೆಯಲ್ಲಿ ಸಾಂತರರು ಮಾಡಿಸಿದ ಹೊಂಬಬಜದ ಬಾಹುಬಲಿ ಮೂರ್ತಿಗೆ ಒಂದು ವಿಶಿಷ್ಟವಾದ ಗಣ್ಯ ಸ್ಥಾನವಿದೆ.

ಗುಡ್ಡದ ಬಸದಿಯಲ್ಲಿ ಹಿಂದೆ ಇದ್ದ ಎರಡು ಸುಂದರ ದ್ವಾರಪಾಲಕರ ವಿಗ್ರಹಗಳನ್ನು ಪಾಲಿ ಇರುವ ಮಠದ ಬಸದಿಯ ಹತ್ತಿರ ಇಡಲಾಗಿದೆ

ಈಗ ಇದೇ ಗುಡ್ಡದ ಮೇಲೆ ನಟ್ಟ ನಡುವೆ ಬೃಹದಾಕಾರದ ಪಾರ್ಶ್ವನಾಥ ಸ್ವಾಮಿಯ ಅಮೃತಶಿಲೆ ವಿಗ್ರಹವನ್ನು ಬಟ್ಟ ಬಯಲಲ್ಲಿ ನೆಟ್ಟಗೆ ನಿಲ್ಲಿಸಲಾಗಿದೆ. ಅದರ ಕೆಳಗೆ ಮೂರು ಹಂತದ ವೇದಿಕೆಯಿದೆ, ಅದರ ಮೇಲೆ ಪೀಠ ಮತ್ತು ಸರ್ವ ಲಾಂಛನ ಸಹಿತವಾದ ಕಾಯೋತ್ಸರ್ಗ ಭಂಗಿಯ ಬೃಹತ್ಕಾಯದ ಪಾರ್ಶ್ವಜಿನರ ಸಂಗಮರವರಿ (ಸಂಗಮವರಿ) ವಿಗ್ರಹವನ್ನು ನಿಲ್ಲಿಸಿದೆ. ಅಖಂಡ ಬಿಳಿಯ ಶೀತಲಶಿಲೆಯ ಈ ಪಾರ್ಶ್ವನಾಥ ತಲೆಯ ಹಿಂಭಾಗದಿಂದ ಬಂದು ನೆತ್ತಿಗೆ ಕೊಡ ಹಿಡಿದಂತೆ ಮುಂಚಾಚಿಕೊಂಡಿರುವ ಹಾವಿನ ಒಂಬತ್ತು ಹೆಡೆಗಳು ಬಹುದೂರದವರೆಗೆ ಕಾಣುವಷ್ಟು ದೊಡ್ಡದಾಗಿವೆ.

Deities & Specialities

Purohith

archak

9845107700

  1. [object Object]